ನವದೆಹಲಿ, (ಜುಲೈ.09) : ಕೇಂದ್ರ ಸರ್ಕಾರ ದೇಶದಲ್ಲಿಯೇ ಅತೀ ಹೆಚ್ಚು ಕೊರೋನಾ ಸೋಂಕಿನಿಂದ ಬಲಿಯಾದಂತ ಜಿಲ್ಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, 32 ಜಿಲ್ಲೆಗಳಲ್ಲಿಯೇ ದೇಶದಲ್ಲಿ ಶೇ.80ರಷ್ಟು ಜನರು ಕೊರೋನಾ ಸೋಂಕಿನಿಂದಾಗಿ ಸಾವನ್ನಪ್ಪಿದ್ದಾರೆ. 

"

ಇಂತಹ ಪಟ್ಟಿಯಲ್ಲಿ ರಾಜ್ಯದ ಬೆಂಗಳೂರು ನಗರ ಮತ್ತು ಬೀದರ್ ಜಿಲ್ಲೆಗಳು ಕೂಡ ಸೇರ್ಪಡೆಗೊಂಡಿವೆ. ಈ ಮೂಲಕ ರಾಜ್ಯದಲ್ಲಿ ಅತೀ ಹೆಚ್ಚು ಕೊರೋನಾದಿಂದಾಗಿ ಬಲಿಯಾದ ಜಿಲ್ಲೆಗಳಾಗಿವೆ.

ಗಾಂಧಿ ಕುಟುಂಬದ ಟ್ರಸ್ಟ್‌ಗೆ ಚೀನಾ ಹಣ, ರಾಜ್ಯದಲ್ಲಿ ಅಬ್ಬರಿಸುತ್ತಿದ್ದಾನೆ ವರುಣ; ಜು.9ರ ಟಾಪ್ 10 ನ್ಯೂಸ್!

 ಬೆಂಗಳೂರಿನಲ್ಲಿ ಇದುವರೆಗೆ ಕಿಲ್ಲರ್ ಕೊರೋನಾಗೆ 177 ಜನರು ಬಲಿಯಾಗಿದ್ದರೇ, ಬೀದರ್ ಜಿಲ್ಲೆಯಲ್ಲಿ 49 ಜನರು ಸಾವನ್ನಪ್ಪಿದ್ದಾರೆ.  

ಅಲ್ಲದೇ ಒಟ್ಟಾರೆಯಾಗಿ ದೇಶಾದ್ಯಂತ ಇದುವರೆಗೆ ಕೊರೋನಾ ಸೋಂಕಿನಿಂದಾಗಿ 21,174 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ಕೇಂದ್ರ ಸರ್ಕಾರ ತಿಳಿಸಿದೆ.