Asianet Suvarna News Asianet Suvarna News

ಪ್ರಧಾನಿ ಮೋದಿ ಆಗಮನಕ್ಕೆ BBMP ಖರ್ಚು ಮಾಡಿದ್ದಿಷ್ಟು...!

* ಕರ್ನಾಟಕ ಪ್ರವಾಸ ಮುಗಿಸಿ ವಾಸಪ್ ದೆಹಲಿಗೆ ತೆರಳಿದ ಮೋದಿ
* ಸೋಮವಾರ ಬೆಂಗಳೂರಿಗೆ ಬಂದಿದ್ದ ಮೋದಿ ಮಂಗಳವಾರ ಮೈಸೂರಿನಿಂದ ವಾಪಸ್
* ಇನ್ನು ನರೇಂದ್ರ ಮೋದಿಗಾಗಿ ಬಿಬಿಎಂಪಿ ಖರ್ಚು ಮಾಡಿದ್ದೇಷ್ಟು ಗೊತ್ತಾ?
 

BBMP Spends Rs 14 Crore For MP Narendra Modi Bengaluru Tour rbj
Author
Bengaluru, First Published Jun 21, 2022, 12:40 PM IST

ಬೆಂಗಳೂರು, (ಜೂನ್.21): ಪ್ರಧಾನಿ ನರೇಂದ್ರ ಮೋದು ಅವರ ಎರಡು ದಿನದ ಕರ್ನಾಟಕ ಪ್ರವಾಸ ಅಂತ್ಯವಾಗಿದ್ದು, ಇಂದು(ಮಂಗಳವಾರ) ಮೈಸೂರಿನಿಂದ ನವದೆಹಲಿಗೆ ತೆರಳಿದರು.

ನಿನ್ನೆ (ಸೋಮವಾರ) ಬೆಂಗಳೂರಿಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಮೈಸೂರಿಗೆ ಹೋದ್ರು. ಇನ್ನು ಒಂದು ದಿನ ಬೆಂಗಳೂರಿನಲ್ಲಿ  ಇದ್ದ ಮೋದಿಗಾಗಿ ಹತ್ತಾರು ಕೋಟೆ ಖರ್ಚಾಗಿದೆ.

ಮೋದಿ ಅವರು ಕೇವಲ 4 ಗಂಟೆ ಮಾತ್ರ ಬೆಂಗಳೂರಿನಲ್ಲಿದ್ದರು. ಇದಕ್ಕೆ ಬಿಬಿಎಂಪಿ ಬರೋಬ್ಬರಿ 14 ಕೋಟಿ ಖರ್ಚು ಮಾಡಿದೆ   ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸುವುದಕ್ಕೆ ಭರ್ಜರಿ ಸಿದ್ದತೆ ನಡೆಸಲಾಗಿತ್ತು. ಸಿಟಿಯ ಪ್ರತಿ ರಸ್ತೆ ರಸ್ತೆಗಳನ್ನು ರಿಪೇರಿ ಮಾಡಿ ಪಳ-ಪಳ ಹೊಳೆಯುವಂತೆ ಮಾಡಲಾಗಿದೆ. ಇದರಿಂದ ಕೋಟಿ-ಕೋಟಿ ಖರ್ಚು ಮಾಡಲಾಗಿದೆ.

2 ದಿನದ ರಾಜ್ಯ ಪ್ರವಾಸ ಅಂತ್ಯ: ಮೈಸೂರಿನಿಂದ ಕೇರಳ ಬದಲಿಗೆ ದೆಹಲಿಯತ್ತ ಹೊರಟ ಮೋದಿ

ಈ ಬಗ್ಗೆ ಮಾಹಿತಿ ನೀಡಿದ  ಬಿಬಿಎಂಪಿ ಆಯುಕ್ತರ ತುಷಾರ್‌ ಗಿರಿನಾಥ್‌, ಪ್ರಧಾನಿ ರಾಜ್ಯಕ್ಕೆ ಬರುತ್ತಿರೋದೆ ನಮಗೆಲ್ಲ ಸಂತೋಷದ ವಿಚಾರವಾಗಿದೆ. ಆ ನಿಟ್ಟಿನಲ್ಲಿ ತುರ್ತು ಸಂದರ್ಭದಲ್ಲಿ ಅನುದಾನ ಬಳಸಬಹುದಾದ ʻವಿವೇಚನ ಅನುದಾನದಡಿʼ ಫುಟ್‌ಫಾಥ್‌ ರಸ್ತೆ, ಕಾಮಗಾರಿ, ಡಾಂಬರೀಕರಣ, ಚರಂಡಿ, ಊಟ, ವಸತಿ ಕಲ್ಪಿಸಲು ನಿಟ್ಟಿನಲ್ಲಿ ಬರೊಬ್ಬರಿ 14 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರು.

ಇನ್ನೂ ಮೈಸೂರಿನಲ್ಲೂ ರಸ್ತೆಗಳಿಗೆ ಹೊಸ ರೂಪವನ್ನೆ ನೀಡಲಾಗಿತ್ತು. ವಸತಿ, ಯೋಗ ಕಾರ್ಯಕ್ರಮಗಳ ಸಿದ್ಧತೆ ಉಪಹಾರ ಸೇರಿದಂತೆ ಬರೊಬ್ಬರಿ 20 ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಒಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಒಟ್ಟು 20 ಗಂಟೆಗಳ ಕಾಲ ಇದ್ದು, ಇದಕ್ಕೆ 34 ಕೋಟೆ ರೂಪಾಯಿಗಳನ್ನ ಖರ್ಚು ಮಾಡಲಾಗಿದೆ.

ನಿನ್ನೆ(ಸೋಮವಾರ) ಬೆಂಗಳೂರಿಗೆ ಬಂದಿದ್ದ ಮೋದಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂಜೆ ಮೈಸೂರಿಗೆ ಭೇಟಿ ನೀಡಿದ್ರು. ಮೈಸೂರಿನಲ್ಲೂ ಸಹ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದರು.  ಬಹುಸಾವಿರ ಕೋಟಿ ರೂ.ಗಳ ಮೊತ್ತದ ಯೋಜನೆಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆಗಳನ್ನು ಮಾಡಿದ್ರು. ಅಲ್ಲದೇ ಇಂದು ಯೋಗದಲ್ಲಿ ಭಾಗವಹಿಸಿ  ವಿಶೇಷ ವಿಮಾನದಲ್ಲಿ ದೆಹಲಿಗೆ ತೆರಳಿದರು.

ಜೂನ್ 20 ಮಧ್ಹಾನ 12ಕ್ಕೆ ಯಲಹಂಕದ ವಾಯುನೆಲೆಗೆ ಬಂದಿಳಿದಿದ್ದರು.ಬಳಿಕ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದರು. ಇನ್ನು ಮೋದಿ ಆಗಮನಕ್ಕೂ ಒಂದು ವಾರಕ್ಕೂ ಮೊದಲೇ ಬಿಬಿಎಂಪಿ ಆಯಾ ರಸ್ತೆಗಳಳನ್ನ ರಿಪೇರಿ ಮಾಡಿತ್ತು.

Follow Us:
Download App:
  • android
  • ios