* ಕೊರೋನಾ 4ನೇ ಅಲೆ ಭೀತಿ ಹಿನ್ನೆ* ನಗರದಲ್ಲಿ ಕೊರೋನಾ ನಿಯಂತ್ರಣಕ್ಕೆ ಪಾಲಿಕೆಯಿಂದ 500 ಸಿಬ್ಬಂದಿ ನೇಮಕ  * 100 ವೈದ್ಯರು, 200 ಸ್ವಾ್ಯಬ್‌ ಕಲೆಕ್ಟರ್‌ ಗುತ್ತಿಗೆ ಆಧಾರದಲ್ಲಿ ನಿಯೋಜನೆ

-ಬೆಂಗಳೂರು(ಮೇ.02): ಕೊರೋನಾ 4ನೇ ಅಲೆ ಭೀತಿ ಹಿನ್ನೆಲೆಯಲ್ಲಿ ಸೋಂಕು ನಿಯಂತ್ರಣ ಮತ್ತು ನಿರ್ವಹಣೆಗಾಗಿ ಬಿಬಿಎಂಪಿಯು 500ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಯನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಆರಂಭಿಸಿದೆ.

ಈ ಹಿಂದೆ ಕೊರೋನಾ ನಿಯಂತ್ರಣಾ ಕಾರ್ಯಕ್ಕೆ 2400ಕ್ಕೂ ಅಧಿಕ ಆರೋಗ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿಕೊಳ್ಳಲಾಗಿತ್ತು. ಕಳೆದ ಮಾಚ್‌ರ್‍ ಅಂತ್ಯಕ್ಕೆ ಸರ್ಕಾರದ ಆದೇಶದ ಮೇರೆಗೆ ಸೇವೆಯಿಂದ ಬಿಡುಗಡೆಗೊಳಿಸಲಾಗಿತ್ತು. ಆದರೀಗ ಕೋವಿಡ್‌ 4ನೇ ಅಲೆಯ ಭೀತಿ ಎದುರಾಗಿದೆ. ಹೀಗಾಗಿ, ಮರು ನಿಯೋಜನೆಗೆ ಬಿಬಿಎಂಪಿ ಮುಂದಾಗಿದೆ.

ನಗರದಲ್ಲಿ ಕಳೆದೊಂದು ವಾರದಿಂದ ಕೋವಿಡ್‌ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಕೋವಿಡ್‌ ಪರೀಕ್ಷೆ ಪ್ರಮಾಣವನ್ನು ದಿನಕ್ಕೆ 10 ಸಾವಿರಕ್ಕಿಂತ ಹೆಚ್ಚು ಮಾಡಲು ಸರ್ಕಾರ ಸೂಚನೆ ನೀಡಿದೆ. ಹೀಗಾಗಿ, 198 ವಾರ್ಡ್‌ಗಳಿಗೆ ತಲಾ ಒಬ್ಬರಂತೆ ಹಾಗೂ ಇಬ್ಬರು ಹೆಚ್ಚುವರಿ ಸೇರಿ 200 ಗಂಟಲು ದ್ರವ ಸಂಗ್ರಹಣಾಕಾರರು, 200 ದತ್ತಾಂಶ ದಾಖಲಿಸುವವರನ್ನು ನಿಯೋಜನೆ ಮಾಡಿಕೊಳ್ಳಲಾಗುತ್ತಿದೆ. ಜತೆಗೆ ಪ್ರತಿ ಎರಡು ವಾರ್ಡ್‌ಗೆ ತಲಾ ಒಬ್ಬರಂತೆ 100 ವೈದ್ಯರನ್ನು ನಿಯೋಜಿಸಿಕೊಳ್ಳಲಾಗುತ್ತಿದೆ. ಸಿಬ್ಬಂದಿಯ ಸಂಚಾರಕ್ಕೆ ಅನುಕೂಲ ಆಗುವಂತೆ 200 ಕ್ಯಾಬ್‌ಗಳನ್ನು ಗುತ್ತಿಗೆಗೆ ಪಡೆದುಕೊಳ್ಳುತ್ತಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ

ಬಾಲಸುಂದರ್‌ ಮಾಹಿತಿ ನೀಡಿದರು.

ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳುವ ವೈದ್ಯರಿಗೆ ಮಾಸಿಕ .30 ಸಾವಿರ, ಸ್ವಾ್ಯಬ್‌ ಕಲೆಕ್ಟರ್‌ಗೆ .19 ಸಾವಿರ, ಡೇಟಾ ಎಂಟ್ರಿ ಆಪರೇಟರ್‌ಗೆ .17 ಸಾವಿರ ಹಾಗೂ ಬಾಡಿಗೆ ಕ್ಯಾಬ್‌ಗಳಿಗೆ ಮಾಸಿಕ (ಚಾಲಕರ ವೇತನ ಸೇರಿ) .35 ಸಾವಿರ ನೀಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.