Asianet Suvarna News Asianet Suvarna News

ಪ್ರಯಾಣಿಕರ ಗಮನಕ್ಕೆ: ಬಸ್ ಸಂಚಾರದಲ್ಲಿ ಕೊಂಚ ಬದಲಾವಣೆ....!

ರಾಜ್ಯದಲ್ಲಿ ಇಂದಿನಿಂದ ಲಾಕ್‌ಡೌನ್ 4.0 ಹೊಸ ರೀತಿಯಲ್ಲಿ ಆರಂಭವಾಗಿದ್ದು, ಬಸ್ ಸಂಚಾರ ಸಮಯದಲ್ಲಿ ಕೊಂಚ ಬದಲಾಣೆಯಾಗಿದೆ.

Attention All Passengers KSRTC Bus Timing Changed From May 20
Author
Bengaluru, First Published May 19, 2020, 9:55 PM IST

ಬೆಂಗಳೂರು, (ಮೇ.19): ರಾಜ್ಯದಲ್ಲಿ ಇಂದಿನಿಂದ (ಮಂಗಳವಾರ) ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಆರಂಭವಾಗಿದೆ. ಮೊದಲನೇ ದಿನ ನಿಗಮದ ವ್ಯಾಪ್ತಿಯ ವಿಭಾಗಗಳಿಂದ ಒಟ್ಟು 1606 ಬಸ್‌ಗಳು ಸಂಚರಿಸಿದ್ದು, 53506 ಪ್ರಯಾಣಿಕರು ಪ್ರಯಾಣಿಸಿದ್ದಾರೆ.

ಇದೀಗ ಈ ಕೆಎಸ್ಆರ್‌ಟಿಸಿ ಬಸ್ ಸಂಚಾರದ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ ಮಾಡಲಾದೆ. ನಾಳೆ ಅಂದ್ರೆ ಬುಧವಾರದಿಂದ ಬಸ್ಸುಗಳ ಕಾರ್ಯಚರಣೆಯ ಸಮಯವನ್ನು ಸಂಜೆ 7 ಗಂಟೆಯವರೆಗೆ ವಿಸ್ತರಿಸಲಾಗಿದೆ. 

KSRTC ಬಸ್ ಸಂಚಾರ ಆರಂಭ: ಆನ್‌ಲೈನ್ ಬುಕ್ಕಿಂಗ್ ಶುರು...! 

ಅಂದರೆ ಕೊನೆಯ ಬಸ್ಸು ಸಂಜೆ 7 ಗಂಟೆಗೆ ಬೆಂಗಳೂರು‌ ಬಿಡಲಿದೆ. ಉದಾಹರಣೆಗೆ ಕಲುಬುರುಗಿ , ಬೀದರ್ ಸಂಜೆ 7 ಕ್ಕೆ ಬೆಂಗಳೂರಿನಿಂದ ಹೊರಟು ಮಾರನೇ ದಿನ ಬೆಳಗ್ಗೆ ಕಲುಬುರಗಿ , ಬೀದರ್ ಗೆ ತಲುಪುತ್ತದೆ.

ಇದು ಎಲ್ಲಾ ಸ್ಥಳಗಳಿಗೆ ಕಾರ್ಯಾಚರಣೆಯಾಗುವ ಬಸ್ಸುಗಳಿಗೆ ಅನ್ವಯಿಸುತ್ತದೆ. ಬೆಂಗಳೂರು ಹಾಗೂ ಇತರೆ ಜಿಲ್ಲೆಗಳಿಂದ ಕಾರ್ಯಚರಣೆಯಾಗುವ ಬಸ್ಸುಗಳು ಸೇರಿದಂತೆ. 

ಇದೇ ಮಾದರಿಯ ಬಸ್ಸುಗಳ ಕಾರ್ಯಚರಣೆಯನ್ನು ಮುಂದಿನ‌ ಆದೇಶದವರೆಗೂ ಮುಂದುವರೆಸಲಾಗುವುದು ಎಂದು ಕೆಎಸ್‌ಆರ್‌ಟಿಸಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೊದಲು ಬೆಳಿಗ್ಗೆ 7 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಬಸ್ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಉತ್ತರ ಕರ್ನಾಟಕ ಭಾಗದ ದೂರದ ಊರುಗಳಿಗೆ ಹೋಗಲು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ  ಕೆಎಸ್‌ಆರ್‌ಟಿಸಿ ಈ ನಿರ್ಧಾರ ಕೈಗೊಂಡಿದೆ.

Follow Us:
Download App:
  • android
  • ios