ಬೆಂಗಳೂರಿನ ನೇರಳೆ ಮತ್ತು ಹಸಿರು ಮಾರ್ಗದ ಬಳಿಕ, ಹಳದಿ ಮೆಟ್ರೋ ಮಾರ್ಗವು ಜೂನ್ ಅಂತ್ಯದಲ್ಲಿ ವಾಣಿಜ್ಯ ಸೇವೆ ಆರಂಭಿಸಲಿದೆ. ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿ.ಮೀ ವ್ಯಾಪ್ತಿಯ ಈ ಮಾರ್ಗದಲ್ಲಿ 16 ನಿಲ್ದಾಣಗಳಿವೆ. ಬಿಎಂಆರ್‌ಸಿಎಲ್ ಈಗಾಗಲೇ ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದು, ಕೇಂದ್ರದ ಅನುಮತಿಗಾಗಿ ಕಾಯುತ್ತಿದೆ. ಆರಂಭದಲ್ಲಿ 3-4 ರೈಲುಗಳು 30 ನಿಮಿಷಗಳ ಅಂತರದಲ್ಲಿ ಸಂಚರಿಸಲಿವೆ.
ಬೆಂಗಳೂರು (ಏ.04): ಬೆಂಗಳೂರಿನಲ್ಲಿ ಈವರೆಗೆ ನೇರಳೆ ಮತ್ತು ಹಸಿರು ಲೈನ್ ಮಾರ್ಗಗಳಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ಮಾಡುತ್ತಿದೆ. ಇದೀಗ ಬೆಂಗಳೂರಿಗೆ ಮತ್ತೊಂದು ಬಣ್ಣದ ಹಳದಿ ಮೆಟ್ರೋ ರೈಲು ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸಲು ಮುಂದಾಗಿದೆ. ಸಿಲಿಕಾನ್ ಸಿಟಿಯ ಅತ್ಯಂತ ಜನಸಂದಣಿ ಪ್ರದೇಶಗಳಾದ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿ.ಮೀ. ಮೆಟ್ರೋ ಸೇವೆ ಆರಂಭವಾಗಲಿದೆ.
ಹೌದು, ಆರ್‌ವಿ ರಸ್ತೆ ಟು ಬೊಮ್ಮಸಂದ್ರ ಮಾರ್ಗದ ಮೆಟ್ರೋ ಪ್ರಯಾಣಿಕರಿಗೆ ಕೊನೆಗೂ ಸಿಹಿಸುದ್ದಿ ಸಿಕ್ಕಿದೆ. ಜೂನ್ ತಿಂಗಳ ಕೊನೆ ವಾರದಲ್ಲಿ ಯೆಲ್ಲೋ ಲೈನ್ ಸಂಚಾರ ಫಿಕ್ಸ್ ಮಾಡಲಾಗಿದೆ. ಜೂನ್ ತಿಂಗಳಲ್ಲಿ ಯೆಲ್ಲೋ ಲೈನ್ ವಾಣಿಜ್ಯ ಸಂಚಾರಕ್ಕೆ ಬೆಂಗಳೂರು ಮೆಟ್ರೋ ರೈಲ್ ಕಾರ್ಪೋರೇಷನ್ ಲಿ. (BMRCL) ಸಿದ್ದತೆ ಮಾಡಿಕೊಂಡಿದೆ. ಆರ್.ವಿ.ರಸ್ತೆಯಿಂದ ಬೊಮ್ಮಸಂದ್ರದವರೆಗೆ 18.82 ಕಿ.ಮೀ ಇರುವ ಹಳದಿ ಮಾರ್ಗದಲ್ಲಿ 16 ಎಲಿವೇಟೆಡ್ ನಿಲ್ದಾಣಗಳಿವೆ. ಇಲ್ಲಿ ಯಾವುದೇ ಭೂಗತ ನಿಲ್ದಾಣಗಳಿಲ್ಲ.
ಈಗಾಗಲೇ ಬಿಎಂಆರ್‌ಸಿಎಲ್ ವತಿಯಿಂದ ಈ ಮಾರ್ಗದಲ್ಲಿ ರೈಲು ಸಂಚಾರಕ್ಕೆ ಬೇಕಾಗಿರುವ ಎಲ್ಲ ಪರೀಕ್ಷೆಗಳನ್ನ ಮುಗಿಸಿ ವಾಣಿಜ್ಯ ಸೇವೆಗಾಗಿ ರೈಲು ಸಂಚಾರ ಮಾಡುವ ಬಗ್ಗೆ ಕೇಂದ್ರದ ಅನುಮತಿಗಾಗಿ ಕಾಯಲಾಗುತ್ತಿದೆ. ಇಲ್ಲಿ ಜನರಿಗೆ ಸೇವೆಯನ್ನು ನೀಡುವುದಕ್ಕಾಗಿ ಈಗಾಗಲೇ ಬಿಎಂಆರ್‌ಸಿಎಲ್‌ಗೆ 2 ಲೋಕೋ ಪೈಲೆಟ್ ರೈಲು ಕೂಡ ಬಂದಿವೆ. ಇದರ ಬೆನ್ನಲ್ಲೇ ಮೂರನೇ ರೈಲು ಸಹ ರೀಚ್ ಆಗುವ ಸಾಧ್ಯತೆಯಿದೆ. ಈ ತಿಂಗಳ ಕೊನೆಯ ವಾರದಲ್ಲಿ 3ನೇ ರೈಲು ಹಾಗೂ ಜೂನ್ ಮೊದಲ ವಾರದಲ್ಲಿ ಮತ್ತೊಂದು 4ನೇ ರೈಲು ಬಿಎಂಆರ್‌ಸಿಎಲ್ ಕೈಸೇರಲಿದೆ.
ಇದನ್ನೂ ಓದಿ: ನಮ್ಮ ಮೆಟ್ರೋ ನೇರಳೆ ಮಾರ್ಗಕ್ಕೆ ಬೆಮಲ್‌ನಿಂದ 7 ರೈಲು, 405 ಕೋಟಿ ರೂಪಾಯಿ ಆರ್ಡರ್!
ಅಂದುಕೊಂಡಂತೆ ಆದರೆ ಹಳದಿ ಮಾರ್ಗದಲ್ಲಿ ಜೂನ್ ತಿಂಗಳಾಂತ್ಯದಲ್ಲಿಯೇ ಮೆಟ್ರೋ ವಾಣಿಜ್ಯ ಸಂಚಾರ ಫಿಕ್ಸ್ ಆಗಲಿದೆ. ಇನ್ನು ಜೂನ್ ಕೊನೆ ವಾರದವರೆಗೆ ಎಲ್ಲ ರೈಲುಗಳ ಟೆಸ್ಟಿಂಗ್ ಕಾರ್ಯ ಮುಗಿಸಿ ವಾಣಿಜ್ಯ ಸಂಚಾರ ಆರಂಭಿಸಲು ಫ್ಲಾನ್ ಮಾಡಲಾಗಿದೆ. ಮೊದಲ ಹಂತದಲ್ಲಿ 3 ಅಥವಾ 4 ರೈಲುಗಳಿಂದಲೇ ವಾಣಿಜ್ಯ ಸಂಚಾರ ಆರಂಭವಾಗಲಿದೆ. ಇಲ್ಲಿ 30 ನಿಮಿಷಕ್ಕೆ ಒಂದು ಟ್ರೈನ್ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ನಂತರ ಹಂತ ಹಂತವಾಗಿ ಮೆಟ್ರೋ ಟ್ರೈನ್ ಗಳ ಸಂಖ್ಯೆ ಹೆಚ್ಚಿಸಲಾಗುತ್ತದೆ. ಒಟ್ಟು 15 ರೈಲು ಟಿಟಾಗಾರ್‌ನಿಂದ ಬಂದ ನಂತರ ಸಂಪೂರ್ಣ ಸಂಚಾರ ಆರಂಭವಾಗಲಿದೆ. ಆಗ ಅಂದರೆ, ಮುಂದಿನ ವರ್ಷದ ವೇಳೆಗೆ ಪೀಕ್ ಅವರ್‌ನಲ್ಲಿ 7 ನಿಮಿಷಕ್ಕೊಂದು ಮತ್ತು ನಾನ್ ಪೀಕ್ ಅವರ್‌ನಲ್ಲಿ 15 ನಿಮಿಷಕ್ಕೆ ರೈಲು ಕಾರ್ಯಚರಣೆಗೆ ಸಿದ್ದತೆ ಮಾಡಿಕೊಳ್ಳಲಾಗಿದೆ.
