ಎದೆ ಬಗೆದರೆ ಎರಡಕ್ಷರ ಇಲ್ಲದವರಿಂದ ಪ್ರತಿಭಟನೆ : ಪೌರತ್ವದ ಕಿಚ್ಚಿಗೆ ತೇಜಸ್ವಿ ತುಪ್ಪ!

ನೆರೆ ಸಂತ್ರಸ್ಥರ ಪುನರ್ವಸತಿಗೆ ರಾಜ್ಯ ಸರ್ಕಾರ ಪರಿಹಾರಕ್ಕಾಗಿ ಕೇಂದ್ರದ ಮೊರೆ ಹೋಗುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಟೀಕೆಗೆ ಗುರಿಯಾಗಿದ್ದ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ, ಇದೀಗ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

Bengaluru bjp mp Tejasvi Surya controversial statement on CAA Protest

ಬೆಂಗಳೂರು (ಡಿ. 22): ಎದೆ ಸೀಳಿದರೆ ನಾಲ್ಕು ಅಕ್ಷರ ಇಲ್ಲದವರು ಕೂಡ ಬೀದಿಗಿಳಿದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಹೇಳುವ ಮೂಲಕ ಬೆಂಗಳೂರು ದಕ್ಷಿಣ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ವಿವಾದ ಹಟ್ಟುಹಾಕಿದ್ದಾರೆ.

ಪೌರತ್ವ ತಿದ್ದುಪಡಿ ಕಾಯ್ದೆ ಬೆಂಬಲಿಸಿ ಇಂದು (ಭಾನುವಾರ) ಬೆಂಗಳೂರಿನ ಟೌನ್ ​ಹಾಲ್ ಮುಂದೆ ಜನಜಾಗೃತಿಯಲ್ಲಿ ಮಾತನಾಡಿದ ಅವರು, ಇಲ್ಲಿ ಯಾರೂ ಯಾರನ್ನೂ ಕರೆದಿಲ್ಲ. ಎಲ್ಲರೂ ಸ್ವ ಇಚ್ಛೆಯಿಂದ ಬಂದಿದ್ದಾರೆ.  ಪೌರತ್ವಕ್ಕೆ ಎಷ್ಟು ಬೆಂಬಲ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಎದೆ ಸೀಳಿದರೆ ಎರಡಕ್ಷರ ಇಲ್ಲದವರು ಬಂದು ಸಿಎಎ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ. ಪಂಕ್ಚರ್ ಹಾಕೋರು ಬಂದು ಪ್ರತಿಭಟನೆ ಮಾಡುತ್ತಾರೆ ಎಂದು  ವಿವಾದಾತ್ಮಕ ಹೇಳಿಕೆ ನೀಡಿದರು.

ಪೌರತ್ವ ಕಾಯ್ದೆಯಿಂದ ಮುಸ್ಲಿಮರಿಗೆ ಸಮಸ್ಯೆ ಇಲ್ಲ: ಕುರಾನ್ ಮೇಲೆ ಆಣೆ ಎಂದ ಬಿಜೆಪಿ ನಾಯಕ

ಮೋದಿ ಸರ್ಕಾರ ಯಾಕೆ ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಗೆ ತಂದಿದೆ? ಎಂಬ ಬಗ್ಗೆ ಸರಿಯಾದ ಮಾಹಿತಿ ನೀಡದೆ ದಿಕ್ಕು ತಪ್ಪಿಸಲಾಗುತ್ತಿದೆ.  ಸಾವಿನ ರಾಜಕಾರಣಕ್ಕೆ ಕಾಂಗ್ರೆಸ್ ಮುಂದಾಗಿದೆ ಎಂದು ಕಿಡಿಕಾರಿದರು.

 ಯುವಕರ ಜೀವನದ ಜೊತೆ ಚೆಲ್ಲಾಟವಾಡಬೇಡಿ. ಹೊರ ರಾಷ್ಟ್ರದಿಂದ ಭಾರತಕ್ಕೆ ವಲಸಿಗರನ್ನು ರಾಷ್ಟ್ರದೊಳಗೆ ಬಿಟ್ಟು ಕೊಡುವುದಿಲ್ಲ ಎಂದರೆ ಇವರಿಗೇನು ಸಮಸ್ಯೆ ಎಂದು ಕಾಂಗ್ರೆಸ್​ಗೆ ಪ್ರಶ್ನಿಸಿದರು. 

ಕೇಂದ್ರದಿಂದ ಪರಿಹಾರ ಬಂದಿಲ್ಲ: ಸ್ವಪಕ್ಷೀಯ ಸಂಸದನ ವಿರುದ್ಧ ಯತ್ನಾಳ್ ಹಿಗ್ಗಾಮುಗ್ಗಾ ವಾಗ್ದಾಳಿ

ಪಾಕಿಸ್ತಾನದ ಇಮ್ರಾನ್ ಖಾನ್, ಕಾಂಗ್ರೆಸ್ ನ ರಾಹುಲ್ ಗಾಂಧಿ ಒಂದೇ ಭಾಷಣ ಮಾಡುತ್ತಾರೆ. ಈ ಕಾನೂನು ಭಾರತೀಯ ಹಿಂದೂಗಳು, ಮುಸ್ಲಿಮರನ್ನು ಒಂದೇ ರೀತಿ ನೋಡುತ್ತದೆ ಎಂದರು. 

Latest Videos
Follow Us:
Download App:
  • android
  • ios