Asianet Suvarna News Asianet Suvarna News

ರಾಜಕೀಯ ಬದುಕನ್ನೇ ಪಣಕ್ಕಿಟ್ಟು ಆನಂದ್ ಸಿಂಗ್‌ ಹೋರಾ​ಟ : BSY ಗುಣಗಾನ

  • ತಮ್ಮ ರಾಜಕೀಯ ಬದುಕನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಆನಂದಸಿಂಗ್‌
  •  ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದಾರೆ.
BS Yediyurappa praises Anand singh snr
Author
Bengaluru, First Published Oct 3, 2021, 7:43 AM IST

ಹೊಸಪೇಟೆ (ಅ.03):  ತಮ್ಮ ರಾಜಕೀಯ (Politics) ಬದುಕನ್ನು ಪಣಕ್ಕಿಟ್ಟು ಹೋರಾಟ ನಡೆಸಿದ ಆನಂದಸಿಂಗ್‌ (Anand Singh) ಅವರು ವಿಜಯನಗರ ಜಿಲ್ಲೆಯ ಉದಯಕ್ಕೆ ಕಾರಣರಾಗಿದ್ದಾರೆ. ಅವರ ಬದ್ಧತೆಯ ಫಲವಾಗಿ ಹೊಸ ಜಿಲ್ಲೆಯ ಬಗೆಗಿನ ಅವರ ಕನಸು ಕೊನೆಗೂ ನನಸಾಗಿದೆ. ಸಿಂಗ್‌ರ ನಿರಂತರ ಹೋರಾಟಕ್ಕೆ ಕೊನೆಗೂ ಜಯ ಸಂದಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ (BS Yediyurappa) ಬಣ್ಣಿಸಿದರು.

ವಿಜಯನಗರ (Vijayanagara)-ಬಳ್ಳಾರಿ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ವಿಜಯನಗರ ಜಿಲ್ಲೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಉದಯವಾಯ್ತು ವಿಜಯನಗರ: ಕಲರ್ ಫುಲ್ ಚಿತ್ರಗಳು

ವಿಜಯನಗರ ಜಿಲ್ಲೆಗಾಗಿ ಅನೇಕ ವರ್ಷಗಳಿಂದ ಹೋರಾಟ ಮಾಡಿಕೊಂಡು ಬರಲಾಗಿದೆ. ಆನಂದಸಿಂಗ್‌ ಅವರು ವಿಜಯನಗರ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಕನಸು ಕಂಡವರು. ಹೀಗಾಗಿಯೇ ಛಲ ಬಿಡದೆ ಹೋರಾಟ ನಡೆಸಿ, ಕೊನೆಗೂ ಹೊಸ ಜಿಲ್ಲೆಯ ಅಸ್ತಿತ್ವಕ್ಕೆ ಕಾರಣರಾಗಿದ್ದಾರೆ ಎಂದರಲ್ಲದೆ, ಜಿಲ್ಲೆಯ ವಿಭಜನೆಯಿಂದ ಆಡಳಿತ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಹೆಚ್ಚು ಅನುಕೂಲವಾಗಲಿದೆ.

ವಿಜಯನಗರ ಜಿಲ್ಲೆ ವೈಭವದ ಐತಿಹ್ಯ ಹೊಂದಿದ್ದು, ಆರು ತಾಲೂಕುಗಳನ್ನು ಹೊಂದಿರುವ ಈ ಜಿಲ್ಲೆಯ ಸಮಗ್ರ ಅಭಿವೃದ್ಧಿಯಾಗಬೇಕು ಎಂಬುದು ನಮ್ಮ ಆಶಯವಾಗಿದೆ. ಹೊಸ ಜಿಲ್ಲೆ ಹಲವು ವೈವಿಧ್ಯತೆಯಿಂದ ಕೂಡಿದೆ. ಇಡೀ ನಾಡಿಗೆ ಅನ್ನ ನೀಡುವ ತುಂಗಭದ್ರೆಯ (Tungabhadra) ಕೃಪೆ, ಸಮೃದ್ಧವಾದ ನೀರಾವರಿ ಪ್ರದೇಶ, ಸಂಪತ್‌ಭರಿತ ನೈಸರ್ಗಿಕ ಸಂಪತ್ತು, ಹಂಪಿಯ ಶ್ರೀ ವಿರುಪಾಕ್ಷದೇವರ ಕೃಪಾಶೀರ್ವಾದದ ಹಿನ್ನೆಲೆ ಈ ಜಿಲ್ಲೆಗಿದೆ.

ಹೊಸ ಜಿಲ್ಲೆಯ ಪ್ರಗತಿಗಾಗಿ ಈಗಾಗಲೇ ಸಾವಿರಾರು ಕೋಟಿ ರು.ಗಳ ಅನುದಾನವನ್ನು ತಂದಿರುವ ಆನಂದಸಿಂಗ್‌ ಅವರು ನೂತನ ವಿಜಯನಗರವನ್ನು ಇಡೀ ರಾಜ್ಯದಲ್ಲಿ ಮಾದರಿಯನ್ನಾಗಿಸಲಿದ್ದಾರೆ ಎಂಬ ವಿಶ್ವಾಸ ನಮಗಿದೆ. ಸರ್ಕಾರದ ಎಲ್ಲ ಸಚಿವರು ಈ ಜಿಲ್ಲೆಯ ಪ್ರಗತಿಗೆ ಕೈ ಜೋಡಿಸಲಿದ್ದಾರೆ ಎಂದು ಬಿಎಸ್‌ವೈ ತಿಳಿಸಿದರು.

ಉಜ್ಜಯಿನಿಯ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು, ಡಾ. ಸಂಗನಬಸವಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು.

ರಾಜ್ಯದ 31ನೇ ಜಿಲ್ಲೆ ವಿಜಯನಗರ

ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಜಿಲ್ಲಾ ಕೇಂದ್ರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಜಿಲ್ಲೆಯನ್ನು ಇಂದು (ಅ.02) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ ಯಡಿಯೂರಪ್ಪ ಉದ್ಘಾಟಿಸಿದರು. 

Follow Us:
Download App:
  • android
  • ios