Asianet Suvarna News Asianet Suvarna News

Bangalore Central Jail : ಕೈದಿಗಳಿಗೆ ಅತ್ಯುತ್ತಮ ಆಹಾರ: ಪರಪ್ಪನ ಅಗ್ರಹಾರಕ್ಕೆ ಪ್ರಶಸ್ತಿ

ಕಾರಾಗೃಹದಲ್ಲಿ ಕೈದಿಗಳಿಗೆ ಉತ್ಕೃಷ್ಟಹಾಗೂ ಸ್ವಾದಿಷ್ಟವಾದ ಆಹಾರ ಪೂರೈಕೆ ಹಾಗೂ ನೈರ್ಮಲ್ಯ ಸ್ಪರ್ಧಾ ವಿಭಾಗದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಖಿಲ ಭಾರತ ಕಾರಾಗೃಹ ಸಮ್ಮೇಳನದಲ್ಲಿ ಪ್ರಥಮ ಸ್ಥಾನ ಸಂದಿದೆ.

Best and healthy Food for Prisoners Award for Parappas Agrahara bengaluru rav
Author
First Published Sep 7, 2022, 7:40 AM IST

ಬೆಂಗಳೂರು (ಸೆ.7) : ಕಾರಾಗೃಹದಲ್ಲಿ ಕೈದಿಗಳಿಗೆ ಉತ್ಕೃಷ್ಟಹಾಗೂ ಸ್ವಾದಿಷ್ಟವಾದ ಆಹಾರ ಪೂರೈಕೆ ಹಾಗೂ ನೈರ್ಮಲ್ಯ ಸ್ಪರ್ಧಾ ವಿಭಾಗದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಅಖಿಲ ಭಾರತ ಕಾರಾಗೃಹ ಸಮ್ಮೇಳನದಲ್ಲಿ ಪ್ರಥಮ ಸ್ಥಾನ ಸಂದಿದೆ. ಕೇಂದ್ರ ಗೃಹ ಸಚಿವಾಲಯ ಗುಜರಾತಿನ ಅಹಮದಾಬಾದ್‌ನಲ್ಲಿ ಶುಕ್ರವಾರ ನಡೆದ 6ನೇ ಅಖಿಲ ಭಾರತ ಕಾರಾಗೃಹ ಸಮ್ಮೇಳದ ಸಮಾರೋಪ ಸಮಾರಂಭದಲ್ಲಿ ಗುಜರಾತ್‌ ರಾಜ್ಯಪಾಲರಿಂದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ರಮೇಶ್‌ ಪ್ರಶಸ್ತಿ ಸ್ವೀಕರಿಸಿದರು.

ಕೈದಿಗಳಿಗೆ ರಾಜ್ಯಾತಿಥ್ಯ ನೀಡಿದರೆ ಜೈಲು ಸಿಬ್ಬಂದಿ ಕೆಲಸಕ್ಕೆ ಕುತ್ತು!

ಕೇಂದ್ರ ಗೃಹ ಇಲಾಖೆ(Central Home Department)ಯು ಸೆ.4 ರಿಂದ ಆಯೋಜಿಸಿದ್ದ ಮೂರು ದಿನಗಳ ಸಮ್ಮೇಳನದಲ್ಲಿ ರಾಷ್ಟ್ರದ ವಿವಿಧ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಟ್ಟು 1,319 ಕಾರಾಗೃಹ(prison)ಗಳು ಭಾಗವಹಿಸಿದ್ದವು. ‘ಜೈಲಿನಲ್ಲಿ ನೈರ್ಮಲ್ಯ ಹಾಗೂ ಉತ್ತಮ ಗುಣಮಟ್ಟಆಹಾರ(Food) ಸ್ಪರ್ಧೆಗೆ’ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಸೇವೆ ಇಲಾಖೆಯ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹವನ್ನು ಪ್ರಸ್ತಾಪಿಸಿತು. ಅಂತೆಯೇ ಸಮ್ಮೇಳನದ ಸದಸ್ಯರು, ಕಾರ್ಯಕ್ರಮಕ್ಕೂ ಮುನ್ನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಈ ಸಮಿತಿ ವರದಿ ಆಧರಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಪ್ರಥಮ ಸ್ಥಾನ ಪಡೆದರೆ, ಆಂಧ್ರಪ್ರದೇಶದ ವಿಶಾಖ ಪಟ್ಟಣಂ ಕೇಂದ್ರ ಕಾರಾಗೃಹ ಮತ್ತು ತಮಿಳುನಾಡಿನ ಪುಳಲು ಕೇಂದ್ರ ಕಾರಾಗೃಹಗಳು ದ್ವಿತೀಯ ಮತ್ತು ತೃತೀಯ ಸ್ಥಾನ ಪಡೆದುಕೊಂಡಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಾಕ್ಷ್ಯ ಇಲ್ಲದಿದ್ರೂ ಕೊಲೆ ಕೇಸಲ್ಲಿ 13 ವರ್ಷ ಜೈಲಲ್ಲಿದ್ದವನಿಗೆ ಬಿಡುಗಡೆ ಭಾಗ್ಯ

ರಾಜ್ಯದ ಅತಿ ದೊಡ್ಡ ಕೇಂದ್ರ ಕಾರಾಗೃಹ ಪರಪ್ಪನ ಅಗ್ರಹಾರ(Parappana agrahara)ದಲ್ಲಿ 5,200 ಬಂಧಿಗಳು ದಾಖಲಾಗಿದ್ದಾರೆ. ಆಹಾರ ಗುಣಮಟ್ಟಮತ್ತು ಸ್ವಚ್ಛತೆಗೆ ‘ಭಾರತೀಯ ಆಹಾರ ಸುರಕ್ಷತೆ ಮತ್ತು ಭದ್ರತೆ ಪ್ರಾಧಿಕಾರವು 2021ರ ಜೂನ್‌ 4ರಂದು 4 ಸ್ಟಾರ್‌ ರೇಟಿಂಗ್‌ ನೀಡಿ ಪ್ರಮಾಣಿಕರಿಸಿತು. ಮೊದಲ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಪ್ರಶಸ್ತಿ ಸಂದಿದೆ. ಇದಲ್ಲದೆ, ರಾಜ್ಯದ 8 ಕೇಂದ್ರ ಕಾರಾಗೃಹಗಳಿಗೆ ಸಹ 4 ಸ್ಟಾರ್‌ ರೇಟಿಂಗ್‌ ಪ್ರಮಾಣ ಪತ್ರ ದೊರೆತಿದೆ ಎಂದು ಕಾರಾಗೃಹ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

Follow Us:
Download App:
  • android
  • ios