Asianet Suvarna News Asianet Suvarna News

ಸ್ವಚ್ಛ ಸರ್ವೇಕ್ಷಣ: ಬಿಬಿಎಂಪಿ ರ‌್ಯಾಂಕ್‌ 214ಕ್ಕೆ ಕುಸಿತ

ಕಳಪೆ ಸಾಧನೆ| 194ನೇ ಸ್ಥಾನದಿಂದ ಕುಸಿದ ನಗರ ಪಾಲಿಕೆ, ಆದರೆ ಉತ್ತಮ ಕಸ ನಿರ್ವಹಣಾ ವ್ಯವಸ್ಥೆ ವಿಭಾಗದಲ್ಲಿ 37ನೇ ರಾರ‍ಯಂಕ್‌ ಗಳಿಸುವ ಮೂಲಕ ಪ್ರಶಸ್ತಿಗೆ ಪಾತ್ರವಾಗಿದೆ| 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 47 ನಗರಗಳ ಪಟ್ಟಿಯಲ್ಲಿ ಕಸ ವಿಲೇವಾರಿಯಲ್ಲಿ ಉತ್ತಮ ನಿರ್ವಹಣೆ| 

BBMP rank declines to 214 In a Swachch Sarvekhan Campaign
Author
Bengaluru, First Published Aug 21, 2020, 7:13 AM IST

ಬೆಂಗಳೂರು(ಆ.21): ಕೇಂದ್ರ ಸರ್ಕಾರ ನಡೆಸುವ ‘ಸ್ವಚ್ಛ ಸರ್ವೇಕ್ಷಣ್‌’ ಅಭಿಯಾನದಲ್ಲಿ ಬಿಬಿಎಂಪಿ ಈ ಬಾರಿ 214ನೇ ರ‌್ಯಾಂಕ್‌ಗೆ ಕುಸಿದಿದೆ. ಆದರೆ, ಉತ್ತಮ ಕಸ ನಿರ್ವಹಣಾ ವ್ಯವಸ್ಥೆ ವಿಭಾಗದಲ್ಲಿ 37ನೇ ರಾರ‍ಯಂಕ್‌ ಗಳಿಸುವ ಮೂಲಕ ಪ್ರಶಸ್ತಿಗೆ ಪಾತ್ರವಾಗಿದೆ.

ಕಳೆದ ವರ್ಷದ ಅಭಿಯಾನದಲ್ಲಿ 194ನೇ ರ‌್ಯಾಂಕ್‌ ಗಳಿಸಿದ್ದ ಬಿಬಿಎಂಪಿ ಈ ವರ್ಷ 214ನೇ ರ‌್ಯಾಂಕ್‌ಗೆ ಕುಸಿದಿದೆ. ಆದರೆ, 10 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ಹೊಂದಿರುವ 47 ನಗರಗಳ ಪಟ್ಟಿಯಲ್ಲಿ ಕಸ ವಿಲೇವಾರಿಯಲ್ಲಿ ಉತ್ತಮ ನಿರ್ವಹಣೆಯ (ಸ್ವ ಸುಸ್ಥಿರ) ಪ್ರಯತ್ನಕ್ಕೆ 37ನೇ ಸ್ಥಾನ ಪಡೆದಿದೆ.

ಪ್ರಸಕ್ತ ವರ್ಷದ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ ದೇಶದ 4,242 ನಗರಗಳು ಭಾಗಿಯಾಗಿದ್ದು, ಒಟ್ಟು ಆರು ಸಾವಿರ ಅಂಕಗಳಿಗೆ ಅಭಿಯಾನ ನಡೆದಿದ್ದು, ಬಿಬಿಎಂಪಿ ಇದರಲ್ಲಿ 2657 ಅಂಕಗಳನ್ನು ಗಳಿಸುವ ಮೂಲಕ 214 ಸ್ಥಾನ ಪಡೆದಿದೆ. ಕಳೆದ ಸೆಪ್ಟೆಂಬರ್‌ನಲ್ಲಿ ಬಿಬಿಎಂಪಿ ಬಯಲು ಬಹಿರ್ದೆಸೆ ಮುಕ್ತ ನಗರ (ಒಡಿಎಫ್‌)ಎಂದು ಘೋಷಿಸಿಕೊಂಡಿತ್ತು. ಹೀಗಾಗಿ, ಬಿಬಿಎಂಪಿಗೆ ಕೇಂದ್ರ ಸರ್ಕಾರ ‘ಒಡಿಎಫ್‌ ++’ ಶ್ರೇಣಿ ನೀಡಿದ್ದರಿಂದ ಸ್ವಚ್ಛ ಸರ್ವೇಕ್ಷಣ ಅಭಿಯಾನದಲ್ಲಿ 500 ಅಂಕ ಗಳಿಸುವುದಕ್ಕೆ ಅನುಕೂಲವಾಗಿತ್ತು. ಈ ಮೂಲಕ ಬೆಂಗಳೂರು ರಾಜ್ಯದಲ್ಲಿ ‘ಒಡಿಎಫ್‌ ++’ ಶ್ರೇಣಿ ಗಳಿಸಿದ ಮೂರು ನಗರದ ಪಟ್ಟಿಗೆ ಸೇರ್ಪಡೆಯಾಗಿದೆ.

ಬಿಬಿಎಂಪಿ ಸದಸ್ಯರ ಅಧಿಕಾರ ಅವಧಿ ಪೂರ್ಣ: ನಾಳೆಯಿಂದ ಮತದಾರ ಪಟ್ಟಿ ಕಾರ್ಯ

ಸ್ವಚ್ಛಸರ್ವೇಕ್ಷಣ ಅಭಿಯಾನದಲ್ಲಿ ಬಿಬಿಎಂಪಿಯ ಕಳಪೆ ಸಾಧನೆಗೆ ಆಡಳಿತ ಪಕ್ಷವೇ ಕಾರಣ, ಹಸಿ ಟೆಂಡರ್‌ ಜಾರಿ ಮಾಡಿ ಕಸ ವಿಲೇವಾರಿಗೆ ನಿರ್ದಿಷ್ಟಕ್ರಮ ಕೈಗೊಂಡಿದ್ದರೆ ಉತ್ತಮ ಅಂಕ ಗಳಿಸಬಹುದಾಗಿತ್ತು ಎಂದು ವಿರೋಧ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಅವರು ತಿಳಿಸಿದ್ದಾರೆ.  

ಕಳಪೆ ಸಾಧನೆಗೆ ಪ್ರಮುಖ ಕಾರಣಗಳು

* ನಗರದ ತ್ಯಾಜ್ಯವನ್ನೂ ಭೂಭರ್ತಿಗೆ ವಿಲೇವಾರಿ ಮಾಡುತ್ತಿರುವುದು.
* ಕಸ ವಿಲೇವಾರಿ ನಿಯಮದಂತೆ ತ್ಯಾಜ್ಯವನ್ನು ಭೂಭರ್ತಿ ಮಾಡದಿದರುವುದು.
* ಕಸ ವಿಲೇವಾರಿಗೆ ನಿರ್ದಿಷ್ಟ ಯೋಜನೆ ಇಲ್ಲ.
* ಕಸ ವಿಲೇವಾರಿ ವಾಹನಗಳ ನಿಗಾ ವಹಿಸುವುದಕ್ಕೆ ನಿಯಂತ್ರಣ ಕೇಂದ್ರ ಇಲ್ಲ.
* ಇಂದೋರ್‌ ಮಾದರಿಯ ಪ್ರಸ್ತಾವನೆ ಹಂತದಲ್ಲಿಯೇ ಸ್ಥಗಿತ
* ಹಸಿ ಮತ್ತು ಒಣ ತ್ಯಾಜ್ಯ ವಿಂಗಡಣೆ ಪ್ರಮಾಣ ಶೇ.25 ರಿಂದ 30 ರಷ್ಟು ಮಾತ್ರ.

ಸ್ವ ಸುಸ್ಥಿರದಲ್ಲಿ ಬಿಬಿಎಂಪಿಯ ಅಂಕ

ವಿಭಾಗ ಒಟ್ಟು ಅಂಕ ಗಳಿಸಿದ ಅಂಕ
ಕಸಮುಕ್ತ ನಗರ 1,000 0
ಒಡಿಎಫ್‌ 500 500
ಮಾಹಿತಿ ಸಂಗ್ರಹ, ವಿಲೇವಾರಿ 1,700 991.42
ಒಟ್ಟು 3,200 1,491.42
ಅಭಿಯಾನದಲ್ಲಿ ಬಿಬಿಎಂಪಿ ಗಳಿಸಿದ ಅಂಕದ ವಿವರ
ಸರ್ವೀಸ್‌ ಲೆವೆಲ್‌ ಪ್ರೋಗ್ರೆಸ್‌ 1,500 703.91
ದಾಖಲಾತಿಗೆ (ಸರ್ಟಿಫಿಕೆಟ್‌) 1,500 500
ಸ್ಥಳ ಪರಿಶೀಲನೆ 1,500 702.44
ಸಾರ್ವಜನಿಕರ ಅಭಿಪ್ರಾಯ 1,500 750.48
ಒಟ್ಟು 6,000 2,656.82

ಬೆಂಗಳೂರಿನ ಈವರೆಗಿನ ಸಾಧನೆ: ವರ್ಷ ಭಾಗವಹಿಸಿದ ನಗರಗಳು ಬೆಂಗಳೂರಿನ ರ‌್ಯಾಂಕ್‌

2016 73 16
2017 434 210
2018 4,203 216
2019 4,237 194
2020 4,242 214

2021ರ ಸರ್ವೇಕ್ಷಣ ಅಭಿಯಾನಕ್ಕೆ ಬಿಬಿಎಂಪಿ ಪೂರ್ವ ತಯಾರಿ

ನಗರ ಒಡಿಎಫ್‌ ++ ಪ್ರಶಸ್ತಿ, ‘ಬೆಸ್ಟ್‌ ಸೆಲ್‌್ಫ ಸಸ್ಟೇನೆಬಲ್‌ ಮೆಗಾ ಸಿಟಿ’ ಪ್ರಶಸ್ತಿ ಲಭಿಸಿದೆ. ಹಿಂದಿನ ವರ್ಷಗಳಿಗಿಂತ ಈ ಬಾರಿ ಅಂಕಗಳಲ್ಲಿ ಗಣನೀಯ ಸುಧಾರಣೆ ಕಂಡಿದೆ. ಸ್ವಚ್ಛ ಸರ್ವೇಕ್ಷಣ್‌-2021ಕ್ಕೆ ಪಾಲಿಕೆ ಉತ್ತಮ ರಾರ‍ಯಂಕ್‌ ಗಳಿಸಲಿದೆ. ನಗರದ ಕಸ ವಿಲೇವಾರಿ ಮಾಡುವ ಕಾಂಪ್ಯಾಕ್ಟರ್‌ ಹಾಗೂ ಆಟೋ ಟಿಪ್ಪರ್‌ ನಿಗಾ ವಹಿಸಲು ಹಾಗೂ ಪ್ರತಿ ಮನೆಯಿಂದ ಕಸ ಸಂಗ್ರಹಿಸುವ ಬಗ್ಗೆ ಮಾಹಿತಿ ಪಡೆಯಲು ಜಿಪಿಎಸ್‌ ಸಾಧನ ಅಳವಡಿ ಘನತ್ಯಾಜ್ಯ ನಿರ್ವಹಣೆ ಮೇಲ್ವಿಚಾರಣೆಗೆ ‘ಕಮಾಂಡ್‌ ಕಂಟ್ರೋಲ್‌ ಸೆಂಟರ್‌’ ಸ್ಥಾಪನೆ. ಪಾಲಿಕೆಯ ಸಂಸ್ಕರಣಾ ಘಟಕಗಳನ್ನು ಸಮರ್ಪಕ ಬಳಕೆ ಮತ್ತು ವಾರ್ಡ್‌ ಮಟ್ಟದಲ್ಲಿ ಸಂಸ್ಕರಣೆ, ಕಸ ವಿಂಗಡಣೆ ಪ್ರಮಾಣ ಹೆಚ್ಚಿಸುವುದು. ಬ್ಲಾಕ್‌ ಸ್ಪಾಟ್‌ ತೆರವು, ಒಡಿಎಫ್‌ ++ ಮಾನ್ಯತೆ ಪಡೆದಿದ್ದು, ಮುಂದಿನ ದಿನಗಳಲ್ಲಿ ವಾಟರ್‌ ಪ್ಲಸ್‌ ಮಾನ್ಯತೆ ಸಿದ್ಧತೆ ಮಾಡಿಕೊಳ್ಳಲಾಗುವುದು ಎಂದು ಬಿಬಿಎಂಪಿ ಪ್ರಕಟಣೆಯಲ್ಲಿ ತಿಳಿಸಿದೆ.

ಸಾರ್ವಜನಿಕ ಭಾಗವಹಿಸುವಿಕೆ ಕಳಪೆ

ಅಭಿಯಾನದಲ್ಲಿ ಬಿಬಿಎಂಪಿ ಜೊತೆಗೆ ನಗರ ನಾಗರಿಕರ ಪಾಲ್ಗೊಳ್ಳುವಿಕೆಗೆ 1500 ಅಂಕಗಳು ಇರುತ್ತವೆ. ಆದರೆ, ಈ ವಿಭಾಗದಿಂದ ಬಿಬಿಎಂಪಿಗೆ ಕೇವಲ 750 ಅಂಕ ಲಭ್ಯವಾಗಿವೆ. ಸ್ವಚ್ಛ ಸರ್ವೇಕ್ಷಣ ತಂಡ ನಗರದ ವಿವಿಧ ಭಾಗದಲ್ಲಿ ಸಾರ್ವಜನಿಕರಿಂದ ಅಭಿಪ್ರಾಯವನ್ನು ನೇರವಾಗಿ ಪಡೆಯುವ 880 ಅಂಕದ ಪೈಕಿ ಬಿಬಿಎಂಪಿಗೆ 561 ಅಂಕ ಮಾತ್ರ ಲಭ್ಯವಾಗಿದೆ. ಇತರೆ ವಿಧಾನದಲ್ಲಿ ಸಾರ್ವಜನಿಕರ ಅಭಿಪ್ರಾಯ ಸಂಗ್ರಹದ 220 ಅಂಕದ ಪೈಕಿ 189 ಅಂಕ ಲಭಿಸಿವೆ. ಉಳಿದಂತೆ ಸಾರ್ವಜನಿಕರೇ ಸ್ವಯಂ ಪ್ರೇರಿತರಾಗಿ ಸ್ವಚ್ಛ ಸರ್ವೇಕ್ಷಣ ಆ್ಯಪ್‌ ಮೂಲಕ ಅಭಿಪ್ರಾಯದ 400 ಅಂಕದಲ್ಲಿ ಕೇವಲ 0.45 ಲಭಿಸಿದೆ. ಇದು ಸಹ ಬಿಬಿಎಂಪಿ ಉತ್ತಮ ರಾರ‍ಯಂಕ್‌ ಪಡೆಯುವಲ್ಲಿ ವಿಫಲವಾಯಿತು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತ ಡಿ.ರಂದೀಪ್‌, ಟೆಂಡರ್‌ ಪ್ರಕ್ರಿಯೆ ಅಂತಿಮವಾಗದ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷ ಕಸ ಮುಕ್ತ ನಗರ ವಿಭಾಗದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಮುಂದಿನ ವರ್ಷದ ಅಭಿಯಾನದಲ್ಲಿ ಉತ್ತಮ ಸ್ಥಾನ ಗಳಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Follow Us:
Download App:
  • android
  • ios