ಉಪನಗರ ಸಂಪಿಗೆ ರೈಲ್ವೆ ಮಾರ್ಗಕ್ಕೆ 1442 ಕೋಟಿ ವೆಚ್ಚ, ಆ.9 ಟೆಂಡರ್ ಅರ್ಜಿ ಹಾಕಲು ಕೊನೆ ದಿನ
ಬೆಂಗಳೂರು ವಿಮಾನ ನಿಲ್ದಾಣ ಸಂಪರ್ಕಿಸಲಿರುವ ಉಪನಗರ ಶ್ರೀ ರೈಲ್ವೇಯ 'ಸಂಪಿಗೆ' ಕಾರಿಡಾರ್‌ನಲ್ಲಿ ಮೊದಲ ಹಂತವಾಗಿ ಕೆಎಸ್‌ಆರ್ ರೈಲ್ವೆ ನಿಲ್ದಾಣದಿಂದ ಯಲಹಂಕದವರೆಗೆ ಮಾರ್ಗ ನಿರ್ಮಾಣಕ್ಕೆ ಕೆ-ರೈಡ್ ₹1442 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದೆ.
ಬೆಂಗಳೂರು (ಜು.28): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕಿಸಲಿರುವ ಉಪನಗರ ಶ್ರೀ ರೈಲ್ವೇಯ 'ಸಂಪಿಗೆ' ಕಾರಿಡಾರ್‌ನಲ್ಲಿ ಮೊದಲ ಹಂತವಾಗಿ ಕೆಎಸ್‌ಆರ್ ರೈಲ್ವೆ ನಿಲ್ದಾಣದಿಂದ ಯಲಹಂಕದವರೆಗೆ ಮಾರ್ಗ ನಿರ್ಮಾಣಕ್ಕೆ ಕೆ-ರೈಡ್ ₹1442 ಕೋಟಿ ವೆಚ್ಚದ ಟೆಂಡರ್ ಆಹ್ವಾನಿಸಿದೆ.
ಇದೀಗ ಮೊದಲ ಹಂತದಲ್ಲಿ 18 ಕಿ.ಮೀ. (ಕಾರಿಡಾರ್ -1ಎ) ಮಾರ್ಗ ಮತ್ತು ನಿಲ್ದಾಣಗಳ ನಿರ್ಮಾಣಕ್ಕೆ ಟೆಂಡರ್‌ಅಹ್ವಾನಿಸಲಾಗಿದೆ. ಟೆಂಡರ್ ಪ್ಯಾಕೇಜ್ 14.5 ಕಿ.ಮೀ. ಉದ್ದದ ಎತ್ತರಿಸಿದ (ಎಲಿವೆಟೆಡ್) ಮಾರ್ಗ ನಿರ್ಮಾಣ, 3.5 ಕಿ.ಮೀ. ಉದ್ದದ ನೆಲಮಟ್ಟದ ಮಾರ್ಗದ ನಿರ್ಮಾಣ, ಏಳು ನಿಲ್ದಾಣಗಳ ಕಟ್ಟಡಗಳು ಮತ್ತು ಒಂದು ರೈಲ್ವೆಓವರ್‌ಬ್ರಿಡ್ಜ್ ನಿರ್ಮಾಣ ಒಳಗೊಂಡಿದೆ.
ಕ್ರೆಡಿಟ್ ಪಡೆಯಲು ಕಾಂಗ್ರೆಸ್ ಸಂಸದರು, ಬಿಜೆಪಿ ಮಂತ್ರಿಗಳ ಜಿದ್ದು,ಕಲಬುರಗಿ- ಬೆಂಗಳೂರು ವಂದೇ ಭಾರತ್ ರದ್ದು!
'ಸಂಪಿಗೆ' ಕಾರಿಡಾರ್‌ನಲ್ಲಿ ಮೊದಲ ಹಂತದ ಈ ಕಾಮಗಾರಿಯನ್ನು 2027 ರಲ್ಲಿ ಪೂರ್ಣಗೊಳಿಸಲು ಕೌ-ರೈಡ್ ಮಧ್ಯಂತರ ಗುರಿಯನ್ನು ಇಟ್ಟು ಕೊಂಡಿದೆ. ಅದರಂತೆ ಇದೀಗ ಟೆಂಡರ್ ಕರೆದಿದ್ದು, ಅ.9 ಟೆಂಡರ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಎರಡನೇ ಹಂತದಲ್ಲಿ ಯಲಹಂಕದಿಂದ - ದೇವನಹಳ್ಳಿವರೆಗೆ (23 ಕಿ.ಮೀ.) ಯೋಜನೆಯನ್ನು ಕೈಗೆತ್ತಿಕೊಳ್ಳಲಾಗು ವುದು ಎಂದು ಅಧಿಕಾರಿಗಳು ತಿಳಿಸಿ ದ್ದಾರೆ. ಕಾರಿರ್ಡಾ- 1 (ಸಂಪಿಗೆ ಮಾರ್ಗ) ನಿರ್ಮಾಣಕ್ಕೆ ಯುರೋಪಿಯನ್ ಇನ್ವೆಸ್ಟೆಮೆಂಟ್ ಬ್ಯಾಂಕ್ 30 ತಿಂಗಳ ಅವಧಿಯ ಒಪ್ಪಂದದೊಂದಿಗೆ ಸಾಲ ನೀಡುತ್ತಿದೆ. ಟೆಂಡರ್ ಬಳಿಕ ಕಾರ್ಯಾದೇಶ ನೀಡಿ ಆದಷ್ಟು ಬೇಗ ಕಾಮಗಾರಿ ಆರಂಭಿಸಲಾಗುವುದು ಎಂದು ಕೆ ರೈಡ್ ಅಧಿಕಾರಿಗಳು ತಿಳಿಸಿದರು.
ಉಪನಗರ ರೈಲ್ವೇ ಯೋಜನೆಯಲ್ಲಿ ಹೆಚ್ಚಿನ ಪ್ರಾಮುಖ್ಯತೆ ಹೊಂದಿರುವ ಮಾರ್ಗವಿದು. ಒಟ್ಟಾರೆ ಕೆಎಸ್‌ಆರ್- 41.40 ಕಿ ಮೀ ಸಂಪರ್ಕ ಕಲಿಸಲಿದೆ. ನಗರದ ಟ್ರಾಫಿಕ್ ಸಮಸ್ಯೆ ನಿವಾರಣೆಗೆ ಹೆಚ್ಚಿನ ಕೊಡುಗೆ ನೀಡುವ ನಿರೀಕ್ಷೆಯಿದೆ.
ಪ್ರಸ್ತುತ ಬೈಯಪ್ಪನಹಳ್ಳಿ- ಚಿಕ್ಕಬಾಣಾವರ ನಡುವಿನ 'ಮಲ್ಲಿಗೆ ಮಾರ್ಗ' ಕಾರಿಡಾರ್ ಕಾಮಗಾರಿ ₹960 ಕೋಟಿ ವೆಚ್ಚದಲ್ಲಿ ನಡೆಯು ತಿದ್ದು, ಶೇ.35ರಷ್ಟು ಮುಗಿದಿದೆ. ಜತೆಗೆ ಹೀಲಲಿಗೆ- ರಾಜಾನುಕುಂಟೆ 'ಕನಕ ಮಾರ್ಗ'ದ ಕಾರಿಡಾರ್ ಕಾಮಗಾರಿ 1040 ಕೋಟಿ ವೆಚ್ಚದಲ್ಲಿ ಪ್ರಾರಂಭವಾಗಿದೆ. ఎరడ ಕಾರಿಡಾರ್ ಕಾಮಗಾರಿಯನ್ನು ಲಾರ್ಸೆನ್ ಆ್ಯಂಡ್ ಟರ್ಬೋ ಕಂಪನಿಯು ನಿರ್ವಹಿಸುತ್ತಿದೆ.
ಮಣ್ಣು ಕುಸಿತದಿಂದ ಬೆಂಗಳೂರು-ಮಂಗಳೂರು ಟ್ರೈನ್ ಸಂಚಾರ ಬಂದ್, ಪರ್ಯಾಯ ರೈಲು ಮಾರ್ಗ ಸೂಚಿಸಿದ ಇಲಾಖೆ
ರೈಲ್ವೆ ಬಜೆಟ್‌ನಲ್ಲಿ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ: ಪಿ.ಸಿ.ಮೋಹನ್
ಈ ಬಾರಿಯ ರೈಲ್ವೆ ಬಜೆಟ್‌ನಲ್ಲಿ ಬಹುನಿರೀಕ್ಷಿತ ಬೆಂಗಳೂರು ಉಪನಗರ ರೈಲು ಯೋಜನೆಗೆ ಕೇಂದ್ರ ಸರ್ಕಾರ ₹350 ಕೋಟಿ ತೆಗೆದಿರಿಸಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ₹100 ಕೋಟಿ ಕಡಿಮೆ ಹಣವನ್ನು ಈ ಬಾರಿ ನೀಡಲಾಗುತ್ತಿದೆ. ಬೆಂಗಳೂರು ಉಪನಗರ ರೈಲು ಯೋಜನೆಯು 40 ವರ್ಷಗಳಿಂದ ನೆನೆಗುದಿಗೆ ಬಿದ್ದಿದುವ ಮಹತ್ವಾಕಾಂಕ್ಷಿ ಯೋಜನೆ. ಈ ರೈಲು ಯೋಜನೆಯಡಿ 148 ಕಿ.ಮೀ. ರೈಲು ಮಾರ್ಗ ನಿರ್ಮಿಸುವ ಉದ್ದೇಶವಿದ್ದು, ಇದಕ್ಕಾಗಿ ₹15,767 ಕೋಟಿ ವೆಚ್ಚ ಅಂದಾಜಿಸಲಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ತಲಾ ಶೇ.40ರಷ್ಟು ಹಣ ವೆಚ್ಚ ಮಾಡಲಿದ್ದು, ಉಳಿದ ಹಣವನ್ನು ಪರ್ಯಾಯ ಮೂಲಗಳಿಂದ ಸಂಗ್ರಹಿಸಲು ನಿರ್ಧರಿಸಲಾಗಿದೆ.
ಸದ್ಯ ಕರ್ನಾಟಕದ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಕಂಪನಿಯು ಚಿಕ್ಕಬಾಣಾವರ ಮತ್ತು ಬೈಯಪ್ಪನಹಳ್ಳಿ ಕಾರಿಡಾರ್ ನಡುವೆ ಕಾಮಗಾರಿ ನಡೆಸುತ್ತಿದೆ. ಈ ಯೋಜನೆಯನ್ನು ಮೋದಿ ಸರ್ಕಾರ ಮುಂದಿನ 40 ತಿಂಗಳಲ್ಲಿ ಆದ್ಯತೆ ಮೇಲೆ ಪೂರ್ಣಗೊಳಿಸುವ ಗುರಿ ಇರಿಸಿದೆ. ಈ ಬಾರಿಯ ಬಜೆಟ್ನಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಯೋಜನೆಗೆ ₹350 ಕೋಟಿ ಅನುದಾನ ಘೋಷಣೆ ಮಾಡಿರುವುದನ್ನು ಸಂಸದ ಪಿ.ಸಿ.ಮೋಹನ್ ಸ್ವಾಗತಿಸಿದ್ದಾರೆ.
ಉಪನಗರ ರೈಲು ಕನಸು ನನಸು
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಬೆಂಬಲದೊಂದಿಗೆ ಬೆಂಗಳೂರು ಉಪನಗರ ರೈಲು ಯೋಜನೆಗೆ ₹350 ಕೋಟಿ ಅನುದಾನ ನೀಡಲಾಗಿದೆ. ಇದರೊಂದಿಗೆ ಬೆಂಗಳೂರಿಗರ 40 ವರ್ಷಗಳ ಉಪನಗರ ರೈಲು ಕನಸು ನನಸಾಗುವುದು ಸನ್ನಿಹಿತವಾಗಿದೆ. ಈ ಯೋಜನೆಯನ್ನು ಇನ್ನು 40 ತಿಂಗಳಲ್ಲಿ ಪೂರ್ಣಗೊಳಿಸುವ ಗುರಿ ಇದೆ.
-ಪಿ.ಸಿ.ಮೋಹನ್, ಸಂಸದ.