Asianet Suvarna News Asianet Suvarna News

ಬೆಂಗಳೂರಿನ 48 ಶಾಲೆಗಳಿಗೆ ಬಾಂಬ್​ ಬೆದರಿಕೆ, ಯಾವೆಲ್ಲ ಸ್ಕೂಲ್ ಪಟ್ಟಿ ಇಲ್ಲಿದೆ

ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಈಮೇಲ್  ಬಂದಿರುವುದು ಪೋಷಕರಿಗೆ ಆತಂಕ ಹೆಚ್ಚಿಸಿದೆ. ಇಲ್ಲಿ ಬೆದರಿಕೆ ಬಂದಿರುವ ಶಾಲಾ ಪಟ್ಟಿಗಳನ್ನು ನೀಡಲಾಗಿದೆ. 

Bomb threat to many schools in bengaluru here is the list of all the schools gow
Author
First Published Dec 1, 2023, 11:45 AM IST

ಬೆಂಗಳೂರು (ಡಿ.1): ಬೆಂಗಳೂರಿನ ಶಾಲೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಈಮೇಲ್  ಬಂದಿರುವುದು ಪೋಷಕರಿಗೆ ಆತಂಕ ಹೆಚ್ಚಿಸಿದೆ. ಸುರಕ್ಷತಾ ದೃಷ್ಟಿಯಿಂದ ಶಾಲಾ ಆಡಳಿತ ಮಂಡಳಿ ಮಕ್ಕಳನ್ನು ಮನೆಗೆ ಕಳುಹಿಸುತ್ತಿದೆ. ಕೆಲ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇಲ್ಲಿ ಬೆದರಿಕೆ ಬಂದಿರುವ ಶಾಲಾ ಪಟ್ಟಿಗಳನ್ನು ನೀಡಲಾಗಿದೆ.

ನ್ಯಾಫೆಲ್​​ ಶಾಲೆ, ಬಸವೇಶ್ವರ ನಗರ
ನೀವ್​ ಅಕಾಡೆಮಿ, ಸದಾಶಿವನಗರ
ನೀವ್​ ಅಕಾಡೆಮಿ, ಕೋರಮಂಗಲ
ನೀವ್​ ಅಕಾಡೆಮಿ, ವೈಟ್​ಫೀಲ್ಡ್​
ಗ್ಲೋಬಲ್​ ಇಂಟರ್​ನ್ಯಾಷನಲ್​, ಬನ್ನೇರುಘಟ್ಟ
ಗ್ರೀನ್​ಹುಡ್​ ಶಾಲೆ, ಬನ್ನೇರುಘಟ್ಟ
ಸಿಂಗೇನ ಅಗ್ರಹಾರ, ಎಬೆನೈಜರ್​ ಅಕಾಡೆಮಿ
ದೊಮ್ಮಸಂದ್ರ, ಇನ್ವೆಂಚರ್​ ಇಂಟರ್​ ನ್ಯಾಷನಲ್​
ವಾಣಿ ವಿದ್ಯಾಕೇಂದ್ರ, ಬಸವೇಶ್ವರ ನಗರ
ಚಿತ್ರಕೂಟ ಕೇಂದ್ರ, ನಾಗದೇವನಹಳ್ಳಿ
ಭವನ್​ ಪ್ರೆಸ್ ಸ್ಕೂಲ್​​​​, ಚಾಮರಾಜಪೇಟೆ  
ವಿದ್ಯಾಶಿಲ್ಪ ಶಾಲೆ, ಬಸವೇಶ್ವರ ನಗರ
ಚಿತ್ರಕೂಟ ಶಾಲೆ, ಕೆಂಗೇರಿ
ಪೂರ್ಣಪ್ರಜ್ಞಾ ಸೊಸೈಟಿ, ಸದಾಶಿವನಗರ

ಯಾವ ವಯಲದಲ್ಲಿ ಎಷ್ಟು ಶಾಲೆಗಳಿಗೆ ಬೆದರಿಕೆ? 
ಬೆಂಗಳೂರಿನ ಉತ್ತರ ವಲಯ -1ರಲ್ಲಿ 4 ಶಾಲೆಗೆ ಬೆದರಿಕೆ 
ಬೆಂಗಳೂರಿನ ಉತ್ತರ ವಲಯ – 2ರಲ್ಲಿ 2 ಶಾಲೆಗಳಿಗೆ ಬೆದರಿಕೆ 
ಬೆಂಗಳೂರಿನ ಉತ್ತರ ವಲಯ -4ರಲ್ಲಿ 01 ಶಾಲೆಗೆ ಬೆದರಿಕೆ 
ಬೆಂಗಳೂರಿನ ದಕ್ಷಿಣ ವಲಯ – 1ರಲ್ಲಿ 15 ಶಾಲೆಗಳಿಗೆ ಬೆದರಿಕೆ 
ಬೆಂಗಳೂರಿನ ದಕ್ಷಿಣ ವಲಯ – 2ರಲ್ಲಿ  3 ಶಾಲೆಗೆ ಬೆದರಿಕೆ 
ಬೆಂಗಳೂರಿನ ದಕ್ಷಿಣ ವಲಯ – 3ರಲ್ಲಿ 10 ಶಾಲೆಗಳಿಗೆ ಬೆದರಿಕೆ 
ಬೆಂಗಳೂರಿನ ದಕ್ಷಿಣ ವಲಯ 4ರಲ್ಲಿ  4 ಶಾಲೆಗಳಿಗೆ ಬೆದರಿಕೆ 

ಬನ್ನೇರುಘಟ್ಟದ 7 ಶಾಲೆಗಳಿಗೆ ಬಾಂಬ್ ಬೆದರಿಕೆ 
 ಗ್ರೀನ್ ಹುಡ್ ಹೈಸ್ಕೂಲ್,
ದಿನ್ನೇಪಾಳ್ಯ
ಗ್ಲೋಬಲ್ ಇಂಟರ್ನ್ಯಾಷನಲ್ ಶಾಲೆ
ರಾಯನ್ ಇಂಟರ್ನ್ಯಾಷನಲ್ ಶಾಲೆ
ಆಲ್ ಬಷೀರ್ ಶಾಲೆ
ದೀಕ್ಷಾ ಹೈಟ್‌ ಶಾಲೆ
ಕಾಂಡರ್ ಇಂಟರ್ನ್ಯಾಷನಲ್ ಶಾಲೆ
ಬಿವಿಎಂ ಗ್ಲೋಬಲ್ ಶಾಲೆ

ಹೆಬ್ಬಗೋಡಿಯ ನಾಲ್ಕು ಶಾಲೆಗಳಿಗೆ ಹುಸಿಬಾಂಬ್ 
ಡಿವೈನ್ ಇಂಟರ್ನ್ಯಾಷನಲ್ ಶಾಲೆ
ಟ್ರೀಮೈಸ್‌ ಇಂಟರ್ನ್ಯಾಷನಲ್ ಶಾಲೆ
ಫ್ಲಾರೆನ್ಸ್ ಇಂಟರ್ನ್ಯಾಷನಲ್ ಶಾಲೆ
ಎಬೆನ್ಸರ್ ಇಂಟರ್ನ್ಯಾಷನಲ್ ಶಾಲೆ

ಸರ್ಜಾಪುರದ ಐದು ಶಾಲೆಗಳಿಗೆ ಬಾಂಬ್ ಬೆದರಿಕೆ 
ಗ್ರೀನ್ ಹುಡ್ ಇಂಟರ್ನ್ಯಾಷನಲ್ ಹೈಸ್ಕೂಲ್
ಗ್ಲೋಬಲ್ ಇಂಡಿಯನ್ ಇಂಟರ್ನ್ಯಾಷನಲ್ ಶಾಲೆ
ಓಕರಿಡ್ಜ್ ಶಾಲೆ
ಟಿ ಐ ಎಸ್ ಬಿ ಶಾಲೆ
ಇನ್ವೆಂಚರ್ ಅಕಾಡೆಮಿ 

ಜಿಗಣಿಯ ಎರಡು ಶಾಲೆಗಳಿಗೆ ಹುಸಿ ಬಾಂಬ್ 
ಅಚೀವರ್ಸ್ ಅಕಾಡೆಮಿ
ಎನ್ಡೆವರ್ಸ್ ಅಕಾಡೆಮಿ

ಒಟ್ಟು 48 ಖಾಸಗಿ ಶಾಲೆಗಳ ಇಮೇಲ್​ಗೆ ಬಾಂಬ್​ ಬೆದರಿಕೆ ಬಂದಿದೆ

BREAKING ಬೆಂಗಳೂರಿನ 15 ಶಾಲೆಗಳಿಗೆ ಬಾಂಬ್ ಬೆದರಿಕೆ, ಮಕ್ಕಳನ್ನು ವಾಪಸ್‌ ಕಳಿಸುವಂತೆ ಪೊಷಕರ ಕಣ್ಣೀರು

ಇನ್ನು ವಿಷಯ ತಿಳಿದ ತಕ್ಷಣ ಡಿಸಿಎಂ ಡಿಕೆ ಶಿವಕುಮಾರ್‌ ತಮ್ಮ ಮನೆಯ ಸಮೀಪದ ಸ್ಕೂಲ್‌ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಾನು ಮನೆಯಲ್ಲಿ ಟ್ರೆಡ್‌ಮಿಲ್ ಮಾಡ್ತಿದ್ದೆ. ಟಿವಿಯಲ್ಲಿ ನ್ಯೂಸ್ ನೋಡಿದೆ. ನಮ್ಮ ಮನೆ ಎದುರಿನ ಶಾಲೆ ಅಂತ ಬರ್ತಿತ್ತು, ನೋಡಿ ಗಾಬರಿ ಆಯ್ತು. ತಕ್ಷಣ ಬಂದು ಪೊಲೀಸರ ಜತೆ ಮಾತನಾಡಿದೆ. ಇಮೇಲ್ ಮೂಲಕ‌ ಮೆಸೇಜ್ ಬಂದಿದೆ. ಹೀಗಾಗಿ ಪೊಲೀಸರು ಚೆಕ್ ಮಾಡಿದ್ದಾರೆ. ಮೇಲ್ಕೋಟಕ್ಕೆ ಇದು ಫೇಕ್ ಅಂತ ಕಾಣುತ್ತಿದೆ. ಕೆಲವು ಕಿಡಿಗೇಡಿಗಳು ಈ ರೀತಿ ಮಾಡ್ತಿರ್ತಾರೆ. ಆದರೆ ಅದನ್ನ ನಾವು ನಿರ್ಲಕ್ಷ್ಯ ಮಾಡೋದಕ್ಕೆ ಆಗಲ್ಲ. ಪದೇ ಪದೇ ಈ ರೀತಿ ಒಮ್ಮೆ ಸೀರಿಯಸ್ ಅಟೆಂಪ್ಟ್ ಮಾಡ್ತಾರೆ. ಹಾಗಾಗಿ ಯಾವುದನ್ನೂ ನಿರ್ಲಕ್ಷ್ಯ ಮಾಡಬಾರದು. ಪೊಲೀಸರು ಎಲ್ಲಾ ಪರಶೀಲನೆ‌ ನಡೆಸಿದ್ದಾರೆ. ನಮ್ಮ ಸೈಬರ್ ಕ್ರೈಂ ಪೊಲೀಸರು ಸಮರ್ಥರಿದ್ದಾರೆ ಯಾರು ಅಂತ ಪತ್ತೆ ಮಾಡ್ತಾರೆ. ಬೆಂಗಳೂರು ಹಬ್ಬ ಆಚರಣೆ ವೇಳೆ ಈ ರೀತಿ ಬೆದರಿಕೆ ವಿಚಾರ. ಹಬ್ಬ ಮಾಡೋರು ಮಾಡಬೇಕು, ಊಟ ಮಾಡೋರು ಮಾಡಬೇಕು. ಕೆಲವರು ಕಿಡಿಗೇಡಿಗಳು ಈ ರೀತಿ ಮಾಡ್ತಾರೆ ಆದರೆ ನಾವು ನಿರ್ಲಕ್ಷ್ಯ ಮಾಡಬಾರದು ಅಷ್ಟೇ ಎಂದಿದ್ದಾರೆ.

 

ಇನ್ನು ಶಾಲೆಗಳಲ್ಲಿ ಬಾಂಬ್ ಬೆದರಿಕೆ ಪ್ರಕರಣದ ಕುರಿತು ಗೃಹ ಸಚಿವರಾದ ಡಾ. ಜಿ.ಪರಮೇಶ್ವರ್ ಅವರು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಬಿ.ದಯಾನಂದ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಕರೆ ಮಾಡಿ ಮಾಹಿತಿ ಪಡೆದರು. ಬೆದರಿಕೆ ಕರೆ ಬಂದಿರುವ ಎಲ್ಲ ಕಡೆ ಸಿಐಡಿ ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಎಲ್ಲ ಸ್ಕ್ವೈಡ್‌ಗಳನ್ನು ಕಳುಹಿಸಿ ತಪಾಸಣೆ ನಡೆಸಬೇಕು. ಕಟ್ಟೆಚ್ಚರಿಕೆ ವಹಿಸುವಂತೆ ನಿರ್ದೇಶಿಸಿದರು.

 

Follow Us:
Download App:
  • android
  • ios