ಸಸ್ಪೆಂಡ್‌ ಆದ ಪೇದೆಗೆ ಸಿಎಂ ಪದಕ: ವಿಜಯೇಂದ್ರ ಆಕ್ರೋಶ

ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತ. ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಾಗಿರುವುದೇ ಈತನ ಅರ್ಹತೆಯಾಗಿರುವಂತಿದೆ. ಇಂತಹ ಪೇದೆಯ ಹೆಸರು ಪದಕ ಪಟ್ಟಿಯಲ್ಲಿರುವುದು ಗೃಹ ಇಲಾಖೆ ಅಧಃಪತನಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂ

bjp state president by vijayendra outrage for CM medal for suspended constable grg

ಬೆಂಗಳೂರು(ಆ.16):  ಸ್ವಾತಂತ್ರೋತ್ಸವದ ವೇಳೆ ಕೊಡಮಾಡುವ 'ಸಿಎಂ ಪದಕ' ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಾದ ಪೊಲೀಸ್ ಪೇದೆಯ ಹೆಸರು ಪ್ರಕಟವಾಗಿರುವುದು ಗೃಹ ಇಲಾಖೆಯ ಅಧಃಪತನಕ್ಕೆ ನಿದರ್ಶನವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸ್ ಪೇದೆ ಅಮಾನತು ಆದೇಶದ ಪ್ರತಿಯನ್ನು ತಮ್ಮ 'ಎಕ್ಸ್' ಖಾತೆಯಲ್ಲಿ ಹಂಚಿಕೊಂಡು ಪೋಸ್ಟ್ ಹಾಕಿರುವ ವಿಜಯೇಂದ್ರ, ಕೆಲ ನಾಮಧೇಯಗಳನ್ನು ಕಂಡರೆ ಕಾಂಗ್ರೆಸ್ ಸರ್ಕಾರ ಕಣ್ಣು ಮುಚ್ಚಿಕೊಳ್ಳುತ್ತದೆ. ಅಪರಾಧಿಯಾಗಿದ್ದರೂ ಸರಿ, ಕೊನೆಗೆ ಭಯೋತ್ಪಾದಕರಾದರೂ ಸರಿ, ಅವರ ಬಗೆಗಿನ ಕಾಳಜಿಯಲ್ಲಿ ರಾಜೀಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎನ್ನುವುದನ್ನು ಸಾಬೀತುಪಡಿಸುವ ರೀತಿಯಲ್ಲಿ ಸ್ವಾತಂತ್ರೋತ್ಸವದ ವೇಳೆ ಕೊಡಮಾಡುವ ಸಿಎಂ ಪದಕ ಪಟ್ಟಿಯಲ್ಲಿ ಮೈಸೂರಿನ ಅಮಾನತ್ತಿಗೊಳಗಾದ ಪೊಲೀಸ್‌ ಪೇದೆಯೊಬ್ಬರ ಹೆಸರು ಪ್ರಕಟವಾಗಿದೆ ಎಂದು ಕಿಡಿಕಾರಿದ್ದಾರೆ.

ಸಂಘ, ವರಿಷ್ಠರ ಮಧ್ಯಸ್ಥಿಕೇಲಿ ವಿಜಯೇಂದ್ರ ಜೊತೆಗೆ ಮಾತುಕತೆ ಸಿದ್ಧ: ಯತ್ನಾಳ್‌

ಸಲೀಂ ಪಾಷಾ ಎಂಬ ಪೇದೆ ಪದಕ ಪಟ್ಟಿಗೆ ಸೇರ್ಪಡೆಗೊಂಡ ಅದೃಷ್ಟವಂತ. ಅಪರಾಧಿಗಳೊಂದಿಗೆ ಕೈಜೋಡಿಸಿ ಕಳ್ಳತನಗಳಿಗೆ ನೆರವಾಗುತ್ತಿದ್ದ ಹಾಗೂ ಇಲಾಖೆಯ ದಾಖಲೆಗಳನ್ನು ಸೋರಿಕೆ ಮಾಡುವ ವಿದ್ರೋಹ ಕೃತ್ಯದ ಆರೋಪದ ಮೇಲೆ ಅಮಾನತಾಗಿರುವುದೇ ಈತನ ಅರ್ಹತೆಯಾಗಿರುವಂತಿದೆ. ಇಂತಹ ಪೇದೆಯ ಹೆಸರು ಪದಕ ಪಟ್ಟಿಯಲ್ಲಿರುವುದು ಗೃಹ ಇಲಾಖೆ ಅಧಃಪತನಕ್ಕೆ ನಿದರ್ಶನವಾಗಿದೆ ಎಂದು ಟೀಕಿಸಿದ್ದಾರೆ.

Latest Videos
Follow Us:
Download App:
  • android
  • ios