ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಯ ಎದುರು ನಿಲುಗಡೆ ಮಾಡಿದ್ದ ಐದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಬೆಂಗಳೂರು (ಆ.7) :  ದ್ವೇಷದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ಮನೆಯ ಎದುರು ನಿಲುಗಡೆ ಮಾಡಿದ್ದ ಐದು ದ್ವಿಚಕ್ರ ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟಿರುವ ಘಟನೆ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ವಸಂತನಗರದ ಮಾರಮ್ಮ ದೇವಸ್ಥಾನ ಬೀದಿಯ 8ನೇ ಕ್ರಾಸ್‌ ನಿವಾಸಿ ರಂಜಿತ್‌ ಮಂದನ್‌ ಮನೆ ಬಳಿ ಭಾನುವಾರ ಮುಂಜಾನೆ 5ರ ಸುಮಾರಿಗೆ ಈ ಘಟನೆ ನಡೆದಿದೆ. ಘಟನೆಯಲ್ಲಿ ರಂಜಿತ್‌ಗೆ ಸೇರಿ ಎರಡು ದ್ವಿಚಕ್ರ ವಾಹನಗಳು ಹಾಗೂ ಬಾಡಿಗೆದಾರರ ಮೂರು ಸೇರಿದಂತೆ ಒಟ್ಟು ಐದು ದ್ವಿಚಕ್ರ ವಾಹನಗಳು ಬೆಂಕಿಗಾಹುತಿಯಾಗಿವೆ. ಮನೆ ಮಾಲಿಕ ರಂಜಿತ್‌ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಘಟನೆ ಸಂಬಂಧ ನೆರೆ ಮನೆಯ ವಿನೋದ್‌ ಕುಮಾರ್‌ ಹಾಗೂ ಈತನ ಸ್ನೇಹಿತರಾದ ಕಮ್ಮನಹಳ್ಳಿಯ ಅರುಣ್‌ ಕುಮಾರ್‌ ಮತ್ತು ರೋಹಿತ್‌ನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.

ಕಲಬುರಗಿ: ಜೈಲಿನಲ್ಲಿರುವ ಗೆಳೆಯನಿಗೆ ಗಾಂಜಾ ಸರಬರಾಜು ಮಾಡಲು ಯತ್ನ, ಇಬ್ಬರು ವಶ

ಎರಡು ತಿಂಗಳ ಹಿಂದೆ ಕ್ಷುಲ್ಲಕ ವಿಚಾರಕ್ಕೆ ವಿನೋದ್‌ ಕುಮಾರ್‌ ಮತ್ತು ರಂಜಿತ್‌ ನಡುವೆ ಜಗಳವಾಗಿತ್ತು. ಆಗಿನಿಂದ ವಿನೋದ್‌ ದ್ವೇಷ ಸಾಧಿಸುತ್ತಿದ್ದ. ಭಾನುವಾರ ಮುಂಜಾನೆ ತನ್ನ ಸ್ನೇಹಿತರಾದ ಅರುಣ್‌ ಕುಮಾರ್‌ ಮತ್ತು ರೋಹಿತ್‌ ಸಹಾಯ ಪಡೆದು ಲೈಟರ್‌ ಬಳಸಿ, ರಂಜಿತ್‌ ಮನೆ ಎದುರು ನಿಲುಗಡೆ ಮಾಡಿದ್ದ ದ್ವಿಚಕ್ರ ವಾಹನಕ್ಕೆ ಬೆಂಕಿ ಹಚ್ಚಿ ಪರಾರಿಯಾಗಿದ್ದರು. ಈ ವೇಳೆ ಬೆಂಕಿ ಪಕ್ಕದಲ್ಲೇ ಇದ್ದ ಇನ್ನೂ ನಾಲ್ಕು ದ್ವಿಚಕ್ರ ವಾಹನಗಳಿಗೆ ಬೆಂಕಿ ವ್ಯಾಪಿಸಿ ಹೊತ್ತಿ ಉರಿದಿದೆ. ಈ ವೇಳೆ ಎಚ್ಚರಗೊಂಡ ರಂಜಿತ್‌ ಹಾಗೂ ಸ್ಥಳೀಯರು ಅಗ್ನಿಶಾಮಕ ಠಾಣೆಗೆ ಕರೆ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ್ದಾರೆ.

ಪೊಲೀಸರು ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪರಿಶೀಲಿಸಿ, ನೆರೆಮನೆಯ ವಿನೋದ್‌ ಕುಮಾರ್‌ ಹಾಗೂ ಆತನ ಇಬ್ಬರು ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಹೈಗ್ರೌಂಡ್‌್ಸ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪ್ರಾಪ್ತ ಹುಡ್ಗೀರ ಅಶ್ಲೀಲ ವಿಡಿಯೋಗಳಿಗಾಗಿ 13 ನಕಲಿ ಖಾತೆ ತೆರೆದ ಕಾಮುಕ: ಈತನ ಕೋಡ್‌ಗಳು ಹೀಗಿವೆ ನೋಡಿ