ಬೆಂಗಳೂರು(ಜ.12): ನಗರದಲ್ಲಿ ಜಾಹಿರಾತು ಪ್ರದರ್ಶನಕ್ಕೆ ಹೊಸ ಬಿಬಿಎಂಪಿ ಕಾಯ್ದೆಯಲ್ಲಿ ಅವಕಾಶವಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ನಿಷೇಧಿಸಲಾಗಿದ್ದ ಜಾಹಿರಾತು ಫಲಕ, ಫ್ಲೆಕ್ಸ್‌, ಬ್ಯಾನರ್‌ ಅಳವಡಿಕೆಗೆ ಅವಕಾಶ ನೀಡುವ ಸುಳಿವನ್ನು ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ನೀಡಿದ್ದಾರೆ.

ಬಿಬಿಎಂಪಿಗೆ ಹೊಸ ಕಾಯ್ದೆ ಜಾರಿ ಕುರಿತು ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಬಿಎಂಪಿ ನೂತನ ಕಾಯ್ದೆಯಲ್ಲಿ ಮುಖ್ಯ ಆಯುಕ್ತರ ಅನುಮತಿ ಪಡೆದು ಜಾಹಿರಾತು ಪ್ರದರ್ಶನಕ್ಕೆ ಅವಕಾಶ ನೀಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿಯ ಜಾಹಿರಾತು ಬೈಲಾ ತಿದ್ದುಪಡಿ ಮಾಡಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕಾಗುತ್ತದೆ ಎಂದರು.

ದಿನ ಭವಿಷ್ಯ: ಈ ರಾಶಿಯವರ ದಾಂಪತ್ಯದಲ್ಲಿ ಏರುಪೇರು, ಕುಟುಂಬದಲ್ಲಿ ಕಿರಿಕಿರಿ!

ಪಾಲಿಕೆಗೆ ಪ್ರತ್ಯೇಕ ಕಾಯ್ದೆ ಬೇಕೆಂದು ಬಿಬಿಎಂಪಿ ಕೌನ್ಸಿಲ್‌ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಕಾಯ್ದೆಗೆ ರಾಜ್ಯಪಾಲರರು ಅಂಕಿತ ಹಾಕಿದ್ದಾರೆ. ಹೊಸ ಕಾಯ್ದೆ ಜಾರಿಗೆ ಬರುತ್ತಿರುವುದರಿಂದ ಅನೇಕ ಬದಲಾವಣೆ ಮತ್ತು ತಿದ್ದುಪಡಿ ಮಾಡಬೇಕಾಗಲಿದೆ ಎಂದು ಆಯುಕ್ತರು ತಿಳಿಸಿದರು.

ಹೊಸ ಕಾಯ್ದೆ ಪ್ರಕಾರ ಕನಿಷ್ಠ 225, ಗರಿಷ್ಠ 251 ವಾರ್ಡ್‌ ಇರಬಹುದಾಗಿದೆ. ಆದರೆ, 243 ವಾರ್ಡ್‌ಗಳನ್ನು ಮಾಡಲು ನಿರ್ಧರಿಸಲಾಗಿದೆ. ಪಾಲಿಕೆ ಗಡಿಯಿಂದ 1 ಕಿ.ಮೀ. ವ್ಯಾಪ್ತಿಯ ಹೊಸ ಪ್ರದೇಶವನ್ನೂ ಸೇರಿಸಲಾಗುವುದು. ಹೊಸ ಪ್ರದೇಶಗಳನ್ನೂ ಸೇರಿಸಿದ ಬಳಿಕ ಒಟ್ಟು ಎಷ್ಟುಜನಸಂಖ್ಯೆ ಇರುತ್ತದೆಯೋ, ಆ ಜನಸಂಖ್ಯೆಯನ್ನು ಸಮಾನವಾಗಿ ಇರುವಂತೆ ವಾರ್ಡ್‌ ಮರುವಿಂಗಡನೆ ಮಾಡಲಾಗುವುದು ಎಂದರು.

ಪಿಯುಸಿ ಪರೀಕ್ಷೆ ನೋಂದಣಿ ಗಡುವು ಮತ್ತೆ ವಿಸ್ತರಣೆ, ಇಂಪಾರ್ಟೆಂಟ್ ಡೇಟ್ಸ್ ಹೀಗಿವೆ

ಇನ್ನು ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಎಂಟು ವಲಯಗಳಿವೆ. ಇದನ್ನು ಗರಿಷ್ಠ 15 ವಲಯಗಳನ್ನಾಗಿಯೂ ಮಾಡಬಹುದಾಗಿದೆ. ಮುಖ್ಯ ಆಯುಕ್ತರಿಂದಲೇ ವಾರ್ಡ್‌ ಕಮಿಟಿ ಸದಸ್ಯರ ನೇಮಕ ಮಾಡಲಾಗುತ್ತದೆ. ಪ್ರತಿ ಮತಗಟ್ಟೆವ್ಯಾಪ್ತಿಯಲ್ಲಿ ಏರಿಯಾ ಸಭಾವನ್ನು ನೇಮಕ ಮಾಡಲಾಗುತ್ತದೆ ಎಂದು ವಿವರಿಸಿದರು.