ಬಿಗ್ ಬಾಸ್ ಡ್ರೋನ್ ಪ್ರತಾಪ್ ಜೈಲಿಂದ ರಿಲೀಸ್; ಸೋಡಿಯಂ ಸ್ಪೋಟಕದ ರಹಸ್ಯ ರಿವೀಲ್!
ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರು ತುಮಕೂರಿನಲ್ಲಿ ಸೋಡಿಯಂ ಸ್ಪೋಟ ಪ್ರಕರಣದಲ್ಲಿ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ. ಬಿಡುಗಡೆಯಾದ ನಂತರ, ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇದೇ ರೀತಿಯ ಪ್ರಯೋಗಗಳನ್ನು ಮಾಡಿದ ಇತರ ಯೂಟ್ಯೂಬರ್‌ಗಳನ್ನು ಏಕೆ ಬಂಧಿಸಲಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.
ತುಮಕೂರು (ಡಿ.24): ಬಿಗ್ ಬಾಸ್ ಖ್ಯಾತಿಯ ಡ್ರೋನ್ ಪ್ರತಾಪ್ ಅವರು ತುಮಕೂರಿನ ಫಾರ್ಮ್ ಹೌಸ್ ಒಂದರ ನೀರಿನ ತೊಟ್ಟಿಯಲ್ಲಿ ಸೋಡಿಯಂ ಬಳಕೆ ಮಾಡಿ ಸ್ಪೋಟಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಪಾಲಾಗಿದ್ದು, ಇಂದು ಜಾಮೀನಿನ ಮೇಲೆ ಬಿಡುಗಡೆ ಆಗಿದ್ದಾರೆ. ಜೈಲಿನಿಂದ ಹೊರಬಂದ ಬೆನ್ನಲ್ಲಿಯೇ ಡ್ರೋನ್ ಪ್ರತಾಪ್ ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದಾರೆ.
ತುಮಕೂರು ಜಿಲ್ಲೆ ಮಧುಗಿರಿಯ ಜನಕಲೋಟಿ ಬಳಿಯ ಫಾರ್ಮ್ ಹೌಸ್ ನೀರಿನ ಕೊಳದಲ್ಲಿ ಸೋಡಿಯಂ ಸ್ಪೋಟಿಸಿದ್ದ ಪ್ರತಾಪ್ ಅವರನ್ನು ಬಂಧಿಸಿದ್ದ ಪೊಲೀಸರು 3 ದಿನ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿದ್ದರು. ಇದಾದ ನಂತರ, ನ್ಯಾಯಂಗ ಬಂಧನಕ್ಕೆ ಒಳಪಡಿಸಿದ್ದರಿಂದ 8 ದಿನಗಳ ಕಾಲ ಜೈಲಿನಲ್ಲಿದ್ದು, ನಿನ್ನೆ ಜಾಮೀನು ಮಂಜೂರು ಮಾಡಲಾಗಿತ್ತು. ಜಾಮೀನಿನ ಷರತ್ತುಗಳನ್ನು ಇಂದು ಪೂರೈಸಿ ಕೋರ್ಟ್ ಅನುಮತಿ ಪಡೆದುಕೊಂಡು ಬಂದ ವಕೀಲರು ಇಂದು ಡ್ರೋನ್ ಪ್ರತಾಪ್ ಅವರನ್ನು ಜೈಲಿನಿಂದ ಬಿಡುಗಡೆ ಮಾಡಿಸಿಕೊಂಡು ಹೊರಗೆ ಕರೆತಂದಿದ್ದಾರೆ.
ಜೈಲಿನಿಂದ ಹೊರಬಂದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಡ್ರೋನ್ ಪ್ರತಾಪ್, ದೇಶಾದ್ಯಂತ ನೂರಾರು ಸೋಡಿಯಂಮೆಟಲ್ ಸ್ಪೋಟದ ಎಕ್ಸ್ಪರಿಮೆಂಟ್ ಮಾಡಿದ ವಿಡಿಯೋ ಗಳ ಅಪ್ಲೋಡ್ ಮಾಡಲಾಗಿದೆ. ಅವರನೆಲ್ಲಾ ಏಕೆ ಅರೆಸ್ಟ ಮಾಡಿಲ್ಲ? ಸರ್ಕಾರದಿಂದ ನನ್ನನ್ನೆ ಯಾಕೆ ಟಾರ್ಗೆಟ್ ಮಾಡಿ ಅರೆಸ್ಟ್ ಮಾಡಲಾಯಿತು? ನಮ್ಮ ದೇಶ ಆಗಬಹುದು, ವಿದೇಶ ಆಗಿರಬಹುದು ಎಲ್ಲಾ ಕಡೆ ಇಂತಹ ವಿಡಿಯೋಗಳಿವೆ. ಕಾನೂನು ಎಲ್ಲಾರಿಗೂ ಒಂದೇ. ಒಬ್ಬರಿಗೆ ಒಂದೂಂದು ಕಾನೂನು ಇರೊಲ್ಲ. ನನ್ನ ಒಬ್ಬನ್ನು ಮಾತ್ರ ಯಾಕೆ ಅರೆಸ್ಟ್ ಮಾಡಿದ್ದೀರಿ.? ಬೇರೆಯವರೆಲ್ಲಾ ಸೇಮ್ ಎಕ್ಸ್ಪರೆಮೆಂಟ್ ನಾ, ಕೆಜಿ ಗಟ್ಟಲೆ ಸೋಡಿಯಂ ಬಳಸಿ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ ಸಾಕಷ್ಟು ವಿಡಿಯೋಗಳು ಮೊಬೈಲ್‌ನಲ್ಲಿ ಈಗಲೂ ಸಿಗುತ್ತವೆ. ಯಾರ ಮೇಲೂ ಇಲ್ಲದ ಕ್ರಮ ನನ್ನ ಮೇಲೆ ಏಕೆ ಜರುಗಿಸಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬಿಗ್‌ಬಾಸ್ ಸ್ಪರ್ಧಿ ಡ್ರೋಣ್ ಪ್ರತಾಪ್ ಗೆ ಮತ್ತೊಂದು ಸಂಕಷ್ಟ;ಮಾಲಿನ್ಯ ನಿಯಂತ್ರಣ ಮಂಡಳಿಯಿಂದಲೂ ನೋಟಿಸ್!
ನಮ್ಮದೇ ದೇಶದ ಕ್ರೇಜಿ XYZಯೂಟೂಬರ್, ಮಿಸ್ಟರ್ ಇಂಡಿಯನ್ ಹ್ಯಾಕರ್ ಎಂಬ ಯೂಟ್ಯೂಬರ್ ಈ ಸ್ಫೋಟದ ಎಕ್ಸಪೆರಿಮೆಂಟ್ ಮಾಡಿದ್ದಾರೆ. ಅವರಿಗೆ ತುಂಬಾ ಸಬ್ ಸ್ಕೈಬರ್ ಕುಡ ಇದ್ದಾರೆ. ಅವರಿಬ್ಬರೆ ಅಂತಾ ಅಲ್ಲಾ ಸಾಕಷ್ಟು ಜನ ಮಾಡಿದ್ದಾರೆ. ಅವರ ಮೇಲೆಲ್ಲಾ ಕೇಸ್ ಹಾಕದೆ ಇರುವಂತಹದ್ದು, ನನ್ನ ಮೇಲೆಯೇ ಏಕೆ ಕೇಸ್ ಹಾಕಿದ್ದಾರೆ. ನಮ್ಮ ದೇಶದ ಕಾನೂನುಗಳು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆಯೇ? ನಾನು ಮಾಡಿರೋದು ಸೈನ್ಸ್ ಅಂಡ್ ಎಜ್ಯೂಕೇಷನಲ್ ಎಂಬ ಉದ್ದೇಶಕ್ಕೆ ಎಂದು ಡಿಸ್ ಕ್ಲೈಮರ್ ಹಾಕಿ ಮಾಡಿದ್ದನೆ. ನಾನು ಮಾಡಿರೋದು ಸಿಂಪಲ್ ಸೈನ್ಸ್ ಎಕ್ಸ್ ಪಿರಿಮೆಂಟ್ ಅಷ್ಟೇ ಎಂದು ಹೇಳಿದ್ದಾರೆ.
ನಮ್ಮ ರಾಜ್ಯದ 8 ತರಗತಿಯ ಹೈಸ್ಕೂಲ್ ಟೆಕ್ಟ್ ಬುಕ್‌ನಲ್ಲಿರುವ ಅಂಶವನ್ನೇ ನಾನು ಇಲ್ಲಿ ಪ್ರಯೋಗ ಮಾಡಿ ನೋಡಿದ್ದೇನೆ. ಕಾಲೇಜು ಲ್ಯಾಬ್ ಗಳಲ್ಲಿ ಸೊಡಿಯಂ ಸುಲಭವಾಗಿ ಸಿಗುವಂತಹದ್ದು, ಅದಕ್ಕೆ ಎಕ್ಸ್ ಪೋಸೀವ್ ಅಂತ ತೋರಿಸಿ ಮಾಡುವಂತಹದ್ದು ಏನಿಲ್ಲ. ನನ್ನ ಮೇಲೆ ಆಗಿರುವ ಕ್ರಮ ಬೇರೆಯವರ ಮೇಲೆ ಏಕೆ ಆಗಿಲ್ಲ. ಅವರೆಲ್ಲರೂ ನನ್ನಗಿಂತ ಮುಂಚೆ ಮಾಡಿದ್ದಾರೆ. ನಮ್ಮ ರಾಜ್ಯದಲ್ಲಿ ಅಲ್ಲ ಐಪಿಸಿ ಅಂದ್ರೆ ಆಲ್ ಓವರ್ ಇಂಡಿಯಾಕ್ಕೆ ಒಂದೇ. ಇನ್ನು ನಾವು ಮಾಡಿದ್ದ ಕೃಷಿಹೊಂಡ ಕೂಡ ಆರ್ಟಿಪಿಶಿಯಲ್ ಆಗಿದೆ. ಇದೇನು ನೈಸರ್ಗಿಕ ತಾಣವಾಗಲೀ ಅಥವಾ ಸರ್ಕಾರದ ಸ್ವತ್ತಾಗಲೀ ಅಲ್ಲ. ಈ ಕೇಸಿಗೆ ಸಂಬಂಧಪಟ್ಟಂತೆ ನನಗೆ ನ್ಯಾಯ ಬೇಕು ಎಂದು ಹೇಳಿದರು.
ಇದನ್ನೂ ಓದಿ: ಡಿ.ಕೆ. ಸುರೇಶ್ ತಂಗಿ ಎಂದೇಳಿ 14 ಕೆಜಿ ಬಂಗಾರಕ್ಕೆ ಪಂಗನಾಮ ಹಾಕಿದ ಐಶ್ವರ್ಯಾ ಗೌಡ; ನಟ ಧರ್ಮೇಂದ್ರನೂ ಸಾಥ್!