ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!
ಜೀತಕ್ಕಿದ್ದವರ ಮಾಹಿತಿ ಪಡೆಯಲು ವ್ಯಾಪಾರಿಯಂತೆ ಹೋಗಿದ್ದ ಎಸಿ!| ಜೀತಕ್ಕಿದ್ದ 29 ಕಾರ್ಮಿಕರನ್ನು ರಕ್ಷಿಸಿದ ಉಪವಿಭಾಗಾಧಿಕಾರಿ
ಆನೇಕಲ್[ನ.18] ಜೀತ ಪದ್ಧತಿಗೆ ಇಟ್ಟುಕೊಂಡಿದ್ದ 29 ಜನ ಕಾರ್ಮಿಕರನ್ನು ಜಿಲ್ಲಾಧಿಕಾರಿ ಶಿವಮೂರ್ತಿ ಆದೇಶದಂತೆ ದಾಳಿ ನಡೆಸಿ ಬಂಧಮುಕ್ತಗೊಳಿಸಿ ರಕ್ಷಣೆ ಮಾಡಲಾಗಿದೆ.
ಆನೇಕಲ್ ತಾಲೂಕಿನ ಸರ್ಜಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೂಗೂರು ಗ್ರಾಮದ ನೀಲಗಿರಿ ತೋಪಿನಲ್ಲಿ 29 ಜನರನ್ನು ಬಲವಂತವಾಗಿ ಕೆಲಸಕ್ಕೆ ಇಟ್ಟುಕೊಂಡಿದ್ದಾರೆ ಎಂದು ಎನ್‌ಜಿಒ ಮಾಹಿತಿ ಆಧರಿಸಿ ಉಪಭಾಗಾಧಿಕಾರಿ ಡಾ.ಶಿವಣ್ಣ ನೇತೃತ್ವದಲ್ಲಿ ಆನೇಕಲ್ ತಹಸೀಲ್ದಾರ್ ದಿನೇಶ್ ಮತ್ತು ಉಪನಿರೀಕ್ಷಕ ಮಂಜುನಾಥ್‌ರೆಡ್ದಿ ತಂಡ ದಾಳಿ ಮಾಡಿ ಎಲ್ಲರನ್ನು ಬಂಧಮುಕ್ತಗೊಳಿಸಿದ್ದಾರೆ. ಜೀತದಾಳುಗಳು ನೆರೆಯ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆ ವೇಮನಪಲ್ಲಿ ಮತ್ತು ಪೆದುಗಟ್ಟಿಗ್ರಾಮದವರಾಗಿದ್ದು ಅವರನ್ನು ಒಂದು ಚಿಕ್ಕ ಶೆಡ್‌ರೀತಿಯ ಮನೆ ನಿರ್ಮಿಸಿ ಕೊಟ್ಟು ಅವರಿಂದ ನೀಲಗಿರಿ ತೋಪಿನಲ್ಲಿ ಕಟ್ಟಿಗೆ ತುಂಬುವ ಕೆಲಸಕ್ಕೆ ಇಟ್ಟುಕೊಂಡಿದ್ದರು.
ಮೂರು ದಿನಗಳ ಹಿಂದೆ ಎಸಿ ಡಾ.ಶಿವಣ್ಣ ಟೊಮೆಟೋ ವ್ಯಾಪಾರಿ ಸೋಗಿನಲ್ಲಿ ನೀಲಗಿರಿ ತೋಪಿನ ಬಳಿ ತೆರಳಿದ್ದರು. ಅಲ್ಲಿದ್ದ ಕಾರ್ಮಿಕರ ಜೊತೆಗೆ ಪಕ್ಕದ ತೋಟದಲ್ಲಿ ಟೊಮೆಟೋ ಖರೀದಿಗಿದೆಯಾ ಎಂದು ಮಾತನಾಡಿಸಿ, ಮಾಹಿತಿ ಸಂಗ್ರಹಿಸಿದ್ದರು. ಬಳಿಕ ಜೀತ ಪದ್ಧತಿ ಖಚಿತವಾಗುತ್ತಿದ್ದಂತೆ ಅಧಿಕಾರಿಗಳ ತಂಡದೊಂದಿಗೆ ತೆರಳಿ ಜೀವ ಮುಕ್ತಗೊಳಿಸಿದರು.
ನವೆಂಬರ್ 18ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: