ಬೆಂಗಳೂರು : ರಾಜ್ಯ ರಾಜ್ಯಕಾರಣದಲ್ಲಿ ಹೆಚ್ಚು ಚರ್ಚೆಗೆ ಕಾರಣವಾದ ಆಪರೇಷನ್ ಕಮಲದಲ್ಲಿ ಮಲ್ಲೇಶ್ವರಂ ಶಾಸಕ ಅಶ್ವಥ್ ನಾರಾಯಣ ಹೆಸರು ಕೇಳಿ ಬಂದಿದ್ದು, ಈ ಆರೋಪಕ್ಕೆ ಮೊದಲ ಬಾರಿಗೆ ಅಶ್ವಥ್ ನಾರಾಯಣ ಪ್ರತಿಕ್ರಿಯೆ  ನೀಡಿದ್ದಾರೆ. 

ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರನ್ನು ತಾವು ಭೇಟಿ ಮಾಡಿದ್ದು ನಿಜವೆಂದು ಒಪ್ಪಿಕೊಂಡಿದ್ದಾರೆ. ಆದರೆ ಡಾಕ್ಟರ್ ಕಾನ್ಫರೆನ್ಸ್ ನಲ್ಲಿ ನಾವು ಭೇಟಿಯಾದೆವು. 

ಈ ಭೇಟಿಯನ್ನು ಆಪರೇಷನ್ ಕಮಲ ಎಂದು ಬಿಂಬಿಸುವುದು ತಪ್ಪು, ಅವರ ಪಕ್ಷದಲ್ಲಿ ಇರುವ ವೈಮನಸ್ಸು, ವ್ಯತ್ಯಾಸಗಳನ್ನಸರಿ ಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಾವ ಆಪರೇಷನ್ ಕೂಡ ಇಲ್ಲ, ಆ ಪಕ್ಷದಲ್ಲಿನ ಅತೃಪ್ತಿ ಬಗ್ಗೆ ಅವರು ಹೇಳಿಕೊಳ್ಳುತ್ತಿದ್ದಾರೆ. ಯಾವ ಶಾಸಕರನ್ನು ಯಾರೇ  ಇನ್ ಫ್ಲುಯೆನ್ಸ್ ಮಾಡುತ್ತೇನೆ ಎಂದರೂ ಅದು ಸಾಧ್ಯವಿಲ್ಲ ಎಂದರು.

ಈ ಸರ್ಕಾರದಲ್ಲಿ ಎಲ್ಲಾ ಶಾಸಕರನ್ನ ಒಗ್ಗಟ್ಟಿನಿಂದ ಇರಿಸಿಕೊಳ್ಳಲು ಸಾಧ್ಯವಾಗದಿದ್ದವರು ರಾಜ್ಯದ ಆಡಳಿತ ಹೇಗೆ ಮಾಡುತ್ತಾರೆ ಎಂದು ಸಿಎಂ ಕುಮಾರಸ್ವಾಮಿ ವಿರುದ್ಧ ಅಶ್ವಥ್ ನಾರಾಯಣ್ ಕಿಡಿ ಕಾರಿದ್ದಾರೆ.