Asianet Suvarna News Asianet Suvarna News

ಕೊರೋನಾ ಭೀತಿ ಮಧ್ಯೆ ಹಕ್ಕಿ ಜ್ವರ: ರಾಜ್ಯಗಳಿಗೆ ಎಚ್ಚರಿಕೆ ಕೊಟ್ಟ ಕೇಂದ್ರ ಸರ್ಕಾರ

ಕೊರೋನಾ ಸೋಂಕಿನ ಭೀತಿಯಿಂದ ಹೊರಬರಲು ಇನ್ನೂ ಆಗಿಲ್ಲ. ಅದರ ಬೆನ್ನಲ್ಲೇ ಕೊರೋನಾ ರೂಪಾಂತರಿ ಆವರಿಸಿಕೊಂಡಿದೆ. ಈಗ ಹಕ್ಕಿ ಜ್ವರ.

bird flu Union Govt high alert to Karnataka and Others all States
Author
Bengaluru, First Published Jan 6, 2021, 6:57 PM IST

ಬೆಂಗಳೂರು, (ಜ.06): ನೆರೆಯ ಕೇರಳದ ಆಲಪ್ಪುಳ ಮತ್ತು ಕೊಟ್ಟಾಯಂ ಜಿಲ್ಲೆಗಳಲ್ಲಿ ಬಾತುಕೋಳಿಗಳಲ್ಲಿ ಕೋಳಿಶೀತ/ಹಕ್ಕಿಜ್ವರ (H5N8) ಸೋಂಕು ದೃಢಪಟ್ಟಿದ್ದು, ಕರ್ನಾಟಕದಲ್ಲೂ ಈ ರೋಗ ಕಾಣಿಸಿಕೊಳ್ಳುವ ಸಾಧ್ಯತೆ. 

ಈ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಚಿವ ಪ್ರಭು ಚವ್ಹಾಣ್ ಹೈ ಅಲರ್ಟ್​ ಘೋಷಿಸಿದ್ದಾರೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ಸಹ ಇತರೆ ರಾಜ್ಯಗಳಿಗೂ ಎಚ್ಚರಿಕೆ ಕೊಟ್ಟಿದೆ. 

ಕರ್ನಾಟಕದಲ್ಲಿ ಹಕ್ಕಿಜ್ವರ ಭೀತಿ; ಚಿಕನ್ ತಿನ್ನಲು ಹೊಸ ನಿಯಮ ಜಾರಿ

ಈ ಬಗ್ಗೆ ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ, ರಾಜ್ಯ ಸರ್ಕಾರಗಳಿಗೆ ಪತ್ರದ ಮೂಲಕ ಎಚ್ಚರಿಕೆ ನೀಡಿದೆ.  ವಿವಿಧ ರಾಜ್ಯಗಳಲ್ಲಿ ಹಕ್ಕಿಗಳ ಜ್ವರ ಹೆಚ್ಚಾಗುತ್ತಿದೆ. ಪರಿಣಾಮ ದೊಡ್ಡ ಪ್ರಮಾಣದಲ್ಲಿ ಹಕ್ಕಿಗಳು ಸಾವನ್ನಪ್ಪುತ್ತಿದೆ. 

ಇದನ್ನು ಪರೀಕ್ಷೆಗೆ ಒಳಪಡಿಸಲಾಗಿದ್ದು, ಇದು H5N1 ವೈರಸ್ ಪಾಸಿಟಿವ್ ಕಾರಣವಾಗಿದೆ ಎಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಸ್ಪಷ್ಟಪಡಿಸಿದೆ.

ಇದು ಮನುಷ್ಯರು ಮತ್ತು ಸಾಕು ಪ್ರಾಣಿಗಳಿಗೆ ಹರಡುವ ಸಾಧ್ಯತೆ ಇದೆ. ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರಗಳಿಗೆ ಸೂಚಿಸಿದೆ.

Follow Us:
Download App:
  • android
  • ios