Karnataka Politics: ಬಿಜೆಪಿ ಎಂದೂ ಗೆಲ್ಲದ ಕ್ಷೇತ್ರ ಗೆಲ್ಲೋಣ: ಸಿಎಂ ಬೊಮ್ಮಾಯಿ

ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಕಾರ್ಯದಲ್ಲಿ ಭಾಗಿಯಾದ ರಾಜ್ಯದ ಕೇಂದ್ರದ ಸಚಿವರು ಹಾಗೂ ಕಾರ್ಯಕರ್ತರ ಅನುಭವ ಬಳಸಿಕೊಂಡು ಮುಂದಿನ ವರ್ಷ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

BJP Will Return to Power in Karnataka on its own in 2023 Polls CM Basavaraj Bommai gvd

ಬೆಂಗಳೂರು (ಮಾ.14): ಇತ್ತೀಚೆಗೆ ನಡೆದ ಪಂಚರಾಜ್ಯಗಳ ಚುನಾವಣೆ ಕಾರ್ಯದಲ್ಲಿ ಭಾಗಿಯಾದ ರಾಜ್ಯದ ಕೇಂದ್ರದ ಸಚಿವರು ಹಾಗೂ ಕಾರ್ಯಕರ್ತರ ಅನುಭವ ಬಳಸಿಕೊಂಡು ಮುಂದಿನ ವರ್ಷ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಈವರೆಗೆ ಗೆಲುವು ಸಾಧಿಸಲು ಆಗದ ಕ್ಷೇತ್ರಗಳಲ್ಲಿ ವಿಜಯಪತಾಕೆ ಹಾರಿಸಿ ಬಿಜೆಪಿಯನ್ನು (BJP) ಮತ್ತೆ ಅಧಿಕಾರಕ್ಕೆ ತರೋಣ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಕರೆ ನೀಡಿದ್ದಾರೆ.

ಪಂಚರಾಜ್ಯಗಳ ಚುನಾವಣೆಯ ಉಸ್ತುವಾರಿ ವಹಿಸುವ ಮೂಲಕ ಗೆಲುವಿಗೆ ಪ್ರಮುಖ ಪಾತ್ರ ನಿರ್ವಹಿಸಿದ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ (Pralhad Joshi), ಶೋಭಾ ಕರಂದ್ಲಾಜೆ (Shobha Karandlaje), ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ (CT Ravi) ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಅವರನ್ನು ಭಾನುವಾರ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಅಭಿನಂದಿಸಿ ಮಾತನಾಡಿದರು.

ಪಂಚರಾಜ್ಯಗಳ ಚುನಾವಣೆಗೆ ಶ್ರಮಿಸಿದ ರಾಜ್ಯದ ಸಚಿವರು ಮತ್ತು ಕಾರ್ಯಕರ್ತರು ಪಡೆದ ಅನುಭವ, ಚುನಾವಣಾ ಕಾರ್ಯತಂತ್ರಗಳನ್ನು ಬಳಸಿಕೊಂಡು ಮುಂದಿನ ವರ್ಷ ರಾಜ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖವಾಗಿ ಈವರೆಗೂ ರಾಜ್ಯದಲ್ಲಿ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅರಳಿಸಬೇಕಾಗಿದೆ. ಜೊತೆಗೆ ಪಕ್ಷದ ಸಿದ್ಧಾಂತ, ಮೋದಿ ನಾಯಕತ್ವ, ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಮುಂದಿಟ್ಟುಕೊಂಡು ಮತ್ತೆ ಕರ್ನಾಟಕದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ಏರಿಸೋಣ ಎಂದು ಸಂಕಲ್ಪ ಮಾಡಿದರು.

Karnataka Politics: ವಿಜಯೇಂದ್ರಗೆ ದೊಡ್ಡ ಹುದ್ದೆಯೋ, ಮಂತ್ರಿಗಿರಿಯೋ?

ಪಂಚರಾಜ್ಯದ ಚುನಾವಣೆಯಲ್ಲಿ ಬಿಜೆಪಿ ದೊಡ್ಡ ಪ್ರಮಾಣದ ಗೆಲುವು ಸಾಧಿಸಿರುವುದರಿಂದ ದೇಶದ ಜನರು ಪ್ರಧಾನಿ ಮೋದಿ ಅವರ ಆಶೋತ್ತರಗಳನ್ನು ಒಪ್ಪಿಕೊಂಡಿರುವುದು ಸ್ಪಷ್ಟವಾಗಿದೆ. ಚುನಾವಣೆಗಳಲ್ಲಿ ಇದ್ದ ಜಾತಿವಾದವನ್ನು ನೀತಿವಾದದಿಂದ ತೊಲಗಿಸಲಾಗಿದೆ. ಜನರು ರಾಷ್ಟ್ರವಾದಿಗಳು, ಹಿಂದುತ್ವವನ್ನು ಒಪ್ಪಿಕೊಂಡಿದ್ದಾರೆ ಎಂಬುದು ಸಾಬೀತಾಗಿದೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಮಾತನಾಡಿ, ರಾಷ್ಟ್ರೀಯ ನಾಯಕತ್ವವು ಕರ್ನಾಟಕ ಕಾರ್ಯಕರ್ತರ ಮೇಲೆ ವಿಶ್ವಾಸ ಹೊಂದಿದೆ. ಅದಕ್ಕೆ ತಕ್ಕಂತೆ ರಾಜ್ಯದ ಕೇಂದ್ರ ಸಚಿವರು, ಕಾರ್ಯಕರ್ತರು ನಾಲ್ಕು ರಾಜ್ಯಗಳಲ್ಲಿ ದಿಗ್ವಿಜಯ ಯಾತ್ರೆ ಮುಗಿಸಿಕೊಂಡು ಬಂದಿದ್ದಾರೆ. ಮುಂದಿನ ಗುರಿ ಕರ್ನಾಟಕವಾಗಿದ್ದು, ಸಂಘಟನಾತ್ಮಕ ಹೋರಾಟದ ಮೂಲಕ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣಾ ಸಮಯದ ಹಿಂದುಗಳಲ್ಲ: ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನೂ ಪಕ್ಷದ ಮಾಲೀಕ ಎಂಬುದನ್ನು ಅರ್ಥ ಮಾಡಿಸಿದೆವು. ಒಂದು ವೇಳೆ ಪಕ್ಷ ಸೋತರೆ ತುಕಡೆ ಗ್ಯಾಂಗ್‌ಗಳು ಎದ್ದು ಕುಳಿತುಕೊಳ್ಳುತ್ತವೆ ಎಂಬುದನ್ನು ಮನವರಿಕೆ ಮಾಡಿವೆವು. ಉತ್ತರಪ್ರದೇಶದಲ್ಲಿ ಎರಡನೇ ಬಾರಿ ಅಧಿಕಾರಕ್ಕೇರುವ ಮೂಲಕ ನಾವು ಚುನಾವಣೆ ಸಮಯದ ಹಿಂದುಗಳಲ್ಲ, ಹಿಂದುತ್ವ ವಿಚಾರದ ಮೇಲೆ ನಂಬಿಕೆ ಹೊಂದಿರುವ ಹಿಂದುಗಳು ಎಂಬುದು ಸ್ಪಷ್ಟವಾಗಿದೆ ಎಂದರು.

ಸಚಿವರಾದ ವಿ.ಸೋಮಣ್ಣ, ಮುನಿರತ್ನ, ಸಂಸದ ಪಿ.ಸಿ.ಮೋಹನ್‌, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಅರುಣ್‌ ಕುಮಾರ್‌, ರಾಜ್ಯ ಉಪಾಧ್ಯಕ್ಷ ನಿರ್ಮಲ… ಕುಮಾರ್‌ ಸುರಾನಾ, ಎನ್‌.ರವಿಕುಮಾರ್‌, ಮಹೇಶ್‌ ಟೆಂಗಿನಕಾಯಿ, ಎಸ್‌.ಸಿ.ಮೋರ್ಚಾ ರಾಜ್ಯಾಧ್ಯಕ್ಷರಾದ ಛಲವಾದಿ ನಾರಾಯಣಸ್ವಾಮಿ ಉಪಸ್ಥಿತರಿದ್ದರು.

ರಾತ್ರೋರಾತ್ರಿ ಪರಿಹಾರ- ಜೋಶಿ: ಉತ್ತರಾಖಂಡ ರಾಜ್ಯದಲ್ಲಿ ನಮ್ಮ ಪಕ್ಷ ಅಧಿಕಾರದಲ್ಲಿದ್ದರೂ ನಮ್ಮವರೇ ಈ ಬಾರಿ ಕಾಂಗ್ರೆಸ್‌ ಎಂದು ಹೇಳುತ್ತಿದ್ದರು. ಅದರಲ್ಲೂ ನಾಟಕೀಯ ವರ್ತನೆ ಇದ್ದ ಕೆಲ ಹಿರಿಯ ಸಚಿವರು, ಶಾಸಕರು ಸಭೆಗಳಿಗೆ ಗೈರಾಗುತ್ತಿದ್ದರು. ಪಕ್ಷದ ವಿರುದ್ಧ ನಡೆಯುತ್ತಿದ್ದರನ್ನು ರಾತ್ರೋ ರಾತ್ರಿ ಸಚಿವ ಸ್ಥಾನದಿಂದ ತೆಗೆಸಿ, ಪಕ್ಷದಿಂದಲೇ ಉಚ್ಚಾಟಿಸಿ ಆಂತರಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಯಿತು ಎಂದು ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ ತಿಳಿಸಿದರು.

ಯಡಿಯೂರಪ್ಪಗೆ ವಯಸ್ಸಾಗಿದೆ ಎನ್ನುತ್ತಲೇ ಬೊಮ್ಮಾಯಿಗೂ ಟಾಂಗ್ ಕೊಟ್ಟ ಬಿಜೆಪಿ ಶಾಸಕ

ಉತ್ತರ ಭಾರತದಲ್ಲಿ ಚುನಾವಣೆ ಎಂದರೆ ಜಾತಿ, ಧರ್ಮ ಆಧಾರಿತ ಎಂಬ ಕಲ್ಪನೆ ಇತ್ತು. ಈ ಬಾರಿಯದ್ದು ಕೇವಲ ಅಭಿವೃದ್ಧಿ ಆಧಾರದಲ್ಲಿ ನಡೆದ ಮೊದಲ ಚುನಾವಣೆಯಾಗಿತ್ತು. ಎಲ್ಲಿಯೇ ಹೋದರೂ ಮೋದಿಜೀ-ಯೋಗಿಜೀ ಉಪ್ಪು ತಿಂದಿದ್ದೇವೆ ಎನ್ನುತ್ತಿದ್ದರು. ಒಳ್ಳೆಯ ಅಭಿವೃದ್ಧಿ ಕೆಲಸ ಮಾಡಿದರೆ ಜನ ಕೈಹಿಡಿಯುತ್ತಾರೆ ಎಂಬ ವಿಶ್ವಾಸ ಬಂದಿದೆ.
-ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ

ಕರ್ನಾಟಕದಲ್ಲಿ ಚುನಾವಣೆಗೆ ಇನ್ನೂ ಒಂದು ವರ್ಷ ಸಮಯ ಇದೆ. ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರ ಅವಧಿಯ ಉತ್ತಮ ಕಾರ್ಯಕ್ರಮ, ಅಭಿವೃದ್ಧಿ ಕಾರ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಈ ಮೂಲಕ ರಾಜ್ಯದ ಚುನಾವಣೆಯಲ್ಲಿ ಯಶಸ್ವಿಯಾಗಿ ಗೆಲ್ಲುತ್ತೇವೆ ಎಂಬ ವಿಶ್ವಾಸವಿದೆ.
-ಪ್ರಹ್ಲಾದ್‌ ಜೋಶಿ, ಕೇಂದ್ರ ಸಚಿವ

Latest Videos
Follow Us:
Download App:
  • android
  • ios