ಬಾಗಲಕೋಟೆ (ಡಿ.01): ಇತ್ತೀಚೆಗೆ ಪೊಲೀಸ್‌ ಅಧಿಕಾರಿಗಳ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ, ಇಲ್ಲವೇ ನಕಲಿ ಖಾತೆ ತೆರೆದು ಮೆಸೆಂಜರ್‌ನಲ್ಲಿ ಹಣ ಕೇಳಿದ ಸಾಕಷ್ಟುಘಟನೆಗಳನ್ನು ನೋಡಿದ್ದೇವೆ. 

ಇದೀಗ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಯಾಗಿರುವ ಬಿ.ಎಲ್‌.ಸಂತೋಷ್‌ ಅವರ ಫೇಸ್‌ಬುಕ್‌ ಖಾತೆ ಹ್ಯಾಕ್‌ ಮಾಡಿ ಇಲ್ಲವೇ ಅವರ ಹೆಸರಿನಲ್ಲಿ ನಕಲಿ ಖಾತೆ ತೆರೆದು ಮೆಸೆಂಜರ್‌ನಲ್ಲಿ ವ್ಯಕ್ತಿಯೊಬ್ಬರಿಗೆ 15 ಸಾವಿರ ನೀಡುವಂತೆ ಸಂದೇಶ ಕಳುಹಿಸಿರುವ ಘಟನೆ ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ.

ಬಾಗಲಕೋಟೆಯ ಅಭಯ ಮನಗೂಳಿ ಎಂಬುವರಿಗೆ ಬಿ.ಎಲ್‌.ಸಂತೋಷ್‌ ಅವರ ಹೆಸರಿನಲ್ಲಿರುವ ನಕಲಿ ಖಾತೆಯಿಂದ ಮೆಸೇಜ್‌ ಬಂದಿದ್ದು ತ್ವರಿತವಾಗಿ 15 ಸಾವಿರವನ್ನು ಕಳಿಸಿ, ಹಣ ಕಳಿಸಿ ಎರಡು ತಾಸಿನಲ್ಲಿ ಮರಳಿ ಹಣ ಹಾಕುತ್ತೇನೆ.ಫೋನ್‌ ಪೇ ಇದೆಯಾ? ಗೂಗಲ್‌ ಪೇ ಇದಿಯಾ ಎಂದು ಕೇಳಿರುವ ಸಂದೇಶ ಬಂದಿದೆ.

BJP ಸಚಿವರು, ಸಂಸದರಿಗೆ BLಸಂತೋಷ್ ವಾರ್ನಿಂಗ್ : ಒಪ್ಪಿಕೊಳ್ಳಲಾಗಲ್ಲ ಎಂದು ಎಚ್ಚರಿಕೆ ...

ಈ ಬಗ್ಗೆ ಪ್ರತಿಕ್ರಿಯಿಸಿರುವ ಅಭಯ ಮನಗೂಳಿ, ಗಣ್ಯರ ಹೆಸರಿನಲ್ಲಿ ನಕಲಿ ಖಾತೆ ತೆಗೆದು ತಂತ್ರಜ್ಞಾನದ ದುರ್ಬಳಕೆ ಮಾಡಿಕೊಂಡು ಹಣ ಕೀಳುವ ಪ್ರವೃತ್ತಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗುತ್ತಿದೆ. ಪರಿಚಯಸ್ಥರ ಹಾಗೂ ಗಣ್ಯರ ಹೆಸರನ್ನು ಬಳಸಿಕೊಂಡು ಹಣ ಲಪಟಾಯಿಸುವವರ ವಿರುದ್ಧ ಮತ್ತಷ್ಟುಬಿಗಿ ಕ್ರಮಗಳು ಅವಶ್ಯವಿದೆ ಎಂದಿದ್ದಾರೆ.