Asianet Suvarna News Asianet Suvarna News

ಕೆಇಎ ಹಗರಣ: ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ಜಾಮೀನು ಅರ್ಜಿ ತಿರಸ್ಕಾರ

ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್‌ ಬಾಡಗಂಡಿ ಅವರು ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿ ಮೂರೂ ಪ್ರಕರಣಗಳಲ್ಲಿ ಆರ್‌.ಡಿ.ಪಾಟೀಲ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದಾರೆ.

Bail Application of RD Patil Rejected grg
Author
First Published Nov 8, 2023, 9:01 AM IST

ಕಲಬುರಗಿ(ನ.08):  ನಿಗಮ, ಮಂಡಳಿಗಳಲ್ಲಿ ಖಾಲಿ ಇರುವ ಹುದ್ದೆಗಳ ನೇಮಕಾತಿಗಾಗಿ ಇತ್ತೀಚೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ನಡೆಸಿದ್ದ ಲಿಖಿತ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ಎಸಗಿರುವ ಆರೋಪ ಎದುರಿಸುತ್ತಿರುವ ಹಗರಣದ ಕಿಂಗ್‌ಪಿನ್‌ ಆರ್‌.ಡಿ.ಪಾಟೀಲ್‌ ನಿರೀಕ್ಷಣಾ ಜಾಮೀನು (ಆ್ಯಂಟಿಸಿಪೇಟರಿ ಬೇಲ್‌) ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಲಯ ತಿರಸ್ಕರಿಸಿದೆ.

ಅಫಜಲ್ಪುರದಲ್ಲಿ ಒಂದು, ಕಲಬುರಗಿಯಲ್ಲಿ ಎರಡು ಸೇರಿ ಒಟ್ಟು ಮೂರು ಪ್ರಕರಣಗಳಲ್ಲಿ ಆರ್‌.ಡಿ.ಪಾಟೀಲ್‌ ಹೆಸರಿದೆ. ಹೀಗಾಗಿ ಮೂರೂ ಪ್ರಕರಣ ವಿಚಾರಣೆ ಕೈಗೆತ್ತಿಕೊಂಡಿದ್ದ ಕಲಬುರಗಿ ಪೊಲೀಸರು ಈತನ ಬಂಧನಕ್ಕೆ ಜಾಲ ಬೀಸಿದ್ದರು. ಆದರೆ, ಈತ ರಹಸ್ಯವಾಗಿ ಕಲಬುರಗಿಯಲ್ಲೇ ಮನೆಯೊಂದರಲ್ಲಿ ಅಡಗಿಕೂತು ಬಂಧನ ಪೂರ್ವ ಜಾಮೀನು ಕೋರಿ ಅರ್ಜಿ ಕೋರ್ಟ್‌ಗೆ ಸಲ್ಲಿಸಿದ್ದ.

ಪರೀಕ್ಷಾ ಅಕ್ರಮ ಕಿಂಗ್‌ಪಿನ್‌ ಪರಾರಿಗೆ ಪೊಲೀಸರ ಸಾಥ್‌? ತನಿಖೆಗೆ ಸೂಚನೆ!

ಇಲ್ಲಿನ ಒಂದನೇ ಹೆಚ್ಚುವರಿ ನ್ಯಾಯಾಲಯದ ನ್ಯಾಯಮೂರ್ತಿ ಮೋಹನ್‌ ಬಾಡಗಂಡಿ ಅವರು ಎರಡೂ ಕಡೆಯ ವಾದ-ಪ್ರತಿವಾದ ಆಲಿಸಿ ಮೂರೂ ಪ್ರಕರಣಗಳಲ್ಲಿ ಆರ್‌.ಡಿ.ಪಾಟೀಲ್‌ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕರಿಸಿದ್ದಾರೆ.
ಆರ್.ಡಿ.ಪಾಟೀಲ್ ಗೆ ಜಾಮೀನು ಕೋರಿ ಬಿ.ಶಾಮಸುಂದರ್‌ ವಾದ ಮಂಡಿಸಿದ್ದರು. ಸರ್ಕಾರಿ ಅಭಿಯೋಜಕರಾದ ನರಸಿಂಹಲು ಅವರು ಸರ್ಕಾರದ ಪರ ವಾದ ಮಂಡಿಸಿದ್ದರು. ಈ ಮೂಲಕ ಬಂಧನದಿಂದ ತಪ್ಪಿಸಿಕೊಳ್ಳುವ ಆರ್‌.ಡಿ.ಪಾಟೀಲ್‌ ಪ್ರಯತ್ನಕ್ಕೆ ಸದ್ಯ ಹಿನ್ನಡೆಯಾದಂತಾಗಿದೆ.

Follow Us:
Download App:
  • android
  • ios