ಬೆಂಗಳೂರಿನ ದಿ ಪಾರ್ಕ್ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಮತ್ತಷ್ಟು ವಿದೇಶಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ದಿ ಪಾರ್ಕ್ ಹೊಟೆಲ್‌ನಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ದಾಳಿ ಆರಂಭಿಸಿದ್ದಾರೆ.
ಬೆಂಗಳೂರು (ಜೂನ್ 18 ): ಬೆಂಗಳೂರಿನ ದಿ ಪಾರ್ಕ್ ಹೊಟೇಲ್ ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಮತ್ತಷ್ಟು ವಿದೇಶಿಗರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇದೇ ತಿಂಗಳ ಜೂನ್ 14 ರಂದು ದಾಳಿ ನಡೆಸಿದ್ದ ಹಲಸೂರು ಪೊಲೀಸರು ಬಾಲಿವುಡ್ ಸೂಪರ್ ಸ್ಟಾರ್ ಶಕ್ತಿ ಕಪೂರ್ ಪುತ್ರ ಸಿದ್ಧಾಂತ್ ಕಪೂರ್ ಸೇರಿ ಹಲವರನ್ನ ವಶಕ್ಕೆ ಪಡೆದಿದ್ರು. ದಾಳಿ ವೇಳೆ 150 ಕ್ಕೂ ಮಂದಿ ಪಾರ್ಟಿಯಲ್ಲಿ ಇದ್ದವರಲ್ಲಿ ಹಲವರು ಪರಾರಿಯಾಗಿದ್ರು. ಈ ಹಿನ್ನಲೆ ಪೊಲೀಸರು ಪರಾರಿಯಾದವರು ಹಾಗೂ ಪೆಡ್ಲರ್ ಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ದಿ ಪಾರ್ಕ್ ಹೊಟೆಲ್‌ನಲ್ಲಿ ಸಿಕ್ಕ ಸಿಸಿ ಕ್ಯಾಮರಾ ದೃಶ್ಯ ಆಧರಿಸಿ ದಾಳಿ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಇರುವ ಎಲೆಗೆಂಟ್ ಆಸ್ಟರ್ ಅಪಾರ್ಟ್ ಮೆಂಟ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಮಾತ್ರವಲ್ಲ ಇದೇ ಅಪಾರ್ಟ್ ಮೆಂಟ್ ಡ್ರಗ್ ಪಾರ್ಟಿ ನಡೆಯುತ್ತಿದೆ ಎಂಬ ಅನುಮಾನದ ಮೇಲೆ ದಾಳಿ ನಡೆಸಲಾಗಿತ್ತು ಎಂದು ತಿಳಿದುಬಂದಿದೆ.
Uttara Kannada; ಪಿಯುಸಿಯಲ್ಲಿ ಫೇಲ್ ಆಗಿದ್ದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ
ಇದೇ ವೇಳೆ ಅನುಮಾನ ಬಂದ ಹೊರ ರಾಜ್ಯ ಹಾಗೂ ವಿದೇಶಗರನ್ನ ವಶಕ್ಕೆಪಡೆದು ವೈದ್ಯಕೀಯ ತಪಾಸಣೆ ಒಳಪಡಿಸಲಾಗಿದೆ. ಅಲ್ಲದೆ, ದಿ ಪಾರ್ಕ್ ಹೋಟೆಲ್ ಪಾರ್ಟಿಗೆ ಸಂಭಧಿಸಿದಂತೆ ತನಿಖೆ ಮುಂದುವರೆಸಿದ್ದಾರೆ. ಅಲ್ಲದೆ ಅನುಮಾನ ಬರುವ ಎಲ್ಲಾ ಪಿಜಿ, ಹೋಟೆಲ್ ಗಳಲ್ಲಿಯೂ ಪೊಲೀಸರು ಇನ್ನಿಲ್ಲಸ ತಪಾಸಣೆ ಮುಂದುವರೆಸಿದ್ದಾರೆ.
ಡ್ರಗ್ಸ್ ಜಾಲದ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ, ಬಂಧನದ ಬಳಿಕ ಮಾತನಾಡಿದ ಸಿದ್ಧಾಂತ್ 'ನಾನು ಡ್ರಗ್ಸ್ ಸೇವಿಸಿಲ್ಲ ಆದರೆ ನನ್ನ ಸ್ನೇಹಿತರು ಪಾನೀಯಗೆ ಮಿಕ್ಸ್ ಮಾಡಿ ಕೊಟ್ಟರು. ನನಗೆ ಇದರ ಬಗ್ಗೆ ಗೊತ್ತೇ ಇರಲಿಲ್ಲ. ನಾನು ಹೋಟೆಲ್‌ನಲ್ಲಿ ಇದ್ದಾಗಲೇ ತನಿಖೆ ಆರಂಭವಾಗಿತ್ತು. ಪೊಲೀಸರ ತನಿಖೆಗೆ ನಾನು ಸಹಕಾರ ನೀಡುತ್ತಿರುವೆ. ಬೆಂಗಳೂರು ಪೊಲೀಸರು ತುಂಬಾ ಒಳ್ಳೆಯವರು, ಒಳ್ಳೆ ಕೆಲಸ ಮಾಡುತ್ತಿದ್ದಾರೆ. ಈ ಕೆಲಸ ಮಾಡುವ ಮೂಲಕ ಅನೇಕ ಜೀವನಗಳನ್ನು ಉಳಿಸಬಹುದು ಎಂದು ಸಿದ್ಧಾಂತ್ ಕಪೂರ್ ಬಂಧನದ ಬಳಿಕ ಹೇಳಿಕೆ ನೀಡಿದ್ದರು. ಬಳಿಕ ಸಿದ್ದಾಂತ್ ಗೆ ಜಾಮೀನು ಲಭಿಸಿತ್ತು.
2nd PUC Result Toppers List; ದಕ ಜಿಲ್ಲೆಯ ಐವರು ವಿದ್ಯಾರ್ಥಿಗಳು ಟಾಪರ್ಸ್, ಕಲಾ ವಿಭಾಗದಲ್ಲಿ ಶೂನ್ಯ!
ಬೆಂಗಳೂರು ಡ್ರಗ್ಸ್ ಕೆಸ್‌ನಲ್ಲಿ ಮತ್ತೊಬ್ಬ ಸೆಲೆಬ್ರಿಟಿಗೆ ಸಂಕಷ್ಟ ಬಂದೊದಗಿದೆ. ಬಾಲಿವುಡ್‌ನಿಂದ ಈ ಜಾಲ ಈಗ ಟಾಲಿವುಡ್‌ಗೂ ಹರಡಿರುವ ಶಂಕೆ ವ್ಯಕ್ತವಾಗಿದೆ. ಟಾಲಿವುಡ್‌ನ ಸುಪ್ರಸಿದ್ಧ ನಟಿಯ ತಮ್ಮ ನಿಶಾಂತ್‌ಗಾಗಿ ಪೊಲೀಸರು ಶೋಧ ಆರಂಭವಾಗಿದೆ. ಎಂ.ಜಿ.ರಸ್ತೆ ಟ್ರಿನಿಟಿ ವೃತ್ತ ಸಮೀಪದ ‘ದಿ ಪಾರ್ಕ್’ ಹೋಟೆಲ್ ಮೇಲೆ ಭಾನುವಾರ ತಡರಾತ್ರಿ ಪೊಲೀಸರು ದಾಳಿ ಮಾಡಿದ್ದರು. ದಾಳಿ ವೇಳೆ 2 ಪೊಟ್ಟಣ ಗಾಂಜಾ ಮತ್ತು 7 ಎಂಡಿಎಂಎ ಮಾತ್ರೆಗಳು ಪತ್ತೆಯಾಗಿತ್ತು.
2nd PUC Result 2022 ; 32 ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಮಾಹಿತಿ
ಇನ್ನು ಈ ರೇವ್ ಪಾರ್ಟಿಯಲ್ಲಿ 150 ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ ಎನ್ನಲಾಗುತ್ತಿದೆ. THE PARK' 5 ಸ್ಟಾರ್ ಹೊಟೇಲ್‌ನಲ್ಲಿ ನಡೆಯುತ್ತಿದ್ದ ಡ್ರಗ್ಸ್ ಪಾರ್ಟಿ ಮೇಲೆ ದಾಳಿ ನಡೆಸಿ 35 ಕ್ಕೂ ಹೆಚ್ಚು ಮಂದಿಯನ್ನು ಹಲಸೂರು ಪೊಲೀಸರು ವಶಕ್ಕೆ ಪಡೆದಿದ್ದರು. ಹಲಸೂರು ಇನ್ಸ್‌ಪೆಕ್ಟರ್ ಮಂಜುನಾಥ್ ನೇತೃತ್ವದಲ್ಲಿ ದಾಳಿ ನಡೆದಿತ್ತು. 35 ಮಂದಿಯಲ್ಲಿ 5 ಮಂದಿ ಡ್ರಗ್ಸ್ ಸೇವನೆ ಮಾಡಿರುವುದು ದೃಢಪಟ್ಟಿತ್ತು.
"
