Asianet Suvarna News Asianet Suvarna News

BJ Puttaswamy: ರಾಜಕೀಯ ತ್ಯಜಿಸಿ ಮಠಾಧೀಶರಾಗಲಿದ್ದಾರೆ ಬಿಎಸ್.ಯಡಿಯೂರಪ್ಪ ಪರಮಾಪ್ತ!

ಮಾಜಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪುಟ್ಟಸ್ವಾಮಿ ಇದೀಗ ದೀಕ್ಷೆ ಪಡೆದು ಗಾಣಿಗ ಮಠದ ಸ್ವಾಮೀಜಿಯಾಗಲಿದ್ದಾರೆ. 82 ವರ್ಷ ವಯೋಮಾನದ ಬಿ.ಜೆ ಪುಟ್ಟಸ್ವಾಮಿ ಪುರ್ಣಾನಂದಪುರಿ ಸ್ವಾಮೀಜಿ ಆಗಲಿದ್ದಾರೆ. 

bjp senior leader bj puttaswamy quits politics to become swamiji gvd
Author
Bangalore, First Published Apr 6, 2022, 2:15 PM IST

ವರದಿ: ಮಾರುತೇಶ್ ಹುಣಸನಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಬೆಂಗಳೂರು(ಏ.06): ರಾಜಕೀಯ ಸನ್ಯಾಸ ಸ್ವೀಕಾರ ಮಾಡೋದು ಬೇರೆ. ಆದರೆ ರಾಜಕೀಯ ಬಿಟ್ಟು ಸನ್ಯಾಸಿ ಆಗಿ ಪೀಠಾಧಿಪತಿ ಆಗೋದು ಬೇರೆ. ಇಂತದ್ದೊಂದು ನಿರ್ಧಾರ ಮಾಡಿರೋದು ಯಡಿಯೂರಪ್ಪ (BS Yediyurappa) ಅವರ ಪರಮಾಪ್ತ, ಮಾಜಿ ಸಚಿವ, ರಾಜ್ಯ ಯೋಜನಾ ಮಂಡಳಿ ಉಪಾಧ್ಯಕ್ಷ ಬಿಜೆ ಪುಟ್ಟಸ್ವಾಮಿ (BJ Puttaswamy). ಮಾಜಿ ಸಚಿವರಾಗಿ ಕಾರ್ಯನಿರ್ವಹಿಸಿದ್ದ ಪುಟ್ಟಸ್ವಾಮಿ ಇದೀಗ ದೀಕ್ಷೆ ಪಡೆದು ಗಾಣಿಗ ಮಠದ (Ganiga Mutt) ಸ್ವಾಮೀಜಿಯಾಗಲಿದ್ದಾರೆ. 82 ವರ್ಷ ವಯೋಮಾನದ ಬಿ.ಜೆ ಪುಟ್ಟಸ್ವಾಮಿ ಪುರ್ಣಾನಂದಪುರಿ ಸ್ವಾಮೀಜಿ ಆಗಲಿದ್ದಾರೆ. 

ನೆಲಮಂಗಲ ಬಳಿ ಇರುವ ಶ್ರೀ ಕ್ಷೇತ್ರ ತೈಲೇಶ್ವರ ಮಹಾಸಂಸ್ಥಾನದ ಮೊದಲ ಮಠಾಧೀಶರಾಗಲು ಬಿ.ಜೆ.ಪುಟ್ಟಸ್ವಾಮಿ ಮಾನಸಿಕವಾಗಿ ತಯಾರಾಗಿದ್ದಾರೆ. ಮೇ 6ಕ್ಕೆ ದೀಕ್ಷೆ ಪಡೆದು ಮೇ 15ಕ್ಕೆ ಮಠಾಧಿಪತಿಯಾಗಲಿದ್ದಾರೆ. ಪೀಠಾರೋಹಣ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಸಿದ್ದರಾಮಯ್ಯ, ಎಸ್ಎಂ ಕೃಷ್ಣ, ಕುಮಾರಸ್ವಾಮಿ ಸೇರಿದಂತೆ ರಾಜಕೀಯ ಮುಖಂಡರನ್ನ ಆಹ್ವಾನಿಸಿದ್ದಾರೆ. 

Karnataka Politics: ಹೋಮ್ ಮಿನಿಸ್ಟರ್ ಆಗೋಕೆ ಲಾಯಕ್ ಏನ್ರಿ ಇವರು: ಸಿದ್ದರಾಮಯ್ಯ ಪ್ರಶ್ನೆ

ಸ್ವಾಮೀಜಿಯಾಗಲು ಕಾರಣವೇನು..?: ಸನ್ಯಾಸ ಸ್ವೀಕರಿಸಿ ಸ್ವಾಮೀಜಿ ಆಗಲು ಕಾರಣ ಏನು ಎಂಬುದಕ್ಕೆ ಬಿ.ಜೆ ಪುಟ್ಟಸ್ವಾಮಿ ಉತ್ತರಿಸಿದ್ದಾರೆ. ಏಷ್ಯಾನೆಟ್ ಸುವರ್ಣ ನ್ಯೂಸ್‌ಗೆ ಪ್ರತಿಕ್ರಿಯಿಸಿದ ಅವರು, ಗಾಣಿಗ ಸಮುದಾಯಕ್ಕೆ ಮಠ ಕಟ್ಟಿಸರೂ 2016 ರಿಂದ ಪೀಠಾಧಿಪತಿಗಾಗಿ ಹುಡುಕಾಟ ನಡೆದಿತ್ತು. ಇದ್ದಕ್ಕಾಗಿ ಮೂವರನ್ನ ಆಯ್ಕೆ ಮಾಡಿ ರಾಜ್ಯ ಮೂರು ಪ್ರತಿಷ್ಠಿತ ಮಠದಲ್ಲಿ ಕಲಿಕೆಗಾಗಿ ಅವಕಾಶ ಮಾಡಿಕೊಡಲಾಗಿತ್ತು. ಆದರೆ ಯಾರೊಬ್ಬರು ಪೀಠಾಧಿಪತಿ ಆಗಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ರಾಜರಾಜೇಶ್ವರಿನಗರ ಜಯೇಂದ್ರಪುರಿ ಸ್ವಾಮೀಜಿ ಒಮ್ಮೆ ಯಾಗ ಮಾಡಿಸಿದಾಗ , ಅವರ ಪ್ರಾರ್ಥನೆ ವೇಳೆ ನಾನು ಕಾಣಿಸಿಕೊಂಡಿದ್ದನಂತೆ.

ಹೀಗಾಗಿ ನೀನೇ ಪೀಠಾಧ್ಯಕ್ಷ ಆಗಬೇಕು ಎಂದು ಸ್ವಾಮೀಜಿ ತಿಳಿಸಿದರು.‌ ಹೀಗಾಗಿ ನಾನೂ ಕೂಡ ಯೋಚನೆ ಮಾಡಿ ಈ ನಿರ್ಧಾರ ತೆಗೆದುಕೊಂಡೆ ಎಂದು ಪುಟ್ಟಸ್ವಾಮಿ ಹೇಳಿದರು. ಗಾಣಿಗ ಸಮಾಜದ ಉಳಿವು ಮತ್ತು ಬೆಳವಣಿಗೆಗೆ ಸ್ವಾಮಿಜಿಯಾಗಲು ನಿರ್ಧರಿಸಿದ್ದೇನೆ. ನಮ್ಮ ಗಾಣಿಗ ಸಮಾಜಕ್ಕೆ ಯಾವುದೇ ಪೀಠ ಹಾಗೂ ವಿದ್ಯಾಸಂಸ್ಥೆ ಇಲ್ಲಾ ಎಲ್ಲಾ ಸಮಾಜದಲ್ಲಿ ಇರುವಂತೆ ನಮ್ಮ ಗಾಣಿಗ ಸಮುದಾಯಕ್ಕೂ ಒಂದು ಪೀಠ ಬೇಕು ಎಂಬ ಹಂಬಲ ನನ್ನದಾಗಿತ್ತು. ನಮ್ಮ ಸಮಾಜದ ಒಳಿತಿಗಾಗಿ ಬಹಳ ಕಷ್ಟಪಟ್ಟಿದ್ದೇನೆ. ಜಯೇಂದ್ರ ಪುರಿ ಸ್ವಾಮಿಜಿ ಮಾರ್ಗದರ್ಶನ ಮೇರೆಗೆ ನಾನೇ ಪೀಠಾಧ್ಯಕ್ಷ ಆಗಲಿದ್ದೇನೆ ಎಂದು ಪುಟ್ಟಸ್ವಾಮಿ ಹೇಳಿದರು. 

Karnataka Politics: ಸಿಎಂ ಬೊಮ್ಮಾಯಿ ಮೂಕ ಬಸವ ಆಗಿದ್ದಾರೆ: ಪ್ರಿಯಾಂಕ್‌ ಖರ್ಗೆ

ನನ್ನ ತೀರ್ಮಾನ ಯಡಿಯೂರಪ್ಪ ಒಪ್ಪಲಿಲ್ಲ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಸಹಾಯದಿಂದ ಈ ಮಠ ನಿರ್ಮಾಣ ಮಾಡಲಾಗಿದೆ ಎಂದು ನೆನಪು ಮಾಡಿಕೊಂಡ ಪುಟ್ಟಸ್ವಾಮಿ, ಸ್ವಾಮೀಜಿ ಆಗುವ ತೀರ್ಮಾನವನ್ನ ಯಡಿಯೂರಪ್ಪ ಅವರಿಗೆ ತಿಳಿಸಿದಾಗ ನನ್ನ ಮೇಲೆ ಕೋಪ ಮಾಡಿಕೊಂಡರು. ಈ ನಿರ್ದಾರ ಬೇಡವಾಗಿತ್ತು ಅಂತ ಹೇಳಿದ್ರಂತೆ. ಬಳಿಕ ಪೀಠಾಧಿಪತಿ ‌ಹುಡುಕಾಟದಲ್ಲಿ ಆದ ಬೆಳವಣಿಗೆಗಳ‌ನ್ನ ತಿಳಿಸಿದಾಗ ಸಹಮತ ವ್ಯಕ್ತಪಡಿಸಿದು ಎಂದು ಪುಟ್ಟಸ್ವಾಮಿ ಹೇಳಿದರು. ಸರ್ವಾನುಮತದಿಂದ ನಮ್ಮ ಸಮಾಜದವರು ನಾನು ಸ್ವಾಮಿಜಿ ಆಗಲು ಒಪ್ಪಿಗೆ ನೀಡಿದ್ದಾರೆ. ನನ್ನ ಜೀವನ ಕೊನೆಯಲ್ಲಿ ಮುಕ್ತಿ ಸಿಗುವ ಸಲುವಾಗಿ ದೇವರು ಈ ಅವಕಾಶ ನೀಡಿದ್ದಾನೆ. ಹೀಗಾಗಿ ಇದನ್ನ ಕಳೆದುಕೊಳ್ಳಬಾರದು ಅಂತ ತೀರ್ಮಾನ ಮಾಡಿದ್ದೇನೆ ಎಂದು ಪುಟ್ಟಸ್ವಾಮಿ ‌ತಿಳಿಸಿದರು.

Follow Us:
Download App:
  • android
  • ios