ಲಾಕ್‌ಡೌನ್ ಸಡಿಲಕೆ ಬೆನ್ನಲ್ಲೇ ಬಿಎಂಟಿಸಿಗೆ ಆಘಾತ: ಕೆಲಸಕ್ಕೆ ಹಾಜರಾಗದ ಸಿಬ್ಬಂದಿ
ಕೊರೊನಾ ಭೀತಿಯಿಂದ ಕರ್ತವ್ಯಕ್ಕೆ ಹಾಜರಾಗದ ಬಿಎಂಟಿಸಿ ಸಿಬ್ಬಂದಿ| ಕೊರೋನಾ ಭಯದಿಂದ ಕೆಲಸಕ್ಕೆ ಬರಲು ಸಿಬ್ಬಂದಿ ಹಿಂದೇಟು| ಎಲ್ಲಾ ಬಸ್‌ಗಳನ್ನ ಕಾರ್ಯಾಚರಣೆ ಮಾಡಬೇಕು ಕರ್ತವ್ಯಕ್ಕೆ ಬನ್ನಿ ಅಂತ ಸಂದೇಶ ನೀಡಿದ್ರೂ ಬರದ ಚಾಲಕರು, ನಿರ್ವಾಹಕರು| ಬೆಂಗಳೂರಿನಲ್ಲಿ ಅರ್ಧದಷ್ಟು ಬಸ್ ಓಡಿಸೋಕೆ ಬಿಎಂಟಿಸಿ ಬಳಿ ಸಿಬ್ಬಂದಿಯೇ ಇಲ್ಲದಂತಾಗಿದೆ|
ಬೆಂಗಳೂರು(ಮೇ.27): ಕೊರೋನಾ ಆತಂಕದ ಮದ್ಯೆಯೇ ರಾಜ್ಯ ಸರ್ಕಾರ ಸಾರಿಗೆ ಬಸ್ ಸಂಚಾರವನ್ನ ಆರಂಭಿಸಿದೆ. ಆದರೆ, ವೈರಸ್ ಭಯದಿಂದ ಬಿಎಂಟಿಸಿ ಸಿಬ್ಬಂದಿ ಮಾತ್ರ ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಇದೀಗ ಬೆಂಗಳೂರಿನಲ್ಲಿ ಬಸ್ ಓಡಿಸಲು ಸಿಬ್ಬಂದಿ ಸಮಸ್ಯೆ ಎದುರಾಗಿದೆ.
"
ಲಾಕ್‌ಡೌನ್ ಸಡಿಲಿಕೆಯಾದ್ರೂ ಸಾರಿಗೆ ಸಿಬ್ಬಂದಿ ಮಾತ್ರ ತಮ್ಮ ತಮ್ಮ ಊರು ಬಿಟ್ಟು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಈ ಮೂಲಕ ಬಿಎಂಟಿಸಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಎಂಟಿಸಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅರ್ಧದಷ್ಟು ಸಿಬ್ಬಂದಿ ಉತ್ತರ ಕರ್ನಾಟಕದ ಮೂಲದವರಾಗಿದ್ದಾರೆ.
ಸಾಮಾಜಿಕ ಅಂತರವಿಲ್ಲ: BMTC ಬಸ್ ಹತ್ತಲು ಜನರ ನೂಕು ನುಗ್ಗಲು..!
ಕರ್ತವ್ಯಕ್ಕ ಎಲ್ಲ ಸಿಬ್ಬಂದಿ ಹಾಜರಾಗಿ ಅಂತ ಸೂಚನೆ ನೀಡಿದ್ರೂ ಕೂಡ ಕೆಲವು ಸಿಬ್ಬಂದಿ ಮಾತ್ರ ಕೆಲಸಕ್ಕೆ ಹಾಜರಾಗಿಲ್ಲ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿಗೆ ಸಂಬಳ ಹಾಕುವುದಿಲ್ಲ ಅಂತ ಬಿಎಂಟಿಸಿ ಎಚ್ಚರಿಕೆ ನೀಡಿದೆ.ಆದರೂ ಕೂಡ ಸಿಬ್ಬಂದಿ ಬೆಂಗಳೂರಿನ ಕಡೆಗೆ ಮುಖಮಾಡುತ್ತಿಲ್ಲ.
ಬೆಂಗಳೂರಿನಲ್ಲಿ ಅರ್ಧದಷ್ಟು ಬಸ್ ಓಡಿಸೋಕೆ ಬಿಎಂಟಿಸಿ ಬಳಿ ಸಿಬ್ಬಂದಿಯೇ ಇಲ್ಲದಂತಾಗಿದೆ. ಬಿಎಂಟಿಸಿ ಡಿಪೋಗಳಿಂದ ಕೆಲಸಕ್ಕೆ ಹಾಜಾಗುವಂತೆ ಸಿಬ್ಬಂದಿಗೆ ಒತ್ತಡ ಹಾಕಲಾಗುತ್ತಿದೆ. ಚಾಲಕರು, ನಿರ್ವಾಹಕರು ಕೆಲಸಕ್ಕೆ ಹಾಜರ್ ಆಗದಿದ್ದರೆ ಬೆಂಗಳೂರಿನ್ಲಲಿ ಬಸ್ ಓಡೋದೆ ಅನುಮಾನ ವ್ಯಕ್ತವಾಗುತ್ತಿದೆ.