ದೌರ್ಜನ್ಯಕ್ಕೆ ಒಳಗಾದ ಎಸ್ಸಿ-ಎಸ್ಟಿಗೆ ಹಲವು ಸೌಲಭ್ಯ

  • ದೌರ್ಜನ್ಯಕ್ಕೆ ಒಳಗಾದ ಎಸ್ಸಿ-ಎಸ್ಟಿಗೆ ಹಲವು ಸೌಲಭ್ಯ
  • ಜಾಗೃತಿ ಮೂಡಿಸಿ ಕಾನೂನಿನಲ್ಲಿ ಹಲವು ಪ್ರಯೋಜನ
  • ಸೂಕ್ತ ಮಾಹಿತಿ ಪಡೆದು ಸದುಪಯೋಗ ಪಡೆಯಿರಿ: ಸಿದ್ದರಾಜು
Bengaluru SC ST Atrocities Prevention Act Many facilities

ಬೆಂಗಳೂರ (ಆ.17) : ಪರಿಶಿಷ್ಟಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಇರುವ ಹಲವು ನೆರವು, ಪ್ರಯೋಜನಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ನ್ಯಾಷನಲ್‌ ದಲಿತ್‌ ಮೂವ್‌ಮೆಂಟ್‌ ಫಾರ್‌ ಜಸ್ಟೀಸ್‌ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್‌.ಸಿದ್ದರಾಜು ಮನವಿ ಮಾಡಿದರು. ಪರಿಶಿಷ್ಟಜಾತಿ ಮತ್ತು ಪಂಗಡಗಳ ದೌರ್ಜನ್ಯ ತಡೆ ಕಾಯ್ದೆ, ನಿಯಮಗಳ ಕುರಿತು ದೌರ್ಜನ್ಯಕ್ಕೆ ಒಳಗಾದವರು ಮತ್ತು ವಕೀಲರ ನಡುವೆ ಉತ್ತಮ ಬಾಂಧವ್ಯ ಬೆಸೆಯಲು ಶಾಸಕರ ಭವನದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

 

ದೌರ್ಜನ್ಯಕ್ಕೊಳಗಾದ SC-ST ಜನಾಂಗಕ್ಕೆ ನ್ಯಾಯ ಒದಗಿಸುವಂತೆ ಧಾರವಾಡ ಜಿಲ್ಲಾಧಿಕಾರಿ ಸೂಚನೆ

ಎಸ್ಸಿ, ಎಸ್ಟಿದೌರ್ಜನ್ಯ ತಡೆ ಕಾಯ್ದೆಯನ್ವಯ ದೌರ್ಜನ್ಯಕ್ಕೆ ಒಳಗಾದವರು ತನಿಖಾಧಿಕಾರಿಗಳು ಕರೆದಾಗ ತೆರಳಲು ಪ್ರಯಾಣ ಭತ್ಯೆ ಸಿಗುತ್ತದೆ. 60 ವರ್ಷ ಮೇಲ್ಪಟ್ಟವರಾದರೆ ಸಹಾಯಕರನ್ನೂ ಕರೆದುಕೊಂಡು ಹೋದರೆ ಇಬ್ಬರಿಗೂ ಭತ್ಯೆ ನೀಡಲಾಗುವುದು, ಪೊಲೀಸ್‌ ಭದ್ರತೆ ಭದ್ರತೆ ಪಡೆಯಬಹುದು. ದೌರ್ಜನ್ಯಕ್ಕೆ ಒಳಗಾದವರು ನ್ಯಾಯಾಲಯದಲ್ಲಿ ವಾದ ಮಾಡಲು ಸರ್ಕಾರಿ ವಕೀಲರ ನೆರವು ಸಿಗಲಿದೆ, ಒಂದು ವೇಳೆ ಸರ್ಕಾರಿ ವಕೀಲರ ವಾದಶೈಲಿಯ ಬಗ್ಗೆ ಅಸಮಾಧಾನ ಉಂಟಾದರೆ ಖಾಸಗಿ ವಕೀಲರನ್ನು ನೇಮಿಸಿಕೊಳ್ಳಬಹುದು. ಇದಕ್ಕೆ ತಗಲುವ ವೆಚ್ಚವನ್ನೂ ಸರ್ಕಾರವೇ ಭರಿಸುತ್ತದೆ. ಈ ಎಲ್ಲದರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.

Karnataka Politics: ದಲಿತರ ಕಲ್ಯಾಣದ 7885 ಕೋಟಿ ಅಕ್ರಮ ಬಳಕೆ: ಸಿದ್ದರಾಮಯ್ಯ

ಸಂವಾದದಲ್ಲಿ ಹಾಸನ, ಬೆಳಗಾವಿ, ಗದಗ, ವಿಜಯಪುರ, ಮಂಡ್ಯ ಮತ್ತಿತರ ಜಿಲ್ಲೆಗಳಿಂದ ದೌರ್ಜನ್ಯಕ್ಕೆ ಒಳಗಾದವರು ಹಾಜರಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಪ್ರಕರಣಗಳ ಅಭ್ಯಾಸ ನಡೆಸಿ ಇನ್ನಷ್ಟುಜನರಿಗೆ ನೆರವು ನೀಡಲಾಗುವುದು ಎಂದು ವಿವರಿಸಿದರು. ಸಂಘಟನೆಯ ರಾಷ್ಟ್ರೀಯ ಸಂಯೋಜಕ ಸಂಜಯ್‌ ಕುಮಾರ್‌, ದಲಿತ ಹಕ್ಕುಗಳ ಹೋರಾಟಗಾರ ಮನೋಹರ್‌, ವಕೀಲರಾದ ಮನೋರಂಜಿನಿ, ಪ್ರೊ.ಹರಿರಾಮ್‌, ಸುಭಾಷ್‌, ಲೋಕೇಶ್‌, ವಿಜಯಪುರದ ಸತೀಶ್‌, ಮಂಡ್ಯದ ಸುರೇಶ್‌, ಹಾಸನದ ಯೋಗೇಶ್‌ ಹಾಜರಿದ್ದರು.

Latest Videos
Follow Us:
Download App:
  • android
  • ios