'ಯಡಿಯೂರಪ್ಪಗೆ ತಿರುಗೇಟು ಕೊಡಲು ಮಾಡಿದ ಹೋರಾಟ ಅಲ್ಲ'
* ಪಾದಯಾತ್ರೆ ಮಾಡಿದ ಬಳಿಕವೇ ನಮ್ಮ ಪಂಚಮಸಾಲಿ ಸಮಾಜದ ಮುಖಂಡರು ರಾಷ್ಟ್ರ ನಾಯಕರಾಗಿ ಬೆಳೆದರು
* ಯಡಿಯೂರಪ್ಪಗೆ ತಿರುಗೇಟು ಕೊಡಲು ಮಾಡಿದ ಹೋರಾಟ ಅಲ್ಲ
* ಹಾವೇರಿಯಲ್ಲಿ ಜಯಮೃತ್ಯುಂಜಯ ಸ್ವಾಮೀಜಿ ಹೇಳಿಕೆ
ಹಾವೇರಿ, (ಜೂನ್ 25): ಬೆಂಗಳೂರಿನಲ್ಲಿ ಹೋರಾಟ ಮಾಡಿದ ಮೇಲೆ ಲಿಂಗಾಯತರಲ್ಲೇ ಪಂಚಮಸಾಲಿಗರು ಬಹು ಸಂಖ್ಯಾತರು ಅನ್ನೋದು ಗೊತ್ತಾಗಿದೆ. ಇದು ಲಿಂಗಾಯತ ಸಮುದಾಯ ಒಡೆಯೋ ಪ್ರಯತ್ನ ಅಲ್ಲ. ಇಷ್ಟು ದಿನ ನಮ್ಮ ಸಮಾಜದವರು ಬೇರೆ ಸಹೋದರ ಸಮಾಜದ ಮುಖಂಡರನ್ನೇ ನಮ್ಮ ನಾಯಕರು ಅಂತ ತಿಳಿದುಕೊಂಡಿತ್ತು. ಈಗ ಪಾದಯಾತ್ರೆ ಮಾಡಿದ ಬಳಿಕ ನಮ್ಮ ಮುಖಂಡರು ರಾಷ್ಟ್ರದ ನಾಯಕರಾಗಿ ಬೆಳೆದಿದ್ದಾರೆ. ಇದು ಯಡಿಯೂರಪ್ಪನವರು ಲಿಂಗಾಯತ ಸಮುದಾಯದ ಪ್ರಶ್ನಾತೀತ ನಾಯಕ ಎಂಬುದಕ್ಕೆ ತಿರುಗೇಟು ಕೊಡಲು ಮಾಡಿದ ಹೋರಾಟ ಅಲ್ಲ. ಯಡಿಯೂರಪ್ಪನವರ ಮೇಲೆ ನಮಗೆ ಗೌರವ ಇದೆ ಎಂದು ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಸರ್ಕಾರ ಮೂರು ಬಾರಿ ಮಾತು ಕೊಟ್ಟು ತಪ್ಪಿತ್ತು. ಮಾತು ತಪ್ಪಿದ್ದಕ್ಕೆ ಜೂನ್ 27 ರಂದು ಸಿಎಂ ಬಸವರಾಜ ಬೊಮ್ಮಾಯಿಯವರ ನಿವಾಸದ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹ ಮಾಡಲು ಉದ್ದೇಶಿಸಲಾಗಿತ್ತು. ಆದರೆ ಸರ್ಕಾರ ಎರಡು ಬಾರಿ ನಮ್ಮ ಜೊತೆ ಮಾತುಕತೆ ನಡೆಸಿದೆ. ಹೋರಾಟದ ಕಾವು ಸರ್ಕಾರಕ್ಕೆ ಮುಟ್ಟಿದ್ದರಿಂದ ಆಯೋಗದವರನ್ನು ಅಧ್ಯಯನಕ್ಕೆ ಕಳುಹಿಸಿದೆ. ಸರ್ಕಾರ ಎರಡು ತಿಂಗಳ ಕಾಲವಕಾಶ ಕೇಳಿದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಜಗದ್ಗುರು ಬಸವ ಜಯ ಮೃತ್ಯುಂಜಯ ಹೇಳಿದ್ರು.
ಮನವೊಲಿಸುವಲ್ಲಿ ಸಿಎಂ ಸಕ್ಸಸ್, ಪಂಚಮಸಾಲಿಗಳ 2 A ಮೀಸಲಾತಿ ಹೋರಾಟಕ್ಕೆ ಬ್ರೇಕ್
ಎರಡು ತಿಂಗಳಲ್ಲಿ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಬಸವರಾಜ ಬೊಮ್ಮಾಯಿಯವರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‍ರಿಗೆ ನೀಡಿದ್ದಾರೆ. ಎರಡು ತಿಂಗಳು ಕಾಲವಕಾಶ ಕೇಳಿದ್ದರಿಂದ ಸಿಎಂ ನಿವಾಸದ ಮುಂದಿನ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಮುಂದೂಡಲಾಗಿದೆ. ಆಗಸ್ಟ್ 22ರ ಒಳಗಾಗಿ ಸರ್ಕಾರ ಸಮಾಜಕ್ಕೆ ಸಿಹಿ ಸುದ್ದಿ ಕೊಡುವುದಾಗಿ ಹೇಳಿದೆ. ಬಸವರಾಜ ಬೊಮ್ಮಾಯಿಯವರ ಮೇಲೆ ವಿಶ್ವಾಸವಿದೆ. ಸಮಾಜಕ್ಕೆ ನ್ಯಾಯ ಕೊಡುವ ಭರವಸೆ ಇದೆ. ಆಗಸ್ಟ್ 22ಕ್ಕೆ ಬಸವರಾಜ ಬೊಮ್ಮಾಯಿಯವರಿಗೆ ಶಿಗ್ಗಾಂವಿಯಲ್ಲಿ ಸನ್ಮಾನ ಸಮಾರಂಭ ಮಾಡಲಿದ್ದೇವೆ. ಬೊಮ್ಮಾಯಿಯವರಿಗೆ ರಾಜಕೀಯ ಅನಿವಾರ್ಯತೆ ಮತ್ತು ಸಮಾಜಕ್ಕೆ ಕೊಟ್ಟ ಮಾತು ಉಳಿಸಿಕೊಳ್ಳಲು ನ್ಯಾಯ ಕೊಡುತ್ತಾರೆ ಎಂಬ ವಿಶ್ವಾಸವಿದೆ. ಸಿಎಂ ಭರವಸೆ ಕೊಟ್ಟಿದ್ದಾರೆ ಅಂತಾ ನಾವು ಮೈಮರೆತು ಕೂರುವುದು ಬೇಡ. ಆಗಸ್ಟ್ 22ರವರೆಗೆ ನಾವೆಲ್ಲ ಸಮಾಜದ ಸಂಘಟನೆ ಮಾಡೋಣ ಎಂದು ಕರೆ ನೀಡಿದರು.
, ಅಗಸ್ಟ್ 22ರ ವರೆಗೆ ಸಮಯ ಕೇಳಿದ್ದ ಸಿಎಂ
ಸದನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೊಟ್ಟ ಮಾತಿನಂತೆ ಹಿಂದುಳಿದ ವರ್ಗಗಳ ಆಯೋಗದ ವರದಿ ಪಡೆಯಲು ವಿಳಂಬವಾಗುತ್ತಿದೆ ಅನ್ನೋ ಕಾರಣಕ್ಕೆ ಸಿಟ್ಟಾಗಿರುವ ಪಂಚಮಸಾಲಿ ಸಮೂದಾಯದವರು ಹೋರಾಟವನ್ನು ಕ್ಲೈಮ್ಯಾಕ್ಸ್ ಹಂತಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಶಿಗ್ಗಾಂವ್ ನಲ್ಲಿರುವ ಬೊಮ್ಮಾಯಿ ನಿವಾಸದ ಮುಂದೆ ಹೋರಾಟ ನಡೆಸಲು ಮುಂದಾಗಿದ್ದರಿಂದ ಎಚ್ಚೆತ್ತುಕೊಂಡ ಸಿಎಂ ಬೊಮ್ಮಾಯಿ ಹೋರಾಟಗಾರರನ್ನು ಒಂದಷ್ಟು ಸಮಾಧಾನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತಮ್ಮ ನಿವಾಸದ ಮುಂದೆ ಹೋರಾಟಗಾರರ ಧರಣಿ ನಡೆಯೋದು ಖಚಿತವಾಗ್ತಾ ಇದ್ದ ಹಾಗೆ ಸಂಧಾನ ಸೂತ್ರವೊಂದನ್ನು ಸಿಎಂ ಸಿದ್ಧಪಡಿಸಿದ್ರು. ತಮ್ಮ ಸಂಪುಟದ ಹಿರಿಯ ಸಹದ್ಯೋಗಿ ಸಿ.ಸಿ.ಪಾಟೀಲ್ ಅವರನ್ನು ಕರೆದು ಸಂಧಾನ ಸಭೆ ಮಾಡಲು ಸೂಚನೆ ನೀಡಿದ್ರು. ಸಿಎಂ ಸೂಚನೆಯಂತೆ ಸಚಿವ ಸಿ.ಸಿ.ಪಾಟೀಲ್ ನೇತೃತ್ವದಲ್ಲಿ ಸಚಿವರ ಸರ್ಕಾರಿ ನಿವಾಸದಲ್ಲಿ ಸಂಧಾನ ಸಭೆ ಕರೆಯಲಾಗಿತ್ತು.. ಸಭೆಗೆ ಹಾಜರಾಗಿದ್ದ ಜಯಮೃತ್ಯುಂಜಯ ಸ್ವಾಮೀಜಿ ಮತ್ತು ಸಮೂದಾಯದ ಮುಖಂಡರು ಮೀಸಲಾತಿ ಸಂಬಂಧ ಸರ್ಕಾರದಿಂದ ಸೂಕ್ತ ಭರವಸೆಗಾಗಿ ಪಟ್ಟು ಹಿಡಿದ್ರು. ಆದರೆ ಸಿಎಂ ಮನೆ ಮುಂದಿನ ಧರಣಿಯನ್ನು ಕೈಬಿಟ್ಟು ಮಾತುಕತೆಗೆ ಬರುವಂತೆ ಸಿಎಂ ಬೊಮ್ಮಾಯಿ ಮನವಿ ಮಾಡಿದ್ದರಿಂದ ಸಭೆಯನ್ನು ಮುಂದೂಡಲಾಯ್ತು..
ಸಭೆ ಮುಂದೂಡಿದ ಬಳಿಕ ಸಿಎಂ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ಸಚಿವ ಸಿ.ಸಿ.ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಅರವಿಂದ ಬೆಲ್ಲದ್ ಸಹಿತ ಪ್ರಮುಖ ನಾಯಕರು, ಧರಣಿ ಕೈಬಿಡಲು ನಿರಾಕರಿಸಿದ ವಿಚಾರ ತಿಳಿಸಿದ್ರು. ಆದ್ರೆ ಸಮಸ್ಯೆ ಬಗೆಹರಿಸಲು 2 ತಿಂಗಳ ಕಾಲಾವಕಾಶ ನೀಡಲು ಸಿಎಂ ಬೊಮ್ಮಾಯಿ ಮನವಿ ಮಾಡಿದ್ದರಿಂದ ಅನಿವಾರ್ಯವಾಗಿ ಧರಣಿ ಮುಂದೂಡಲು ತಿರ್ಮಾನಿಸಲಾಯ್ತು..
ನಂತರ ನಡೆದ ಎರಡನೇಯ ಸುತ್ತಿನ ಸಭೆಯಲ್ಲಿ ಧರಣಿಯನ್ನು ಅಗಸ್ಟ್ 22 ರವರೆಗೆ ಕೈಬಿಡಲು ತಿರ್ಮಾನ ಮಾಡಲಾಯ್ತು. ಒಂದೊಮ್ಮೆ ಸಿಎಂ ಮಾತಿನಂತೆ 2 ತಿಂಗಳಲ್ಲಿ ಮೀಸಲಾತಿ ಕುರಿತು ಸರ್ಕಾರ ಸ್ಪಷ್ಟ ನಿರ್ಧಾರಕ್ಕೆ ಬರದಿದ್ದರೆ, ಅಗಸ್ಟ್ 23 ರಿಂದ ಹೋರಾಟ ಆರಂಭಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.