ಬೆಂಗಳೂರು (ಡಿ. 28): ಇಲ್ಲಿನ ಗಾಂಧಿನಗರದ ಕುಟುಂಬವೊಂದು 3 ತಲೆಮಾರು ಕಂಡಿದೆ.  ಫುಟ್‌ಪಾತೇ ಮೇಲೆ ಜೀವನ ನಡೆಸುತ್ತಿದ್ದಾರೆ. ಇರೋದಕ್ಕೆ ಒಂದು ಮನೆಯೂ ಇಲ್ಲದೇ ಪರದಾಡುತ್ತಿದ್ದಾರೆ. ಇವರ ಬಳಿ ಎಲ್ಲಾ ದಾಖಲೆಗಳು ಇದ್ದರೂ ಸೂರು ಕಟ್ಟಿಕೊಳ್ಳಲು ಸಾಧ್ಯವಾಗಿಲ್ಲ. ಹುಟ್ಟು, ಸಾವು ಎಲ್ಲಾ ಫುಟ್‌ಪಾತ್‌ನಲ್ಲೇ ನಡೆದು ಹೋಗಿದೆ. ಇನ್ನಾದರೂ ಜನಪ್ರತಿನಿಧಿಗಳು ಇವರಿಗೊಂದು ಸೂರು ಕಟ್ಟಿಸಿಕೊಡಬೇಕೆಂದು ಸುವರ್ಣ ನ್ಯೂಸ್ ಬಿಗ್ 3 ಆಗ್ರಹಿಸುತ್ತದೆ.