ಬೆಂಗಳೂರು, [ಡಿ.11]: ಇಡೀ ದೇಶದ ಕಣ್ಣು ನೆಟ್ಟಿದ್ದ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದೆ. ಮೋದಿ ವರ್ಸಸ್ ರಾಹುಲ್ ಗಾಂಧಿ ನಡುವಿನ ನೇರ ಹಣಾಹಣಿ ಎಂಬಂತೆ ಇದ್ದ ಈ ಪಂಚ ಯುದ್ಧದಲ್ಲಿ ಕೈ ಆರ್ಭಟಕ್ಕೆ ಕಮಲ ಪಡೆ ಮುದುರಿ ಕುಳಿತಿದೆ.

ಮತ್ತೊಂದೆಡೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತಮ್ಮದೇ ರೀತಿಯಲ್ಲಿ ಪಂಚ ರಾಜ್ಯಗಳ ರಿಸಲ್ಟ್ ಅನ್ನು  ವ್ಯಂಗ್ಯ, ವಿಡಂಬನಾತ್ಮಕ, ಟೀಕೆಗಳ ಮೂಲಕ ವಿಮರ್ಶೆ ಮಾಡಿದ್ದಾರೆ.

ಈ ನಡುವೆ ಟ್ರೋಲ್ ಒಂದು ಬಿಜೆಪಿ ಶಾಸಕ ಸುರೇಶ್ ಕುಮಾರ್ ಹೆಗಲೇರಿದೆ. ಕುಮಾರಸ್ವಾಮಿಯವರು "ಬೇರೆಯವರ ಹಂಗಿನಲ್ಲಿದ್ದೇನೆ ಎಂದಿದ್ದಾಗ, ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು ಎಂದು ಸುರೇಶ್ ಕುಮಾರ್ ಅವರು ಟ್ವೀಟ್ ಮಾಡಿದ್ದರು. 

ಆ ಟ್ವೀಟ್ ಅನ್ನು ದುರುಪಯೋಗ ಪಡಿಸಿಕೊಂಡಿರುವ ಕಿಡಿಗೇಡಿಗಳು ತಮಗೆ ಬೇಕಾದಂತೆ ಬರೆದುಕೊಂಡಿದ್ದಾರೆ. 'ರಾಜ ಕಡಿಮೆ ಮಾತನಾಡಿದಷ್ಟೂ ಒಳ್ಳೆಯದು' ಈ ಒಂದು ವಾಕ್ಯವನ್ನು ಈಗ ಪಂಚ ರಾಜ್ಯ ಚುನಾವಣೆ ಫಲಿತಾಂಶಕ್ಕೆ ಹೋಲಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ಹಾಕಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ.

ಇದು ಸುರೇಶ್ ಕುಮಾರ್ ಅವರ ಗಮನಕ್ಕೆ ಬಂದಿದ್ದು, ಈ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ್ದು ಹೀಗೆ.