ಮೈಸೂರು : ಇದು ಕಾಕತಾಳೀಯವಾದರೂ ಎನ್ನಿ, ಏನಾದರೂ ಎನ್ನಿ. ಆದಿಚುಂಚನಗಿರಿಯ ಹಿಂದಿನ ಪೀಠಾಧಿಪತಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ, ಸಿದ್ಧಗಂಗೆಯ ಪೀಠಾಧಿಪತಿ ಡಾ. ಶಿವಕುಮಾರ ಸ್ವಾಮೀಜಿ-ಈ ಇಬ್ಬರು ಸಂತರು ಇಹಲೋಕ ತ್ಯಾಗ ಮಾಡಿದ್ದು ಜನವರಿ ತಿಂಗಳಲ್ಲಿ ಹಾಗೂ ಜಿಲ್ಲೆಯ ತಿರುಮ ಕೂಡಲು ನರಸೀಪುರದಲ್ಲಿ ನಡೆಯುವ ಕುಂಭ ಮೇಳದ ಮುನ್ನಾ ದಿನಗಳಲ್ಲಿ. ಶ್ರೀ ಬಾಲಗಂಗಾಧರ ನಾಥ ಸ್ವಾಮೀಜಿ
2013 ರ ಜ. 13ರಂದು ಇಹಲೋಕ ತ್ಯಜಿಸಿದರು. 

ಅದೇ ವರ್ಷ ಫೆ. 23 ರಿಂದ 25 ರವರೆಗೆ 9 ನೇ ಕುಂಭಮೇಳ ನಡೆಯಿತು. ಇದೀಗ ಶ್ರೀ ಶಿವ ಕುಮಾರ ಸ್ವಾಮೀಜಿ ಜ. 21ರಂದು ಇಹಲೋಕ ತ್ಯಜಿಸಿದರು. ಈ ಬಾರಿ ಫೆ. 17ರಿಂದ  19ರವರೆಗೆ  11ನೇ ಕುಂಭಮೇಳ ಆಯೋಜನೆಯಾಗಿದೆ. ಮೊದಲೆಲ್ಲಾ ‘ಕುಂಭಮೇಳ’ ಉತ್ತರ ಭಾರತಕ್ಕೆ ಸೀಮಿತವಾಗಿತ್ತು. 

ಅದನ್ನು ದಕ್ಷಿಣ ಭಾರತಕ್ಕೆ ತಂದ ಕೀರ್ತಿ ಆದಿಚುಂಚನಗಿರಿಯ ಶ್ರೀ ಬಾಲಗಂಗಾಧರ ನಾಥ ಸ್ವಾಮಿಗಳಿಗೆ ಸಲ್ಲುತ್ತದೆ. ಕಾವೇರಿ, ಕಪಿಲಾ ಮತ್ತು ಸ್ಫಟಿಕ ಸರೋವರಗಳ ಸಮಾಗಮ ಸ್ಥಳವಾದ ತಿರುಮಕೂಡಲು ನರಸೀಪುರ ದಕ್ಷಿಣ ಭಾರತದ ‘ತ್ರಿವೇಣಿ ಸಂಗಮ’ ಎಂದೇ ಹೆಸರಾಗಿದೆ.