Asianet Suvarna News Asianet Suvarna News

ಯಾರಾದ್ರೂ ರಾಮ ಮಂದಿರ ಕೆಡವಿ ಮಸೀದಿ ಕಟ್ಟಿದರೆ, ಅವರಪ್ಪನಿಗೆ ಹುಟ್ಟಿದೋನು ಅಂತೀನಿ: ಕೆ.ಎಸ್.ಈಶ್ವರಪ್ಪ

ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ, ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Belagavi Hindu Activists Convention on KS Eshwarappa Said Controversy Statement from Ram Mandir sat
Author
First Published Jan 7, 2024, 4:27 PM IST

ಬೆಳಗಾವಿ (ಜ.07): ದೇಶದಲ್ಲಿ 500 ವರ್ಷದ ಕೆಳೆಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ದರು. ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿದ್ದರಿಂದ ರಾಮನ ದೇವಸ್ಥಾನವನ್ನೇ ಬಾಬ್ರಿ ಮಸೀದಿ ಅಂತ ಕರೆದರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಬೆಳಗಾವಿಯಲ್ಲಿ ನಡೆದ ಹಿಂದೂ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ದೇಶದಲ್ಲಿ 500 ವರ್ಷದ ಕೆಳೆಗೆ ರಾಮ ಹುಟ್ಟಿದ ಜಾಗದಲ್ಲಿ ದೇವಸ್ಥಾನ ಕಿತ್ತು ಹಾಕಿದ್ದರು. ಬಾಬರ್ ನಂತವನು ಬಂದು ಬಾಬ್ರಿ ಮಸೀದಿ ಕಟ್ಟಿದ್ದರಿಂದ ರಾಮನ ದೇವಸ್ಥಾನವನ್ನೇ ಬಾಬ್ರಿ ಮಸೀದಿ ಅಂತ ಕರೆದರೆ ಹೇಗೆ? ಈಗ ಯಾರಾದ್ರೂ ಮಂದಿರ ಕೆಡವಿ ಮಸೀದಿ ಕಟ್ಟಿದರೆ ಅವರಪ್ಪನಿಗೆ ಹುಟ್ಟಿದೋನು ಅಂತ ಕರೀತಿನಿ. ವಿಶ್ವನಾಥ ದೇವಸ್ಥಾನದಲ್ಲಿ ಅರ್ಧ ಮಸೀದಿ ಹೇಗೆ ಬಂತು, ಮಥುರಾದಲ್ಲಿ ಅರ್ಧ ಮಸೀದಿ ಹೇಗೆ ಬಂತು? ಲಾಠಿ ಗೋಲಿ ಖಾಯೆಂಗೆ ಮಂದೀರ ವಹಿ ಬನ್ ಗಯಾ ಎಂದು ಕೂಗ್ತಿದ್ವಿ. ಇನ್ನೆರಡು ದೇವಸ್ಥಾನಗಳಿಗೆ ಕೋರ್ಟ್ ಆದೇಶ ನೀಡಿದೆ. ಅಲ್ಲಿರುವ ಮಸೀದಿಗಳು ದ್ವಂಸ ಆಗುತ್ತೆ ದೇವಸ್ಥಾನ ತಲೆ ಎತ್ತುತ್ತವೆ. ದೇವಸ್ಥಾನ ಒಡೆದು ಮಸೀದಿ ಕಟ್ಟಿದ ಮುಸ್ಲಿಂಮರು ನೀವಾಗಿ ನೀವೆ ಕಿತ್ತು ಹಾಕಿ. ಇಲ್ಲವಾದ್ರೆ ರಾಮನ ಭಕ್ತರು ನಾವು ಮಸೀದಿ ಕಿತ್ತು ಹಾಕ್ತಿವಿ ಎಂದು ಹೇಳಿದರು.

ಆಯೋಧ್ಯೆ ರಾಮ ಮಂದಿರ ಉದ್ಘಾಟನೆಗೆ ಆಹ್ವಾನವಿಲ್ಲದಿದ್ದರೂ, ಶ್ರೀರಾಮನಿಗೆ ಭಕ್ತಿ ಸಮರ್ಪಿಸಿದ ಕಾಂಗ್ರೆಸ್ ಸರ್ಕಾರ!

ಸಿದ್ದರಾಮಯ್ಯ ನಾವು ಜಾತ್ಯಾತೀತವಾದಿಗಳು ಅಂತಾರೆ. ನಾವು ನಿಮಗಿಂತ ಜಾತ್ಯಾತೀತವಾದಿಗಳು. ಹಿಂದೂ ಮುಸ್ಲಿಂ ಅನ್ಯೋನ್ಯಾಗಿರಬೇಕು ಎನ್ನುವವರು ನಾವು. ನೀವು ನಮಾಜ್ ಮಾಡ್ಕೊಳ್ಳಿ ನಾವು ಅದರ ಗೊಡವೆಗೆ ಬರಲ್ಲ. ಬಾಬರ್ ಕಟ್ಟಡ ಈ ದೇಶದ ಜನರಿಗೆ ನೀವು ಗುಲಾಮರಾಗಿದ್ದಿರಿ ಎಂದು ಹೇಳ್ತಿತ್ತು. ನೀವಾಗಿ ನೀವೆ ಮಥುರಾ ಹಾಗೂ ಕೃಷ್ಣಾದ ಮಸೀದಿ ತೆಗೆಯಿರಿ. ಒಂದು ವೇಳೆ ತೆಗೆಯದಿದ್ದರೆ ಕೊಲೆಗಳಾಗುತ್ತೊ, ಇನ್ನೇನಾಗುತ್ತೊ ಗೊತ್ತಿಲ್ಲ ಎಂದು ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ನಾವು ಐದು, ನಮಗೆ ಐವತ್ತು ನಿಯಮ ನಮ್ಮದಲ್ಲ:
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅಧಿಕಾರದಾಸೆಗೆ ಪಾಕ್ತಿಸ್ಥಾನವನ್ನು ಮಾಡಿದರು. ಈ ದೇಶದಲ್ಲಿ ಈಗಾಗಲೇ ತ್ರಿಬಲ್ ತಲಾಕ್ ರದ್ದಾಗಿದೆ. ಒಂದು ಗಂಡಿಗೆ ಒಂದು ಹೆಣ್ಣು ಎಂಬ  ಸಂದೇಶ ಸಾರಲಾಗಿದೆ. ನಮಗೆ ಒಂದು ಹೆಣ್ಣು, ಒಂದು ಗಂಡು ಇತ್ತು. ಆದರೆ ಮುಸ್ಲಿಂಮರಿಗೆ ಹಮ್ ಪಾಂಚ್, ಹಮ್ಕೊ ಪಚ್ಚಿಸ್ (ನಾವು ಐದು-ನಮಗೆ ಐವತ್ತು) ಎಂಬಂತಾಗಿತ್ತು. ಗೋವು ನಮ್ಮ ತಾಯಿ ಗೋಹತ್ಯೆ ನಿಷೇಧ ಮಾಡಿದ್ದಿವಿ. ಗೋ ಹತ್ಯೆ ನಿಷೇಧ ಕಾಯ್ದೆಯನ್ನು ತಾಕತ್ತಿದ್ದರೆ ಹಿಂಪಡೆಯಿರಿ. ಅದನ್ನ ನಾವು ಹಿಂದೆ ತೆಗೆದುಕೊಳ್ಳಲು ಯಾವುದೇ ಕಾರಣಕ್ಕೂ ಬಿಡಲ್ಲ ಎಂದು ಹೇಳಿದರು.

ಅಲ್ಲಾ ಮತಾಂತರಕ್ಕೆ ಕಾಲ್ ಕೊಡಲ್ಲ, ನಿಮಗೆ ಕೈ ಕೊಡ್ತಾನೆ:  ಅಲ್ಲಾ ಕಾಲ್ ಕೊಡ್ತಾನೆ ಅಂತ ಮತಾಂತರ ಮಾಡ್ತಾರೆ. ಅಲ್ಲಾ ಕಾಲ್ ಕೊಡಲ್ಲ ಕೈ ಕೊಡ್ತಾನೆ. ಚುನಾವಣೆ ಬಂದ್ರೆ ರಾಮಮಂದಿರ ಬಿಜೆಪಿಯವರಿಗೆ ನೆನಪಾಗುತ್ತೆ ಎನ್ನುವ ಕಾಂಗ್ರೆಸ್ ವಾದಿಸುತ್ತದೆ. ಆದ್ರೆ, ನಾವು ಈಗ ರಾಮಮಂದಿರ ಕಟ್ಟಿದ್ದೇವೆ. ಈಗ ರಾಮಮಂದಿರ ಕಟ್ಟಿದ್ದೇವೆ ಅಂತ ರಾಮರಾಜ್ಯ ಯಾವಾಗ ಆಗುತ್ತೆ ಅಂತ ಪ್ರಶ್ನೆ ಕೇಳ್ತಾರೆ. ದೇಶವನ್ನು ಒಡೆದು ಚಿತ್ರಮಾಡಿದರು ಹಿಂದೂಸ್ಥಾನ ಪಾಕಿಸ್ತಾನ ಅಂತ ಮಾಡಿದ್ರು. ನರೇಂದ್ರ ಮೋದಿಯವರು ನಮಗೆ ಪ್ರಧಾನಿ ಬೇಕು ಅಂತ ಹೇಳ್ತಾರೆ. ಇಲ್ಲಿಯ ಮುಸ್ಲಿಂಮರು ದನ ತಿಂದಹಾಗೆ ತಿಂದು ಪಾಕಿಸ್ತಾನಕ್ಕೆ ಜೈ ಅಂತಾರೆ. ಜೈ ಅನ್ನೋದಾದ್ರೆ ಹೊರಗೆ ಬಂದು ಜೈ ಅನ್ನಿ, ನಿಮ್ಮನ್ನ ನಮ್ಮ ಕಾರ್ಯಕರ್ತರು ಬಿಡಲ್ಲ ಎಂದು ಕೆಣಕಿದರು.

ಬೆಂಗಳೂರಿನಿಂದ ಅಯೋಧ್ಯೆಗೆ ವಿಶೇಷ ರೈಲು, ಅತೀ ಕಡಿಮೆ ದುಡ್ಡಿನಲ್ಲಿ ಹೋಗಿ ಬರ್ಬೋದು

ಕಾಂಗ್ರೆಸ್‌ ಶಾಸಕರೇ ಮಸೀದಿ ಒಳಗೆ ವಿಶ್ವನಾಥ ಮಂದಿರವಿದೆ ಎಂದಿದ್ದರು: ದೆಹಲಿಗೆ ಹೋಗಿ ಗಾಂಧಿ ಸಮಾಧಿ ನೋಡಿ. ಅಲ್ಲಿ ಹೇ ಏಸು, ಹೇ ಅಲ್ಲಾ ಅಂತ ಬರೆದಿಲ್ಲ ಅಲ್ಲಿ 'ಹೇ ರಾಮ್' ಅಂತ ಬರೆದಿದೆ. ವರ್ಷಕ್ಕೊಂದು ಬಾರಿ ಶಾಸಕರನ್ನು   ಟೂರ್ ಕಳಿಸ್ತಾರೆ. ಹಾಗೆ ಹೋದಾಗ ಅಯೋದ್ಯೆಗೆ ಹೋದ್ವಿ ಕಾಶಿ ವಿಶ್ವನಾಥನಿಗೆ ಹೋದ್ವಿ. ಅಲ್ಲಿ ಅರ್ಧ ಮಸೀದಿ ಇದೆ. ವಿಶ್ವನಾಥನ ಮಂದಿರ ಒಳಗಡೆ ಮಸೀದಿ ಇದೆ ಎಂದು ಕಾಂಗ್ರೆಸ್‌ ಶಾಸಕರೇ ಹೇಳಿದ್ದರು. ಹೊಸ ಗೋಡೆ ಇದೆ, ಅದನ್ನ ನೀವು ಫೋಟೊ ಹೊಡೆದು ಅಸೆಂಬ್ಲಿಯಲ್ಲಿ ಮಾತಾಡಿ ಎಂದಿದ್ದರು. ನಾನ್ಯಾಕೆ ನೀವೇ ಮಾತಾಡಿ ಎಂದಿದ್ದಕ್ಕೆ ನನ್ನ ಕ್ಷೇತ್ರದಲ್ಲಿ ಮುಸ್ಲಿಂ ಮತಗಳು ಇವೆ. ಅದಕ್ಕಾಗಿ ನಾನು ಮಾತಾಡಲ್ಲ ಎಂದಿದ್ದರು. ಹಿಂದುತ್ವ ಸಂರಕ್ಷಣೆಯಲ್ಲಿ ಕಾಂಗ್ರೆಸ್‌ನವರು ಮತಕ್ಕಾಗಿ ಹಿಂದೆ ಸರಿತಾರೆ ಎಂದರು. 

ಸಿದ್ದರಾಮಯ್ಯನಿಗೆ ತಕ್ಕ ಮಗನೇ ಹುಟ್ಟಿದ್ದಾನೆ:  ಸಮಾಜವಾದಿ ಎನ್ನುವ ಸಿದ್ದರಾಮಯ್ಯಗೆ ಅವರ ಥರದ ಮಗನೇ ಹುಟ್ಟಿದ್ದಾನೆ. ಹಿಂದೂರಾಷ್ಟ್ರ ಮಾಡುವ ಜನರು ಮಾತ್ರ ಶಾಸಕರಾಗಬೇಕು. ಸ್ವಾಮೀ ವಿವೇಕಾನಂದರು ಹೊರ ದೇಶಕ್ಕೆ ಹೋದಾಗ ಅವರನ್ನ ಮೂಸಿ ನೋಡಿರಲಿಲ್ಲ. ನಂತರ ಅವರ ಮಾತಿನಿಂದ ಎಲ್ಲರೂ ಅವರನ್ನು ಗೌರವದಿಂದ ಕಾಣಲು ಶುರುಮಾಡಿದರು. ಅಂತಹ ಧರ್ಮ ಅಂತಹ ಸಂಸ್ಕೃತಿ ನಮ್ಮದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಪುತ್ರ ಯತೀಂದ್ರ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಾಗ್ದಾಳಿ ಮಾಡಿದರು.

Follow Us:
Download App:
  • android
  • ios