ಶಂಕರ್‌ನಾಗ್‌ ಜನ್ಮದಿನ ಸರ್ಕಾರ ಅಧಿಕೃತವಾಗಿ 'ಚಾಲಕರ ದಿನ'ವನ್ನಾಗಿ ಆಚರಿಸಲು ಮನವಿ

ಬೆಂಗಳೂರಿನಲ್ಲೇ 3 ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

Bengaluru Auto Drivers Association requests that the govt officially celebrate Shankarnag's birthday as auto Drivers Day rav

ಬೆಂಗಳೂರು (ನ.9): ಬೆಂಗಳೂರಿನಲ್ಲೇ 3 ಲಕ್ಷಕ್ಕೂ ಅಧಿಕ ಆಟೋ ಸಂಚರಿಸುತ್ತಿದ್ದು, ಆಟೋ ಚಾಲಕರಿಲ್ಲದೇ ಬೆಂಗಳೂರು ಇಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಪೀಸ್‌ಆಟೋ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್, ಜೈ ಭಾರತ ವಾಹನ ಚಾಲಕರ ಸಂಘ ನೊಂದ ಚಾಲಕರ ವೇದಿಕೆ ಸಹಯೋಗದೊಂದಿಗೆ ಶನಿವಾರ ಜಯನಗರದ ಶಾಲಿನಿ ಮೈದಾನದಲ್ಲಿ ಆಯೋಜಿಸಿದ್ದ ಮೇರುನಟ, ದಿವಂಗತ ಶಂಕರ್‌ನಾಗ್ ಅವರ  ಜನ್ಮದಿನದ ಪ್ರಯುಕ್ತ 11ನೇ ವರ್ಷದ "ಚಾಲಕರ ದಿನವನ್ನು" ಉದ್ಘಾಟಿಸಿ ಮಾತನಾಡಿದರು.

ಹಾಲುಮತ ಪವಿತ್ರ ಸಮಾಜ; ಅದನ್ನೇ ಬಿಟ್ಟು ಸಾಬರು ಆಗ್ತೀನಿ ಅಂದ್ರೆ ನಿಂತು ಹೊಯ್ಕೊಬೇಕಾ? ಸಿದ್ದರಾಮಯ್ಯ ವಿರುದ್ಧ ಯತ್ನಾಳ್ ವಾಗ್ದಾಳಿ

ಬೆಂಗಳೂರಿನಲ್ಲಿ ಆಟೋ ಚಾಲಕರ ಸೇವೆ ಶ್ಲಾಘನೀಯ. ಶಂಕರ್‌ನಾಗ್‌ ಅವರು ಇಂದಿಗೂ ಸಹ ಆಟೋ ಚಾಲಕರಿಗೆ ಅತ್ಯಂತ ಪ್ರಿಯವಾದ, ಸ್ಪೂರ್ತಿದಾಯಕ ವ್ಯಕ್ತಿಯಾಗಿದ್ದಾರೆ ಇವರ ಆದರ್ಶದಂತೆ ಇನ್ನಷ್ಟು ಉತ್ತಮ ಸೇವೆಯನ್ನು ಚಾಲಕರು ನೀಡಲಿ ಎಂದು ಆಶಿಸಿದರು. ಪೀಸ್‌ ಆಟೋ ವತಿಯಿಂದ ಪ್ರತಿವರ್ಷ ಶಂಕರ್‌ನಾಗ್‌ ಅವರ ಜನ್ಮದಿನದಂದು ಚಾಲಕರ ದಿನವನ್ನಾಗಿ ಆಚರಿಸುತ್ತಾ, ಆಟೋಚಾಲಕರಿಗೆ ಹಲವು ಸಹಾಯ ಮಾಡುತ್ತಾ ಬಂದಿದ್ದಾರೆ, ಒಬ್ಬರಿಗೆ ಉಚಿತ ಆಟೋ ನೀಡುತ್ತಿದ್ದರು, ಈ ಬಾರಿ ಎರಡು ಆಟೋ ಉಚಿತವಾಗಿ ನೀಡಿದ್ದಾರೆ. 

Bengaluru Auto Drivers Association requests that the govt officially celebrate Shankarnag's birthday as auto Drivers Day rav

ಮನವಿ ಸಲ್ಲಿಕೆ:

ಚಾಲಕರ ಸ್ಪೂರ್ತಿಯ ಚಿಲುಮೆ ಮೇರುನಟ ದಿವಂಗತ ಶಂಕರ್‌ನಾಗ್‌ ಅವರ ಜನ್ಮದಿನವನ್ನು "ಚಾಲಕರ ದಿನ"ವನ್ನಾಗಿ ಸರ್ಕಾರ ಅಧಿಕೃತವಾಗಿ ಆಚರಿಸಬೇಕು ಎಂದು ಪೀಸ್‌ ಆಟೋ ಸೇರಿದಂತೆ ವಿವಿಧ ಚಾಲಕರ ಸಂಘಟನೆಯು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ಶಂಕರ್‌ನಾಗ್‌ ಅವರೊಂದಿಗೆ ಎಲ್ಲಾ ಚಾಲಕರು ಅವಿನಾಭಾವ ನಂಟು ಹೊಂದಿದ್ದಾರೆ. ಅವರ ದಿನವನ್ನು ರಾಜ್ಯ ಸರ್ಕಾರ ಆಚರಿಸಬೇಕು ಎಂದು ಉಲ್ಲೇಖಿಸಲಾಗಿದೆ. 

ಸ್ವಂತ ಆಟೋ ಖರೀದಿಗೆ ಮಹಿಳೆಯರಿಗೆ ನೆರವು:

ಪೀಸ್ ಆಟೋ ಸಂಘಟನೆ ವತಿಯಿಂದ 300 ಮಹಿಳೆಯರಿಗೆ ಆಟೋ ಚಾಲನೆಯ ತರಬೇತಿ ನೀಡಿದ್ದು, ಈ ಮಹಿಳೆಯರು ಸ್ವತಃ ಆಟೋ ಖರೀದಿಗೆ ಹಣಕಾಸಿನ ನೆರವು ಸಹ ಇದೇ ವೇಳೆ ನೀಡಲಾಯಿತು. ಎಕ್ಸ್‌ಪೊನೆಂಟ್‌ ಕಂಪನಿಯ 15 ನಿಮಿಷದಲ್ಲೇ ಚಾರ್ಜ್‌ ಆಗುವ ಚಾರತ್ತೊಂದು ವಿಶೇಷವೆಂದರೆ, ಚಾಲನಾ ವೃತ್ತಿಯಲ್ಲಿ ಮಾನವೀಯತೆ ಹಾಗೂ ಪ್ರಾಮಾಣಿಕತೆ ಮೆರೆದ ಆಯ್ದ ಚಾಲಕರಿಗೆ ಚಿನ್ನದ ಪದಕ ನೀಡಿ ಅವರನ್ನು ಗೌರವಿಸಲಾಯಿತು. ಇನ್ನು, ಬಡ ಚಾಲಕರ ಪ್ರತಿಭಾನ್ವಿತ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಆಟೋ, ಟ್ಯಾಕ್ಸಿ, ಗೂಡ್ಸ್‌ ವಾಹನ, ಶಾಲಾ ವಾಹನದ ಚಾಲಕರು ಪಾಲ್ಗೊಂಡಿದ್ದರು. ಇದರಲ್ಲಿ ಸುಮಾರು ೧೦೦ ಮಹಿಳಾ ಚಾಲಕಿಯರು ಸೇರಿದ್ದು ವಿಶೇಷವಾಗಿತ್ತು. 

ವಕ್ಫ್ ಆಸ್ತಿ ವಿವಾದ: ರೈತಪರ ಹೋರಾಡಬೇಕಾದ ರಾಕೇಶ್ ಟಿಕಾಯತ್ ಯಾಕೆ ಮೌನ? ರೈತ ಸಂಘಟನೆಗಳು ಎಲ್ಲಿ ಅಡಗಿವೆ? ಯತ್ನಾಳ್ ಕಿಡಿ

ನಟ ಶ್ರೀ ಮುರುಳಿ, ನಟ ಗರುಡ ರಾಮ್‌, ಪೀಸ್-ಆಟೋ ಅಧ್ಯಕ್ಷರು ರಘು ನಾರಾಯಣ ಗೌಡ, ಆದರ್ಶ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘ ಯೂನಿಯನ್ ಅಧ್ಯಕ್ಷರು ಮಂಜುನಾಥ್‌, ಕರ್ನಾಟಕ ರಾಜ್ಯ ಖಾಸಗಿ ಶಾಲಾ ವಾಹನ ಚಾಲಕರ ಯೂನಿಯನ್ ಅಧ್ಯಕ್ಷರು ಜಿ. ರವಿ ಕುಮಾರ್‌ , ಜೈ ಭಾರತ ವಾಹನ ಚಾಲಕರ ಸಂಘದ ಅಧ್ಯಕ್ಷರು ಚಂದ್ರ ಕುಮಾರ್‌, ನೊಂದ ಚಾಲಕರ ವೇದಿಕೆ ರಾಜು, ಜೈ ಕರ್ನಾಟಕ ಅಧ್ಯಕ್ಷರು ಆನಂದ್‌, ಕಾರ್ಯಕ್ರಮದ ಉಸ್ತುವಾರಿ ರಾಘವೇಂದ್ರ ಪೂಜಾರಿ ಸೇರಿದಂತೆ ಹಲವು ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios