ಬಿಬಿಎಂಪಿ ಉಚಿತ ಲ್ಯಾಪ್‌ಟಾಪ್‌ಗೆ ಮತ್ತೊಮ್ಮೆ ದಾಖಲೆ ಸಲ್ಲಿಸಲು ಅವಕಾಶ

ಬಿಬಿಎಂಪಿ ಅಮೃತಮಹೋತ್ಸವ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಲು 10 ದಿನಗಳ ಕಾಲ ಅವಕಾಶ ನೀಡಲಾಗಿದೆ.

BBMP free laptop Scheme Opportunity to documents re submit sat

ಬೆಂಗಳೂರು (ಫೆ.18): ಬಿಬಿಎಂಪಿ ಅಮೃತಮಹೋತ್ಸವ ಯೋಜನೆಯಡಿ ಉಚಿತ ಲ್ಯಾಪ್‌ಟಾಪ್ ಪಡೆಯಲು ಅರ್ಜಿ ಸಲ್ಲಿಕೆ ಮಾಡಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಸೂಕ್ತ ದಾಖಲೆಗಳನ್ನು ಅಪ್ಲೋಡ್ ಮಾಡಲು 10 ದಿನಗಳ ಕಾಲ ಅವಕಾಶ ನೀಡಲಾಗಿದೆ.

2022-23ನೇ ಸಾಲಿನ ಬಿಬಿಎಂಪಿ ಅಮೃತ ಮಹೋತ್ಸವ ಲ್ಯಾಪ್ ಟಾಪ್‌ಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಹ ದಾಖಲೆಗಳನ್ನು ಅಪ್ಲೋಡ್ ಮಾಡಲು ಮಾಡುವಂತೆ ಕಲ್ಯಾಣ ವಿಭಾಗದ ಸಹಾಯಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  ಬಿಬಿಎಂಪಿ ವ್ಯಾಪ್ತಿಯಲ್ಲಿ 2022-23ನೇ ಸಾಲಿನಲ್ಲಿ ಅಮೃತ ಮಹೋತ್ಸವ ಲ್ಯಾಪ್ ಟಾಪ್ ಕಾರ್ಯಕ್ರಮದಡಿ ವಿದ್ಯಾರ್ಥಿಗಳು ಈಗಾಗಲೇ ಆನ್ ಲೈನ್ ಮುಖಾಂತರ ಅರ್ಜಿ ಸಲ್ಲಿಸಿದ್ದಾರೆ. ಸಮರ್ಪಕವಾಗಿ ಅಗತ್ಯವಿರುವ ದಾಖಲೆಗಳನ್ನು ಆನ್ ಲೈನ್ ಮುಖಾಂತರ ಸಲ್ಲಿಸದೇ ಇರುವ ವಿದ್ಯಾರ್ಥಿಗಳು ಮತ್ತೊಮ್ಮೆ ಅರ್ಹ ದಾಖಲೆಗಳನ್ನು ಅಪ್ ಲೋಡ್ ಮಾಡಲು ಕಾಲಾವಕಾಶ ನೀಡಲಾಗಿರುತ್ತದೆ.

ಬೆಂಗಳೂರಿಗೆ ಹೊಸ ರೂಪ ನೀಡಲು ಪೂರಕವಾಗಿ ಬಿಬಿಎಂಪಿ ಬಜೆಟ್ ಮಂಡನೆ: ಡಿಕೆ ಶಿವಕುಮಾರ್

ಅದರಂತೆ, ಪಾಲಿಕೆಯ ವೆಬ್ ಸೈಟ್ https://welfare.bbmpgov.in/ ಗೆ ಭೇಟಿ ನೀಡಿ ಅರ್ಜಿಯ ಪ್ರಸ್ತುತ ಸ್ಥತಿ ಹಾಗೂ ಅರ್ಜಿಯ ತಿದ್ದುಪಡಿಗೆ ಭೇಟಿ ನೀಡಿಬಹುದು. ನಂತರ, ಈಗಾಗಲೇ ಅರ್ಜಿಯಲ್ಲಿ ನಮೂದಿಸಿರುವ ಮೊಬೈಲ್ ಸಂಖ್ಯೆ ಮತ್ತು ಅರ್ಜಿ ಸಂಖ್ಯೆ ನಮೂದಿಸುವ ಮೂಲಕ ಅರ್ಜಿ ಸ್ಥಿಯನ್ನು ತಿಳಿದು ತಿದ್ದುಪಡಿ ಮಾಡಿಕೊಳ್ಳಬಹುದು. ಅಥವಾ ಹೊಸದಾಗಿ ದಾಖಲೆಗಳನ್ನು ಅಪ್ಲೋಡ್ ಮಾಡಲು ಕೂಡ ಅವಕಾಶ ಕಲ್ಪಿಸಲಾಗಿರುತ್ತದೆ.

ಸರ್ಕಾರಿ ಶಾಲಾ ಮಕ್ಕಳಿಂದ ಕಾರು ಕ್ಲೀನ್ ಮಾಡಿಸಿದ ಮುಖ್ಯ ಶಿಕ್ಷಕ; ಏನು ಶಿಕ್ಷೆ ಕೊಡ್ತೀರಾ ಸಚಿವರೇ ಎಂದ ಪಾಲಕರು

ಸದರಿ ಕಾರ್ಯಕ್ರಮದಡಿ ಅಗತ್ಯವಾಗಿ ಬೇಕಾಗಿರುವ ದಾಖಲೆಗಳನ್ನು ಅಪ್ ಲೋಡ್ ಮಾಡಲು ಫೆ.19ರಿಂದ ಫೆ.29ರವರೆಗೆ ಕಾಲಾವಕಾಶವನ್ನು ಮತ್ತೊಮ್ಮೆ ನೀಡಲಾಗಿದೆ. ಅಂತಿಮ ದಿನಾಂಕದ ನಂತರ ಅಗತ್ಯ ದಾಖಲೆಗಳು ಸಲ್ಲಿಕೆಯಾಗದೇ ಇರುವಂತಹ ಅರ್ಜಿಗಳನ್ನು ಅನರ್ಹವೆಂದು ಪರಿಗಣಿಸಲಾಗುವುದು. ಹೆಚ್ಚಿನ ವಿವರಗಳಿಗೆ ಸಂಬಂಧಪಟ್ಟ ವಲಯದ ಸಹಾಯಕ ಕಂದಾಯ ಅಧಿಕಾರಿ ರವರನ್ನು ಸಂಪರ್ಕಿಸುಬಹುದೆಂದು ಕಲ್ಯಾಣ ವಿಭಾಗದ ವಿಶೇಷ ಆಯುಕ್ತರು ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios