ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ UDF ಶುಲ್ಕ ಏರಿಕೆ| ವಿಮಾನ ನಿಲ್ದಾಣದ ಅಭಿವೃದ್ಧಿ ಕಾರ್ಯಗಳಿಗಾಗಿ UDF ಶುಲ್ಕ ಏರಿಕೆ| ನಿಲ್ದಾಣ ಬಳಕೆದಾರರ ಅಭಿವೃದ್ಧಿ ಶುಲ್ಕದಲ್ಲಿ ದುಪ್ಪಟ್ಟು ಏರಿಕೆ| ವಿಮಾನ ನಿಲ್ದಾಣದ ವಿಸ್ತರಣೆಗೆ ಶುಲ್ಕ ಬಳಕೆ|
ಬೆಂಗಳೂರು(ಏ.16): ನವದೆಹಲಿ ಮತ್ತು ಮುಂಬೈ ವಿಮಾನ ನಿಲ್ದಾಣದ ನಂತರ ದೇಶದ ಮೂರನೇ ಅತೀ ಜನನಿಬಿಡ ವಿಮಾನ ನಿಲ್ದಾಣ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬೆಂಗಳೂರು ಏರ್‌ಪೋರ್ಟ್ ಬಲು ದುಬಾರಿಯಾಗಿ ಮಾರ್ಪಟ್ಟಿದೆ.
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಬಳಕೆದಾರರ ಅಭಿವೃದ್ಧಿ ಶುಲ್ಕವನ್ನು ಶೇ.120ರಷ್ಟು ಏರಿಕೆ ಮಾಡಲಾಗಿದೆ.
ಇಂದಿನಿಂದಲೇ(ಏ.16) ಹೊಸ ಶುಲ್ಕ ನೀತಿ ಜಾರಿಗೆ ಬಂದಿದ್ದು, ವಿಮಾನ ನಿಲ್ದಾಣ ವಿಸ್ತರಣೆಗೆ ಈ ಶುಲ್ಕವನ್ನು ಬಳಸಿಕೊಳ್ಳಲಾಗುವುದು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.
ಹೊಸ UDF ನೀತಿ ಪ್ರಕಾರ ದೇಶೀಯ ನಿರ್ಗಮನಕ್ಕೆ 306 ರೂ. ಮತ್ತು ಅಂತಾರಾಷ್ಟ್ರೀಯ ನಿರ್ಗಮನಕ್ಕೆ 1,226 ರೂ. ಶುಲ್ಕ ನಿಗದಿ ಮಾಡಲಾಗಿದೆ. ಈ ಹಿಂದೆ ಇದು ಕ್ರಮವಾಗಿ 139 ರೂ. ಹಾಗೂ 558 ರೂ. ಇತ್ತು.
