ನವದೆಹಲಿ[ಜ17]: ಕಳೆದ ವರ್ಷ ಮೇನಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 122 ಕೋಟಿ ರು.ಗಿಂತಲೂ ಅಧಿಕ ವೆಚ್ಚ ಮಾಡಿದೆ. ಇದರಲ್ಲಿ 84 ಕೋಟಿ ರು.ಗಳನ್ನು ಮಾಧ್ಯಮ ಮತ್ತು ಪ್ರಚಾರಕ್ಕಾಗಿ ಪಕ್ಷ ಖರ್ಚು ಮಾಡಿದೆ.

2018ರ ಮೇನಲ್ಲಿ ನಡೆದ ವಿಧಾನಸಭಾ ಚುನಾವಣೆಯ ಖರ್ಚು ವೆಚ್ಚಗಳ ವಿವರವನ್ನು ಬಿಜೆಪಿ ಇತ್ತೀಚೆಗೆ ಚುನಾವಣಾ ಆಯೋಗಕ್ಕೆ ಸಲ್ಲಿಸಿದ್ದು, ಒಟ್ಟಾರೆಯಾಗಿ 122.68 ಕೋಟಿ ರು. ಖರ್ಚು ಮಾಡಿರುವುದಾಗಿ ತಿಳಿಸಿದೆ. ಈ ಪೈಕಿ ಮುದ್ರಣ ಮತ್ತು ಟೀವಿ ಮಾಧ್ಯಮ, ಕೇಬಲ್‌, ವೆಬ್‌ಸೈಟ್‌, ಸಾಮೂಹಿಕ ಎಸ್‌ಎಂಎಸ್‌ಗಳು ಮತ್ತು ಪಕ್ಷದ ಪ್ರಚಾರಕ್ಕಾಗಿ 84 ಕೋಟಿ ರು. ವೆಚ್ಚ ಮಾಡಲಾಗಿದೆ.

ಸ್ಟಾರ್‌ ಪ್ರಚಾರಕರ ಪ್ರಯಾಣಕ್ಕಾಗಿ 16 ಕೋಟಿ ರು. ವೆಚ್ಚ ಮಾಡಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.