ರಾಜ್ಯದ ಹಿತದೃಷ್ಟಿಯಿಂದ ಒಳ್ಳೆದಾಗುವುದಿದ್ದರೆ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಏಕೆ ಜಾರಿ ತರಬಾರದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ  ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರೆ ಕಾಂಗ್ರೆಸ್‌ ಮುಖಂಡರ ಟೀಕೆಗೆ ಪ್ರತಿಕ್ರಿಯೆ

ಚಿಕ್ಕಮಗಳೂರು (ಜು.18): ಶಾಸನ ಸಭೆಗಳಲ್ಲಿ ಚರ್ಚೆ ಆಗಿ, ರಾಜ್ಯದ ಹಿತದೃಷ್ಟಿಯಿಂದ ಒಳ್ಳೆದಾಗುವುದಿದ್ದರೆ ಜನಸಂಖ್ಯಾ ನಿಯಂತ್ರಣ ಕಾಯ್ದೆಯನ್ನು ಏಕೆ ಜಾರಿ ತರಬಾರದು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಶನಿವಾರ ಪ್ರಶ್ನಿಸಿದರು.

ಈ ಕುರಿತು ತಮ್ಮ ಟ್ವೀಟ್‌ಗೆ ಡಿ.ಕೆ.ಶಿವಕುಮಾರ್‌ ಸೇರಿದಂತೆ ಇತರೆ ಕಾಂಗ್ರೆಸ್‌ ಮುಖಂಡರ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಈ ವಿಚಾರದಲ್ಲಿ ಜನಾಭಿಪ್ರಾಯ ಪರವಾಗಿದ್ದರೆ ಜಾರಿಗೆ ತರಲಿ. ಒತ್ತಾಯಪೂರ್ವಕವಾಗಿ ಮಾಡಲು ಇದು ತುರ್ತು ಪರಿಸ್ಥಿತಿ ಅಲ್ಲ. 

ಕರ್ನಾಟಕದಲ್ಲೂ ಜನಸಂಖ್ಯೆ ನಿಯಂತ್ರಣ ನೀತಿ ಜಾರಿಗೊಳಿಸಲು ಇದು ಸಕಾಲ: ಸಿ.ಟಿ.ರವಿ

ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಾವು ಬಂದೂಕಿನ ಮೂಲಕ ಬೆದರಿಸಲು ನಕ್ಸಲರಲ್ಲ. ನಮ್ಮದೇನಿದ್ದರೂ ಬ್ಯಾಲೆಟ್‌ನಲ್ಲಿ ನಂಬಿಕೆ’ ಎಂದು ಹೇಳಿದರು. ತುರ್ತು ಪರಿಸ್ಥಿತಿಯಲ್ಲಿ ಒತ್ತಾಯ ಪೂರ್ವಕವಾಗಿ ಶಸ್ತ್ರಚಿಕಿತ್ಸೆ ಮಾಡಿದರು. ಆಗ ಸಿದ್ದರಾಮಯ್ಯ ಕಾಂಗ್ರೆಸ್‌ನಲ್ಲಿ ಇರಲಿಲ್ಲ. ಅವರು ಕಾಂಗ್ರೆಸ್‌, ಇಂದಿರಾಗಾಂಧಿ ವಿರುದ್ಧ ಇದ್ದರು ಎಂದರು.

ಹಿಂದೆ ತುರ್ತು ಪರಿಸ್ಥಿತಿಯಲ್ಲಿ ಇಂದಿರಾ ಬ್ರಿಗೇಡ್‌, ಸಂಜಯ್‌ ಗಾಂಧಿ ಬ್ರಿಗೇಡ್‌ ಹೆಸರಿನಲ್ಲಿ ನಸ್‌ಬಂದಿ ಕಾರ್ಯಕ್ರಮ ಮಾಡಿದರು.

ಡಿ.ಕೆ.ಶಿವಕುಮಾರ್‌ ಯುವ ಕಾಂಗ್ರೆಸ್‌ನಲ್ಲಿ ಇದ್ದರು ಎನ್ನಿಸುತ್ತದೆ. ಎಷ್ಟು ನಸ್‌ಬಂದಿ ಮಾಡಿಸಿದರು ಎನ್ನುವುದನ್ನು ಅವರಿಗೆ ಕೇಳಬೇಕು. ಆಗ ಸಿ.ಟಿ.ರವಿ ಹೇಳುತ್ತಿರುವುದು ತಪ್ಪೋ, ಸರಿಯೋ ಎನ್ನುವುದು ಗೊತ್ತಾಗುತ್ತದೆ ಎಂದರು.

ಅಂದು ಯುವ ಕಾಂಗ್ರೆಸ್‌ನಲ್ಲಿ ಸ್ಥಾನ ಸಿಗಬೇಕು ಎಂದರೆ ಅವರು ನಸ್‌ಬಂದಿ ಎಷ್ಟುಜನರಿಗೆ ಮಾಡಿಸಿದ್ದರು ಅಷ್ಟುಅವರಿಗೆ ಬಡ್ತಿ ಸಿಗುತ್ತಿತ್ತು. ಎಷ್ಟುಜನರನ್ನು ಮಾಡಿಸಿದ್ದರು ಎನ್ನುವುದನ್ನು ಅವರೇ ಹೇಳಬೇಕು. ನಾನು ಆ ರೀತಿ ಯಾವುದೇ ಒತ್ತಾಯದ ವಿಚಾರ ಹೇಳುತ್ತಿಲ್ಲ ಎಂದರು.