ಕೇವಲ 4 ತಿಂಗಳಲ್ಲಿ ಶೇ.51ರಷ್ಟು ಬಿಬಿಎಂಪಿ ಸಾಧನೆ: ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್| ಸಂಗ್ರಹವಾಗಿರುವ 1776 ಕೋಟಿಯಲ್ಲಿ 902 ಕೋಟಿ ಆನ್‌ಲೈನ್| 873 ಕೋಟಿ ಬ್ಯಾಂಕ್ ಚಲನ್ ಮೂಲಕ ಆಸ್ತಿ ತೆರಿಗೆ ಸಂಗ್ರಹ|
ಬೆಂಗಳೂರು(ಆ.06): ಕೊರೋನಾ ಸೋಂಕಿನ ಆತಂಕದ ನಡುವೆಯೂ ಬಿಬಿಎಂಪಿಗೆ ಬರೋಬ್ಬರಿ 1,776 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥ ಪ್ರಸಾದ್ ತಿಳಿಸಿದ್ದಾರೆ.
2020-21ನೇ ಸಾಲಿನ ಆರ್ಥಿಕ ವರ್ಷ ಆರಂಭಗೊಳ್ಳುವ ಮುನ್ನವೇ ಕೊರೋನಾ ಸೋಂಕು ಕಾಣಿಸಿಕೊಂಡರೂ ಬಿಬಿಎಂಪಿಗೆ 1,776 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಪ್ರಸಕ್ತ ಸಾಲಿನಲ್ಲಿ 3,500 ಕೋಟಿ ಆಸ್ತಿ ತೆರಿಗೆ ಸಂಗ್ರಹಿಸುವ ಗುರಿಯನ್ನು ಹಾಕಿಕೊಂಡಿದ್ದು, ಕೇವಲ ನಾಲ್ಕು ತಿಂಗಳಿನಲ್ಲಿ ಶೇ.51 ರಷ್ಟು ಆಸ್ತಿ ತೆರಿಗೆಯನ್ನು ಸಂಗ್ರಹಿಸಿದೆ. ಉಳಿದ ಎಂಟು ತಿಂಗಳಲ್ಲಿ ಇನ್ನುಳಿದ ಶೇ.50 ರಷ್ಟು ಆಸ್ತಿ ತೆರಿಗೆ ಸಂಗ್ರಹಿಸಬೇಕಾಗಿದೆ. ಸಂಗ್ರಹವಾಗಿರುವ 1776 ಕೋಟಿಯಲ್ಲಿ 902 ಕೋಟಿ ಆನ್‌ಲೈನ್, 873 ಕೋಟಿ ಬ್ಯಾಂಕ್ ಚಲನ್ ಮೂಲಕ ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಆಯುಕ್ತರು ಟ್ವೀಟ್ ಮಾಡಿ ತಿಳಿಸಿದ್ದಾರೆ.
ಬೆಂಗಳೂರು: 'ಮುಂದಿನ ವಾರದಿಂದ ನಿತ್ಯ 20000 ಕೊರೋನಾ ಟೆಸ್ಟ್'
ವಲಯವಾರು ಆಸ್ತಿ ತೆರಿಗೆ ಸಂಗ್ರಹ ವಿವರ:
ಮಹದೇವಪುರ ವಲಯದಲ್ಲಿ ಅತಿ ಹೆಚ್ಚು 462 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗಿದೆ. ಉಳಿದಂತೆ ದಕ್ಷಿಣ ವಲಯ 299 ಕೋಟಿ, ಪೂರ್ವದಲ್ಲಿ 336, ದಾಸರಹಳ್ಳಿಯಲ್ಲಿ 39, ಬೊಮ್ಮನಹಳ್ಳಿಯಲ್ಲಿ 177,ಆರ್.ಆರ್.ನಗರ 123, ಪಶ್ಚಿಮದಲ್ಲಿ 200 ಹಾಗೂ ಯಲಹಂಕ ವಲಯದಲ್ಲಿ 136 ಕೋಟಿ ರು. ಆಸ್ತಿ ತೆರಿಗೆ ಸಂಗ್ರಹವಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.
