ಬೆಳಗಾವಿ (ಫೆ. 11):  ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಒಡೆತನದ ಹರ್ಷ ಶುಗರ್ ಫ್ಯಾಕ್ಟರಿಯಿಂದ ಹೊರಬರುವ ಕೆಮಿಕಲ್ ಮಿಶ್ರಿತ ತ್ಯಾಜ್ಯವನ್ನು ಪಕ್ಕದಲ್ಲೇ ಇರುವ ತುಬ್ಬರಿಹಳ್ಳಕ್ಕೆ ಬಿಡಲಾಗುತ್ತಿದೆ. ಇದರಿಂದ ಆ ಹಳ್ಳದಲ್ಲಿರುವ ಮೀನುಗಳ ಮಾರಣ ಹೋಮವಾಗುತ್ತಿದೆ. ಈ ಕೆರೆಯ ನೀರನ್ನು ಕೃಷಿಗೆ ಬಳಸುವ ಅಕ್ಕಪಕ್ಕದ ಗ್ರಾಮದ ಜನ ಕಂಗಾಲಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಸಾಕಷ್ಟು ಬಾರಿ ದೂರು ನೀಡಿದರೂ ಪ್ರಯೋಜನವಾಗಿಲ್ಲ. 

ತುಬ್ಬರಿಹಳ್ಳದ ಈ ನೀರು ಇಲ್ಲಿನ ಜನರಿಗೆ ಕೃಷಿಗೆ ಆಧಾರ. ಕಲುಷಿತ ನೀರಿನಿಂದ ಬೆಳೆಗಳು ನಾಶವಾಗುತ್ತಿದೆ. ನೀರು ಕುಡಿದ ಜಾನುವಾರುಗಳು ಕಾಯಿಲೆಗೆ ತುತ್ತಾಗುತ್ತಿವೆ. ಯಾವಾಗಲೂ ರಾಜಖಾರಣದಲ್ಲಿ ಸದ್ದು ಮಾಡುವ ಲಕ್ಷ್ಮೀ ಹೆಬ್ಬಾಳ್ಕರ್ ಇಲ್ಲಿ ತಮ್ಮ ಕ್ಷೇತ್ರದ ಜನರ ಸಮಸ್ಯೆಗೆ ಮಾತ್ರ ಜಾಣ ಕುರುಡು ತೋರಿಸಿದ್ದಾರೆ.