ಬೆಂಗಳೂರಿನ ಅಧಿಕೃತ ಭಾಷೆಯ ಬಗ್ಗೆ ಯುವತಿಯರು ತಪ್ಪು ಉತ್ತರ ನೀಡಿದ ವಿಡಿಯೋ ವೈರಲ್ ಆಗಿದೆ. ಬೆಂಗಳೂರಗೆ ಬಂದು ನೆಲೆಸಿದವರೊಂದಿಗೆ ಅವರ ಭಾಷೆಯಲ್ಲಿಯೇ ಮಾತನಾಡಿದ್ದಕ್ಕೆ ಕನ್ನಡಿಗರ ಸಿಕ್ಕ ಮರ್ಯಾದೆ ಎಂದು ಕೆಲವರು ಹೇಳುತ್ತಿದ್ದಾರೆ..
ಬೆಂಗಳೂರು (ಮಾ.03): ಭಾರತದಲ್ಲಿ ಶಾಸ್ತ್ರೀಯ ಸ್ಥಾನಮಾನ ಪಡೆದ ಅತ್ಯಂತ ಹಳೆಯ ಭಾಷೆಗಳಲ್ಲಿ ಕನ್ನಡವೂ ಕೂಡ ಒಂದಾಗಿದೆ. ಅದರಲ್ಲಿಯೂ ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಎಲ್ಲ ಉತ್ತರ ಭಾರತ, ಈಶಾನ್ಯ ಭಾಗ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿದಂತೆ ಎಲ್ಲ ಜನರೂ ಬಂದು ನೆಲೆಸಿದ್ದಾರೆ. ಆದರೆ, ಇದೀಗ ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂದು ಕೇಳಿದರೆ ಇಲ್ಲಿನ ಕೆಲವು ಯುವತಿಯರು ಹಿಂದಿ, ಇಂಗ್ಲೀಷ್, ಮಲೆಯಾಳಂ ಎಂದು ಉತ್ತರ ಕೊಟ್ಟಿದ್ದಾರೆ. ಈ ವಿಡಿಯೋ ಭಾರೀ ವೈರಲ್ ಆಗಿದೆ.
ಹೌದು, ಬೆಂಗಳೂರು ಎಂದಾಕ್ಷಣ ಇದು ಸರ್ವ ಜನಾಂಗದ ಶಾಂತಿಯ ತೋಟ ಎಂಬ ಕುವೆಂಪು ಅವರ ಕಾವ್ಯಕ್ಕೆ ಸೂಕ್ತವಾಗಿದೆ. ಇದೀಗ ಸರ್ವಭಾಷೆಯ ಶಾಂತಿಯ ತೋಟವೂ ಆಗಿದೆ. ಕರ್ನಾಟಕ ರಾಜಧಾನಿ ಆಗಿರುವ ಕರ್ನಾಟಕದಲ್ಲಿ ಕನ್ನಡ ಅಧಿಕೃತ ಭಾಷೆ ಎನ್ನುವುದು ಕನ್ನಡಿಗರಿಗೆ ಮಾತ್ರ ಗೊತ್ತಿರುವ ವಿಚಾರವಾಗಿದೆ. ಆದರೆ, ಹೊರಗಿನಿಂದ ಬಂದು ಇಲ್ಲಿ ನೆಲೆಸಿದವರಿಗೆ ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂಬುದೇ ಗೊತ್ತಿಲ್ಲ. ಹೀಗಾಗಿ, ಬಹುತೇಕರು ಬೆಂಗಳೂರಿಗೆ ಬಂದು ಅವರವರದ್ದೇ ಭಾಷೆಯನ್ನು ಮಾತನಾಡುತ್ತಾ, ಅವರದ್ದೇ ಭಾಷೆಯಲ್ಲಿ ಸ್ಥಳೀಯ ಜನರೊಂದಿಗೂ ವ್ಯವಹಾರ ಮಾಡುತ್ತಾ ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ. ಇವರಿಗೆ ಕನ್ನಡ ಭಾಷೆಯ ಅನಿವಾರ್ಯತೆಯೇ ಬಂದಿಲ್ಲ. ಹೀಗಾಗಿಯೇ ಬೆಂಗಳೂರಿನ ಅಧಿಕೃತ ಭಾಷೆ ಯಾವುದೆಂಬುದೇ ದೇಶದ ಜನತೆಗೆ ಗೊತ್ತಿಲ್ಲದಂತಾಗಿದೆ.
ಭಾರತದಲ್ಲಿ ಸಿಲಿಕಾನ್ ಸಿಟಿ, ಐಟಿ ಸಿಟಿ, ಉದ್ಯಾನ ನಗರಿ, ವಾಸಯೋಗ್ಯ ನಗರಿ, ನೈಟ್ ಪಾರ್ಟಿ ನಗರಿ ಎಂದು ಖ್ಯಾತವಾಗಿರುವ ಬೆಂಗಳೂರಿನಲ್ಲಿ ಭಾರತದ ಯಾವುದೇ ಭಾಷೆಯನ್ನು ಮಾತನಾಡಿದರೂ, ಅಥವಾ ಜಾಗತಿಕ ಮಟ್ಟದ ವ್ಯಾವಹಾರಿಕ ಭಾಷೆ ಇಂಗ್ಲೀಷ್ ಮಾತನಾಡಿದರೂ ಸಾಕು ಇಲ್ಲಿ ನೆಲೆಸಬಹುದು. ಉದ್ಯೋಗವನ್ನು ಅರಸಿ ಬಂದಿರುವ ಅನೇಕರು ಬೆಂಗಳೂರಿನ ಬಗ್ಗೆ ಒಂಚೂರು ಅಭಿಮಾನವನ್ನು ತೋರಿಸುವುದಿಲ್ಲ. ಹೀಗಿರುವಾಗ ಬೆಂಗಳೂರಿನ ಅಧಿಕೃತ ಭಾಷೆಯ ಬಗ್ಗೆ ಯಾರು ತಲೆ ಕೆಡಿಸಿಕೊಳ್ಳುತ್ತಾರೆ ಎಂಬುದು ಪ್ರಶ್ನೆಯಾಗಿದೆ. ಬೆಂಗಳೂರಿನಲ್ಲಿ ಕೆಲವು ಪ್ರದೇಶಗಳಿಗೆ ಕನ್ನಡಿಗರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಕಾರಣ ಆ ಪ್ರದೇಶದಲ್ಲಿ ನೆಲೆಸಿರುವ ಎಲ್ಲರೂ ಹಿಂದಿಮ ಇಂಗ್ಲೀಷ್ ಭಾಷೆಯರವಾಗಿದ್ದಾರೆ. ಅವರಿಗೆ ಕನ್ನಡದ ಅಗತ್ಯವೇ ಇಲ್ಲ.
ಇದನ್ನೂ ಓದಿ: ಆಂಕರ್ ಅನುಶ್ರೀ ನಿರೂಪಣೆಗೆ ವಿರೋಧ: ಮುಟ್ಟಿನೋಡಿಕೊಳ್ಳುವಂತೆ ಟಾಂಗ್ ಕೊಟ್ಟ ಬ್ಯೂಟಿ!
ಇಲ್ಲಿ ಒಬ್ಬ ಯುವಕ ಬೆಂಗಳೂರಿನ ಅಧಿಕೃತ ಭಾಷೆ ಯಾವುದು ಎಂದು ಕೇಳುತ್ತಿರುವ ವಿಡಿಯೋ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಬೆಂಗಳೂರಿನ ಅಧಿಕೃತ ಭಾಷೆಯನ್ನು ಕೆಲವರು ಹಿಂದಿ, ಇನ್ನು ಕೆಲವರು ಇಂಗ್ಲಿಷ್, ಮಲಯಾಳಂ, ಸಂಸ್ಕೃತ ಅಥವಾ ತಮಿಳು ಎಂದು ಹೇಳುವುದು ಕಾಣಿಸುತ್ತದೆ. ಆದರೆ ಯಾರೊಬ್ಬರು ಕೂಡ ಕನ್ನಡ ಎಂದು ಹೇಳುವುದಿಲ್ಲ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ಬೆನ್ನಲಲಿಯೇ ಕನ್ನಡಗರಿಂದ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಅಧಿಕೃತ ಮತ್ತು ಮಾತೃ ಭಾಷೆಗೆ ಮಾಹಿತಿ ತಿಳಿದುಕೊಳ್ಳದವರ ಬಗ್ಗೆ ಕನ್ನಡಿಗರು ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿ ಸಮಾಧಾನಕರ ಸಂಗತಿ ಎಂದರೆ ಈ ವಿಡಿಯೋವನ್ನು ಬೆಂಗಳೂರಿನಲ್ಲಿ ಮಾಡಿಲ್ಲ. ಮಹಾರಾಷ್ಟ್ರದ ಮುಂಬೈನ ಬೀದಿಗಳಲ್ಲಿ ಹಾಗೂ ಪ್ರವಾಸಿ ತಾಣಗಳಲ್ಲಿ ಈ ಪ್ರಶ್ನೆಗಳನ್ನು ಕೇಳುತ್ತಾ ವಿಡಿಯೋ ಮಾಡಲಾಗಿದೆ. ದೇಶವನ್ನು ಸುತ್ತದ ಯುವಜನರಿಗೆ ಕನ್ನಡದ ಬಗ್ಗೆ ಗೊತ್ತಿಲ್ಲದೇ ಇರಬಹುದು ಎಂದು ನಾವು ಸಮಾಧಾನ ಮಾಡಿಕೊಳ್ಳಬಹುದು. ಇನ್ನು ಮಹಾರಾಷ್ಟ್ರದ ಮಾತೃಭಾಷೆ ಎಂದು ಇಲ್ಲಿರುವ ಮಕ್ಕಳಿಗೆ ಕೇಳಿದರೆ ಅಲ್ಲಿ ಬಾಲಿವುಡ್ ನೆಲೆಸಿರುವುದರಿಂದ ಹಿಂದಿ ಎಂದು ಹೇಳಬುದು. ಆದರೆ, ಅಲ್ಲಿ ಮರಾಠಿ ಭಾಷೆ ಅಧಿಕೃತ ಭಾಷೆಯಾಗಿದೆ. ಇನ್ನು ದೆಹಲಿಯಲ್ಲಿ ಹಿಂದಿ ಭಾಷೆ ಅಧಿಕೃತವಾಗಿದೆ.
ಇದನ್ನೂ ಓದಿ: ನಿಮ್ಮ ಮಗಳ ಭಾಗ್ಯಲಕ್ಷ್ಮಿ ಬಾಂಡ್‌ನ ಹಣ ಬಂದಿದೆ; ಅಂಗನವಾಡಿಗೆ ಹೋಗಿ ವಿಚಾರಿಸಿ!
