Asianet Suvarna News Asianet Suvarna News

ಪರಪ್ಪನ ಅಗ್ರಹಾರದ ಜೈಲುಹಕ್ಕಿಗಳಿಗೆ ವಿವಿಧ ಸ್ಪರ್ಧೆ, ಜೈಲಾಧಿಕಾರಿಗಳನ್ನೇ ಅಚ್ಚರಿಗೊಳಿಸಿದ ಕೈದಿಗಳು

* ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿ ಕೈದಿಗಳಿಗೆ ಸ್ಪರ್ಧೆ ಆಯೋಜನೆ
* ಸ್ವಾತಂತ್ರ್ಯ ದಿನಾಚರಣೆಗೆ ನಿಮಿತ್ತ ಸೆಂಟ್ರಲ್ ಜೈಲಿನಲ್ಲಿ ಸ್ಪರ್ಧಾ ಕಾರ್ಯಕ್ರಮ
* ಚಿತ್ರಕಲೆ,ಗಾಯನ ಸೇರಿದಂತೆ ಪ್ರತಿಭಾಕಾರಂಜಿ ಸ್ಪರ್ಧೆ
* ಉತ್ಸಾಹದಿಂದ ಚಿತ್ರಬರೆದು, ಹಾಡಿ ಬಹುಮಾನ ಪಡೆದ ಸಜಾಬಂಧಿ ಕೈದಿಗಳು

bengaluru central jail officers arranges competition for prisoners rbj
Author
Bengaluru, First Published Aug 22, 2021, 9:39 PM IST

ಬೆಂಗಳೂರು, (ಆ.22):  ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ಸಜಾಬಂಧಿ ಕೈದಿಗಳು ಉತ್ತಮ ಪ್ರದರ್ಶನ ತೋರಿ ಅಧಿಕಾರಿಗಳನ್ನೇ ಅಚ್ಚರಿಗೊಳಿಸಿದ್ದಾರೆ.

ಹೌದು...75ನೇ ಸ್ವಾತಂತ್ರ್ಯೋತ್ಸವದ ನಿಮಿತ್ತ ಪರಪ್ಪನ ಅಗ್ರಹಾರದ ಸೆಂಟ್ರಲ್ ಜೈಲಿನಲ್ಲಿ ಸಜಾಬಂಧಿ ಕೈದಿಗಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಚಿತ್ರಕಲೆ, ಗಾಯನ ಸೇರಿದಂತೆ ಹಲವಾರು ಬಗೆಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ಇದರಲ್ಲಿ ಜೈಲುಹಕ್ಕಿಗಳು ಉತ್ಸಾಹದಿಂದ ಕೆಲವರು ಚಿತ್ರ ಬಿಡಿಸಿದರೆ, ಇನ್ನು ಕೆಲವರು ಹಾಡಿದರು.

ಆಫ್ರಿಕನ್ನನ ಹೊಟ್ಟೆಯಲ್ಲಿತ್ತು 11 ಕೋಟಿ ರು. ಮೌಲ್ಯದ ಡ್ರಗ್ಸ್

ವಿವಿಧ ಸ್ಪರ್ಧೆಗಳಲ್ಲಿ ಅತ್ಯುತ್ಸಾಹದಿಂದ ಭಾಗವಹಿಸಿದ್ದು, ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನವನ್ನೂ ಘೋಷಿಸಲಾಯಿತು.  ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ ಕೈದಿಗಳು ಬಿಡಿಸಿದ ವಿಭಿನ್ನ ಚಿತ್ರಗಳು ಜೈಲಿನ ಅಧಿಕಾರಿಗಳನ್ನೂ ಅಚ್ಚರಿಗೊಳಿಸಿತು.

 ಮಾದಕ ದ್ರವ್ಯ ಪ್ರಕರಣಕ್ಕೆ ಸಂಬಂಧಿಸಿ ಜೈಲಿನಲ್ಲಿರುವ ನೈಜೇರಿಯಾ ದೇಶದ ಪ್ರಜೆಗಳೂ ಕೂಡ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಿದ್ದರು. ಇತರ ಸಜಾಬಂಧಿ ಕೈದಿಗಳ ಜತೆ ಜೈಲುವಾಸ ಅನುಭವಿಸುತ್ತಿರುವ ನೈಜೀರಿಯನ್ ಪ್ರಜೆಗಳೂ ಕೂಡ ಸಹಜವಾಗಿಯೇ ಭಾಗಿಯಾಗಿದ್ದರು. ವಿವಿಧ ಪ್ರಕರಣಗಳಲ್ಲಿ ಕಾರಾಗೃಹ ಸೇರಿರುವ ಕೈದಿಗಳು ತಮಗಾಗಿಯೇ ಏರ್ಪಡಿಸಿದ್ದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

Follow Us:
Download App:
  • android
  • ios