Asianet Suvarna News Asianet Suvarna News

ಅನುದಾನ ಇಲ್ಲ: CM ವಿರುದ್ಧ ದೂರಿದ ಬಿಜೆಪಿ ಶಾಸಕರಿಗೆ ಕಟೀಲು ಸಮಾಧಾನ

ತಮ್ಮ ಕ್ಷೇತ್ರಗಳಿಗೆ ಸೂಕ್ತವಾದ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಅರವಿಂದ್ ಬೆಲ್ಲದ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸೇರಿದಂತೆ 10 ಶಾಸಕರು 2 ಕ್ಕೂ ಹೆಚ್ಚು ಗಂಟೆಗಳ ಕಾಲ ನಳೀನ್ ಕುಮಾರ್ ಜೊತೆ ಚರ್ಚೆ ನಡೆಸಿ ತಮ್ಮ ಕ್ಷೇತ್ರಗಳಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 
 

BJP MLAs Dissatisfied Over Lack of Grants
Author
Bengaluru, First Published Jun 19, 2020, 11:12 AM IST

ಬೆಂಗಳೂರು (ಜೂ. 19): ತಮ್ಮ ಕ್ಷೇತ್ರಗಳಿಗೆ ಸೂಕ್ತವಾದ ಅನುದಾನ ಸಿಗುತ್ತಿಲ್ಲ ಎಂದು ಬಿಜೆಪಿ ಶಾಸಕರು ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಬಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶಾಸಕರಾದ ಅರವಿಂದ್ ಬೆಲ್ಲದ್, ಭರತ್ ಶೆಟ್ಟಿ, ವೇದವ್ಯಾಸ ಕಾಮತ್, ಸೇರಿದಂತೆ 10 ಶಾಸಕರು 2 ಕ್ಕೂ ಹೆಚ್ಚು ಗಂಟೆಗಳ ಕಾಲ ನಳೀನ್ ಕುಮಾರ್ ಜೊತೆ ಚರ್ಚೆ ನಡೆಸಿ ತಮ್ಮ ಕ್ಷೇತ್ರಗಳಿಗೆ ಅನುದಾನ ಕೊಡಿಸುವಂತೆ ಮನವಿ ಮಾಡಿಕೊಂಡಿದ್ದಾರೆ. 

ಪರಿಷತ್‌ ಚುನಾವಣೆ: 1224 ಕೋಟಿ ರು. ಆಸ್ತಿ ಒಡೆಯ MTB ನಾಗರಾಜ್‌!

ಶಾಸಕರ ಮನವಿಗೆ ಪೂರಕವಾಗಿ ಸ್ಪಂದಿಸಿರುವ ನಳೀನ್ ಕುಮಾರ್, ಈ ಬಗ್ಗೆ ಸಿಎಂ ಜೊತೆ ಮಾತನಾಡಿ ಸಭೆ ಕರೆಯುತ್ತೇವೆ. ಸಮಸ್ಯೆಗೆ ಪರಿಹಾರ ನೀಡುತ್ತೇವೆ ಎಂದು ಭರವಸೆ ನೀಡಿದ್ದಾರೆ. 

"

ಬಿಜೆಪಿ ವಲಯದಲ್ಲಿ  ಶಾಸಕರ ಸಭೆ ಹಲವು ಚರ್ಚೆಗೆ ಕಾರಣವಾಗಿದೆ. ಇದರ ಜೊತೆ ಸಾಮೂಹಿಕ ವರ್ಗಾವಣೆ ರದ್ದು ಮಾಡಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ.  ಎಲ್ಲಾ ವರ್ಗಾವಣೆಗೂ ಸಿಎಂ ಬಳಿ ಹೋಗುವ ಸ್ಥಿತಿ ಬಂದಿದೆ. ನಮ್ಮ ಮಾತು ಕೇಳುವ ಅಧಿಕಾರಿಗಳನ್ನು ಕ್ಷೇತ್ರಕ್ಕೆ ಹಾಕಿಸಿಕೊಳ್ಳಲು ಅವಕಾಶ ಸಿಗಬೇಕಿದೆ ಎಂದು ಶಾಸಕರು ಪ್ರಸ್ತಾಪಿಸಿದ್ದಾರೆ. 

ಶಾಸಕರ ಅಭಿಪ್ರಾಯ ಆಲಿಸಿರುವ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್,  ಸಿಎಂ ಜೊತೆಗೆ ಮಾತುಕತೆ ಮಾಡುವ ಭರವಸೆ ನೀಡಿದ್ದಾರೆ.  ರಾಜ್ಯಾಧ್ಯಕ್ಷ ಕಟೀಲು ಭರವಸೆ ಹಿನ್ನೆಲೆಯಲ್ಲಿ ಬಿಜೆಪಿಯೊಳಗೆ ಹಲವು ಚರ್ಚೆ ಶುರುವಾಗಿದೆ. ಸಭೆಯ ಬಗ್ಗೆ ಬಹಿರಂಗ ಹೇಳಿಕೆ ನೀಡದಂತೆ ಯತ್ನಾಳ್ ಸೇರಿದಂತೆ ಎಲ್ಲಾ ಶಾಸಕರಿಗೂ ಸೂಚನೆ ನೀಡಲಾಗಿದೆ. ಈ ಸೂಚನೆ ಹಿನ್ನಲೆ ಸಭೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಶಾಸಕರ ನಿರಾಕರಿಸಿದ್ದಾರೆ. 

Follow Us:
Download App:
  • android
  • ios