Asianet Suvarna News Asianet Suvarna News

ಬರ ಹಿನ್ನೆಲೆ ರೈತರಿಗೆ ಎಕರೆಗೆ ೨೫ ಸಾವಿರ ಪರಿಹಾರ ನೀಡಿ- ಶಾಸಕ ಬಲ್ದಾಳೆ ಮನವಿ

ಸರಕಾರದ ಐದು ಗ್ಯಾರಂಟಿಗಾಗಿ ಹಣ ಕ್ರೋಢಿಕರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ಅಭಿವೃದ್ಧಿಗಾಗಿ ಅನುದಾನ ನೀಡಲು ನೀರಾಕರಿಸುತ್ತಿದ್ದಾರೆ. ರಾಜ್ಯದಲ್ಲಿ ತೀವ್ರ ಬರ ಹಿನ್ನೆಲೆ ರೈತರ ಪ್ರತಿ ಎಕರೆಗೆ  ೨೫ ಸಾವಿರ ಪರಿಹಾರ ನೀಡುವಂತೆ ಶಾಸಕ ಶೈಲೆಂದ್ರ ಬೆಲ್ದಾಳ ಮನವಿ ಮಾಡಿದರು.

Assembly session Karnataka Budget 2024  25000 compensation per acre due to drought says  MLA Baldale rav
Author
First Published Feb 23, 2024, 12:55 PM IST

ಬೀದರ್ (ಫೆ.23): ಸರಕಾರದ ಐದು ಗ್ಯಾರಂಟಿಗಾಗಿ ಹಣ ಕ್ರೋಢಿಕರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿ ಅಭಿವೃದ್ಧಿಗಾಗಿ ಅನುದಾನ ನೀಡಲು ನೀರಾಕರಿಸುತ್ತಿದ್ದಾರೆ  ಹೀಗಾಗಿ ಅಭಿವೃದ್ಧಿ ಕುಂಟಿತಗೊಂಡು ರಾಜ್ಯದ ಎಲ್ಲಾ ಶಾಸಕರು ಸಮಸ್ಯೆ ಎದುರಿಸುವಂತಾಗಿದೆ ಎಂದು ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದ ಬಜೆಟ್ ನ ಕುರಿತು ನಡೆದ ಚರ್ಚೆ ವೇಳೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಶೈಲೆಂದ್ರ ಬೆಲ್ದಾಳ ಮಾತನಾಡಿದರು.

ಗೋದಾವರಿ ಜಲಾನಯನದ ನೀರಿನ ಸದ್ಬಳಕೆ ಮಾಡಿಕೊಂಡು ರೈತರಿಗೆ ಅನುಕೂಲ ಕಲ್ಪಿಸುವ ರೈತರ ಬೇಡಿಕೆಗೆ ಮನ್ನಣೆ ನೀಡಿಲ್ಲ. ಸುಮಾರು ವರ್ಷದಿಂದ ನಮ್ಮ ಭಾಗದ ರೈತರು ಭೂಮಿ ಕಳೆದುಕೊಂಡು ಹೋರಾಟ ನಡೆಸುತ್ತಿರುವ ಕಾರಂಜಾ ಸಂತ್ರಸ್ತರ ಸಮಸ್ಯೆಗೆ ಸ್ಪಂದಿಸುವ ಗೋಜಿಗೆ ಹೋಗಿಲ್ಲ. ಕಾರಂಜಾ ಸಂತ್ರಸ್ತರ ರೈತರ ಸಮಸ್ಯೆ ಕುರಿತು ಉಪ ಮುಖ್ಯಮಂತ್ರಿಗಳು ಸಭೆ ನಡೆಸಿದರು ಈ ಬಜೆಟ್‌ನಲ್ಲಿ ಸಮಸ್ಯೆ ಕುರಿತು ಸ್ಪಷ್ಟತೆ ದೊರೆತ್ತಿಲ್ಲ ಈ ಬಜೆಟ್‌ನಲ್ಲಿ  ಪ್ರಸ್ತಾವನೆ ಸಹ ಆಗಿಲ್ಲ. ಶತಮಾನದ ಬರ ನಮ್ಮ ರಾಜ್ಯಕ್ಕೆ ಕಾಡುತ್ತಿದೆ ಇಲ್ಲಿವರೆಗಿ ರೈತರಿಗೆ ಸೂಕ್ತ ಪರಿಹಾರ ದೊರೆತಿಲ್ಲ ತೀವ್ರ ಬರ ಇರುವ ಹಿನ್ನೆಲೆಯಲ್ಲಿ ಎಕರೆಗೆ ೨೫ ಸಾವಿರ ಪರಿಹಾರ ನೀಡಬೇಕು ಎಂದು ಸರ್ಕಾರಕ್ಕೆ ಬೆಲ್ದಾಳೆ ಮನವಿ ಮಾಡಿಕೊಂಡಿದರು,

ಕಲ್ಯಾಣ ಕರ್ನಾಟಕದ ಜನರು ಕಾಂಗ್ರೆಸ್, ಖರ್ಗೆರನ್ನು ಮರೆಯದಿರಲಿ: ಸಚಿವ ಈಶ್ವರ ಖಂಡ್ರೆ

Follow Us:
Download App:
  • android
  • ios