ಬೆಂಗಳೂರಲ್ಲಿ ನಾಯಿ ಮಾಂಸ ದಂಧೆ ಆರೋಪ ಪ್ರಕರಣ; ವಿಚಾರಣೆಗೆ ಹಾಜರಾಗುವಂತೆ ಅಬ್ದುಲ್ ರಜಾಕ್‌ಗೆ ನೋಟಿಸ್!
ಮಟನ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು. ಇದೀಗ ಪ್ರಕರಣ ಸಂಬಂಧ ಮಾಂಸ ಮಾರಾಟದ ಪಾಲುದಾರರೆನ್ನಲಾದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ಕಾಟನ್‌ಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಬೆಂಗಳೂರು (ಜು.29) ಮಟನ್ ಮಾಫಿಯಾ ಪ್ರಕರಣದ ತನಿಖೆ ಚುರುಕುಗೊಳಿಸಿದ ಪೊಲೀಸರು. ಇದೀಗ ಪ್ರಕರಣ ಸಂಬಂಧ ಮಾಂಸ ಮಾರಾಟದ ಪಾಲುದಾರರೆನ್ನಲಾದ ಮುಸ್ಲಿಂ ಮುಖಂಡ ಅಬ್ದುಲ್ ರಜಾಕ್‌ಗೆ ಕಾಟನ್‌ಪೇಟೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.
ಪೊಲೀಸರ ನೊಟೀಸ್ ಹಿನ್ನಲೆ ಬುಧವಾರ ವಿಚಾರಣೆಗೆ ಬರುವುದಾಗಿ ತಿಳಿಸಿರುವ ಅಬ್ದುಲ್ ರಜಾಕ್. ತಮ್ಮ ಬಳಿ ಇರುವ ಮಾಂಸ ಮಾರಾಟದ ಬಗ್ಗೆ ಲೈಸೆನ್ಸ್ ಹಾಗೂ ಇತರೆ ದಾಖಲೆ ಒದಗಿಸುವಂತೆ ನೋಟಿಸ್‌ನಲ್ಲಿ ಉಲ್ಲೇಖಿಸಿರುವ ಪೊಲೀಸರು. ಎಲ್ಲ ದಾಖಲೆಗಳ ಸಮೇತ ಬುಧವಾರ ವಿಚಾರಣೆ ಹಾಜರಾಗಲಿರುವ ಅಬ್ದುಲ್ ರಜಾಕ್.
ರಾಜಸ್ಥಾನದಿಂದ ಬೆಂಗಳೂರಿಗೆ ವಾರದಲ್ಲಿ ಮೂರು ದಿನ ಮಾಂಸ ಸಾಗಾಟ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ರಾಜಸ್ಥಾನದ ಶಿಖರ್ ಜಿಲ್ಲೆಯಿಂದ ಬೆಂಗಳೂರಿಗೆ ಮಾಂಸ ರವಾನೆ ಆಗುತ್ತಿತ್ತು. ಮಟನ್ ಜೊತೆಗೆ ಬೇರೆ ಪ್ರಾಣಿಯ ಮಾಂಸ ಕಲಬೆರಕೆ ಮಾಡಿ ಮಾರಾಟ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು.
ಏನಿದು ಘಟನೆ?
ರಾಜಸ್ಥಾನದ ಶಿಖರ್ ಜಿಲ್ಲೆಯಲ್ಲಿರುವ ಗೋಡೌನ್ನಿಂದ ಮಾಂಸದ ಬಾಕ್ಸ್‌ಗಳು ಜೈಪುರ ರೈಲ್ವೆ ನಿಲ್ದಾಣಕ್ಕೆ ಅಲ್ಲಿಂದ ಬೆಂಗಳೂರಿಗೆ ಶಿಫ್ಟ್ ಮಾಡಲಾಗುತ್ತಿತ್ತು. ಹೀಗೆ ತರುವ ಮಾಂಸದ ಬಾಕ್ಸ್‌ಗಳಲ್ಲಿ ಮಟನ್ ಜೊತೆಗೆ ನಾಯಿ ಮಾಂಸ ಬೆರೆಸಲಾಗಿದೆ ಎಂಬ ಸುದ್ದಿ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಹೊಯ್ಸಳ ೩೭ ಕ್ಕೆ ಕರೆ ಮಾಡಲಾಗಿತ್ತು. ಹೊಯ್ಸಳ ಸಿಬ್ಬಂದಿ ರೈಲ್ವೇ ನಿಲ್ದಾಣದ ಹಿಂಬದಿ ಗೇಟ್ ಗೆ ಹೋಗಿ ಪೊಲೀರು ಪರಿಶೀಲನೆ ನಡೆಸಿದ್ದರು. ಆ ವೇಳೆ ಹಿಂದೂಪರ ಸಂಘಟನೆ ಮುಖಂಡ ಪುನೀತ್ ಕೆರೆ ಹಳ್ಳಿ ಹಾಗೂ ಸಂಗಡಿಗರು ರೈಲ್ವೆ ನಿಲ್ದಾಣಕ್ಕೆ ಬಂದು ಐಸ್ ಬಾಕ್ಸ್ ಹಿಡಿದುಕೊಂಡು ಸೇವಿಸಲು ಯೋಗ್ಯವಲ್ಲದ ನಾಯಿ ಮಾಂಸದ ದಂಧೆಯನ್ನ ಅಬ್ದುಲ್ ರಜಾಕ್ ನಡೆಸುತ್ತಿದ್ದಾರೆಂದು ಘೋಷಣೆ ಕೂಗಿದ್ದರು. ಈ ವೇಳೆ ವಾಗ್ವಾದ ನಡೆದು ಗಲಾಟೆಯಾಗಿತ್ತು. ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಪುನೀತ್ ಕೆರೆಹಳ್ಳಿಯನ್ನ ರಾತ್ರೋರಾತ್ರಿ ಬಂಧಿಸಿ ಠಾಣೆ ಕರೆದೊಯ್ದರು. ಆದರೆ ಮುಸ್ಲಿಂ ಎಂಬ ಕಾರಣಕ್ಕೆ ಅಬ್ದುಲ್ ರಜಾಕ್‌ನ ಪೊಲೀಸರು ಬಂಧಿಸಿಲ್ಲ ಕನಿಷ್ಠ ಠಾಣೆಗೆ ಕರೆದು ವಿಚಾರಣೆ ನಡೆಸಿಲ್ಲ ಎಂದು ಹಿಂದೂ ಸಂಘಟನೆಗಳು ಪೊಲೀಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದವು. ಇದೀಗ ಪ್ರಕರಣ ಸಂಬಂಧ ಅಬ್ದುಲ್ ರಜಾಕ್‌ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದಾರೆ.