ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಗಾಂಧಿನಗರ ವ್ಯಾಪ್ತಿಯಲ್ಲಿನ ಬೆಸ್ಕಾಂ ಕೇಂದ್ರ ಕಚೇರಿ, ಕೆಪಿಟಿಸಿಎಲ್‌ ಕಚೇರಿಗಳು ಸೇರಿದಂತೆ ಚಾಲುಕ್ಯ ವೃತ್ತದ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು (ಸೆ.21) ವಿದ್ಯುತ್ ನಿರ್ವಹಣಾ ಕಾಮಗಾರಿ ಕೈಗೆತ್ತಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ ಗಾಂಧಿನಗರ ವ್ಯಾಪ್ತಿಯಲ್ಲಿನ ಬೆಸ್ಕಾಂ ಕೇಂದ್ರ ಕಚೇರಿ, ಕೆಪಿಟಿಸಿಎಲ್‌ ಕಚೇರಿಗಳು ಸೇರಿದಂತೆ ಚಾಲುಕ್ಯ ವೃತ್ತದ ಸುತ್ತಮುತ್ತ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

11/64 ಕೆವಿ ‘ಎ’ ಕೇಂದ್ರದಲ್ಲಿ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗೆ ಕೆ.ಆರ್‌. ವೃತ್ತದಲ್ಲಿರುವ ಬೆಸ್ಕಾಂ ಪ್ರಧಾನ ಕಚೇರಿ, ಆನಂದರಾವ್‌ ವೃತ್ತದಲ್ಲಿರುವ ಕೆಪಿಟಿಸಿಎಲ್‌ ಕಚೇರಿಗಳು, ಕುಮಾರಕೃಪ ಅತಿಥಿಗೃಹ, ಕಾವೇರಿ ಭವನ, ಕಂದಾಯ ಭವನ, ಕ್ರೆಸೆಂಟ್ ರಸ್ತೆ ಸೇರಿದಂತೆ ರೇಸ್‌ಕೋರ್ಸ್‌ ರಸ್ತೆ ಸುತ್ತಮುತ್ತಲಿನ ಪ್ರಮುಳ ಸ್ಥಳಗಳಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಗೆಳೆಯ ಪ್ರೀತಿಸಿದ ಹುಡುಗಿಗೆ ಬ್ಲ್ಯಾಕ್ ಮ್ಯಾಜಿಕ್, ಸುತ್ತಾಡಿಸಿದ ಭೂಪ, ಕೊಲೆಯಲ್ಲಿ ಅಂತ್ಯ!

ಕ್ರೆಸೆಂಟ್‌ ರಸ್ತೆ, ಶೇಷಾದ್ರಿ ರಸ್ತೆ, ಕುರುಬರ ಸಂಘ ವೃತ್ತ, ಗಾಂಧಿನಗರ 1ನೇ ಮುಖ್ಯರಸ್ತೆ, ಕರ್ನಾಟಕ ನ್ಯಾಯಾಂಗ ಅಕಾಡೆಮಿ, ತಾಜ್‌ ವೆಸ್ಟೆಂಡ್‌ ಹೋಟೆಲ್‌, ಶಿವಾನಂದ ಸರ್ಕಲ್‌, ಶೇಷಾದ್ರಿಪುರ,ಕುಮಾರಪಾರ್ಕ್, ಕೆ.ಜಿ. ರಸ್ತೆಯ ಭಾಗ, ಕಬ್ಬನ್‌ ಪೇಟೆ, ರೇಸ್‌ಕೋರ್ಸ್‌ ಮುಖ್ಯರಸ್ತೆ, ಖನಿಜ ಭವನ, ಚಾಲುಕ್ಯ ವೃತ್ತ, ಬಿ.ವಿ.ಕೆ. ಅಯ್ಯಂಗಾರ್‌ ರಸ್ತೆ, ಕಬ್ಬನ್‌ ಪೇಟೆ ಸುತ್ತಮುತ್ತ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ.