Asianet Suvarna News Asianet Suvarna News

ಅರ್ಜುನನ ಕೊಂದ ಕಾಡಾನೆಯ ಸೆರೆ ಹಿಡಿದು ಜನರ ಮುಂದೆ ನಿಲ್ಲಿಸ್ತೇವೆ: ಶಪಥ ಮಾಡಿದ ಮಾವುತ

ಕಾಡಾನೆ ಕಾರ್ಯಾಚರಣೆ ವೇಳೆ 8 ಬಾರಿ ದಸರಾ ಅಂಬಾರಿ ಹೊತ್ತ ಅರ್ಜುನ ಆನೆಯನ್ನು ಕೊಲೆಗೈದ ಕಾಡಾನೆಯನ್ನು ಸೆರೆ ಹಿಡಿದು ಜನರ ಮುಂದೆ ನಿಲ್ಲಿಸುತ್ತೇವೆ ಎಂದು ಮಾವುತರು ಶಪಥ ಮಾಡಿದ್ದಾರೆ.

Arjuna elephant mahout swear we are capture the forest elephant and placed in front of people sat
Author
First Published Dec 6, 2023, 4:13 PM IST

ಹಾಸನ (ಡಿ.06): ವಿಶ್ವ ವಿಖ್ಯಾತ ಮೈಸೂರು ದಸರಾ ಉತ್ಸವದ ಅಂಬಾರಿಯನ್ನು 8 ಬಾರಿ ಹೊತ್ತು ನಿವೃತ್ತಿ ಹೊಂದಿದ್ದ ಅರ್ಜುನ ಆನೆಯನ್ನು ಕಾಡಾನೆ ಕಾರ್ಯಾಚರಣೆಗೆ ಕರೆದೊಯ್ದಾಗ, ಕಾಡಾನೆ ದಾಳಿಗೆ ತುತ್ತಾಗಿ ಸಾವನ್ನಪ್ಪಿದೆ. ಕಾರ್ಯಾಚರಣೆ ವೇಳೆ ಅರ್ಜುನನ್ನು ಕೊಲೆಗೈದ ಕಾಡಾನೆಯನ್ನು ನಾವು ಹಿಡಿದು ಜನರ ಮುಂದೆ ತಂದು ನಿಲ್ಲಿಸುತ್ತೇವೆ ಎಂದು ಅರ್ಜುನ ಆನೆಯ ಮಾವುತರು ಶಪಥ ಮಾಡಿದ್ದಾರೆ.

ಕಾಡಾನೆ ಕಾರ್ಯಾಚರಣೆಯಲ್ಲಿ ವೀರಮರಣ ಹೊಂದಿದ ಅರ್ಜುನ ಆನೆಯ ಅಂತ್ಯಕ್ರಿಯೆ ನೆರವೇರಿಸಿದ ನಂತರ, ಮಾವುತರು ಕಾಡಾನೆಯನ್ನು ಸೆರೆ ಹಿಡಿದು ತಂದೇ ತರುತ್ತೇವೆ. ಅರಣ್ಯಾಧಿಕಾರಿಗಳೊಂದಿಗೆ ಕಾರ್ಯಾಚರಣೆಗೆ ಹೋಗುತ್ತೇವೆ ಎಂದು ಅರ್ಜುನ ಆನೆಯ ಮಾವುತರು ಶಪಥ ಮಾಡಿದ್ದಾರೆ. ಅರ್ಜುನನ್ನು ಕೊಂದ ಕಾಡಾನೆಯನ್ನು ಜನರ ಮುಂದೆ ಸೆರೆಹಿಡಿದು ತಂದೇ ತರ್ತೇವೆ ಎಂದು ಹಿರಿಯ ಮಾವುತ ಗುಂಡಣ್ಣ ಹೇಳಿದ್ದಾರೆ.

ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಅರ್ಜುನ ಆನೆಯನ್ನು ಕಳೆದುಕೊಂಡು ದುಃಖದಲ್ಲಿರುವ ಮಾವುತರಿಗೆ ಬಿಕ್ಕೋಡು ಕ್ಯಾಂಪ್‌ನಲ್ಲಿ ಸಾಂತ್ವನ ಹೇಳಲು ಬಂದಿದ್ದ ಅರಣ್ಯಾಧಿಕಾರಿಗಳೊಂದಿಗೆ ನೋವು ತೋಡಿಕೊಂಡು ಮಾವುತ ಗುಂಡಣ್ಣ, ನಾವು ಮತ್ತೊಮ್ಮೆ ಕಾರ್ಯಾಚರಣೆ ಸಿದ್ದ ಮಾಡುತ್ತೇವೆ ಎಂದು ಹೇಳಿದ್ದಾರೆ. ಅರ್ಜುನನ್ನ ಕಳೆದುಕೊಂಡು ಚಿಂತೆಯಾಗಿದೆ. ನಮಗೂ ನೋವಾಗಿದೆ, ಆದ್ರೆ ಮನಸ್ಸು ಗಟ್ಟಿಮಾಡಿಕೊಂಡಿದ್ದೇವೆ. ಯಾರೂ ಏನೂ ಮಾಡೋದಕ್ಕೆ ಆಗಲ್ಲ, ಮತ್ತೆ ಬರುತ್ತೇವೆ. ನಾವು ಅದನ್ನ ಹಿಡಿಯೋ ಆಸೆಯಿದೆ ಮತ್ತೆ ಇದೇ ಕ್ಯಾಂಪ್ ಗೆ ಬರ್ತೇವೆ. ಅದನ್ನ ಹಿಡಿದು ಜನರು ಅದನ್ನ ನೋಡಬೇಕು ಹಾಗೆ ನಾವು ಮಾಡ್ತೇವೆ ಎಂದು ಸಿಸಿಎಫ್ ರವಿಶಂಕರ್ ಹಾಗೂ ಡಿಎಫ್‌ಓ ಮೋಹನ್ ಮುಂದೆ ನೋವು ತೋಡಿಕೊಂಡಿದ್ದಾರೆ.

ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಸಿಎಫ್ ರವಿ ಶಂಕರ್ ಅವರು, ಈ ದಿನ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸಾಕಾನೆಗಳನ್ನು ವಾಪಾಸ್ ಕಳುಹಿಸುತ್ತಿದ್ದೇವೆ. 10 ದಿನ ಬಿಟ್ಟು ಮತ್ತೆ ಕಾರ್ಯಾಚರಣೆ ಮಾಡಲು ತೀರ್ಮಾನ ಮಾಡಿದ್ದೇವೆ. ಈಗಾಗಲೇ ಅರ್ಜುನ ಮರಣ ಹೊಂದಿರುವುದರಿಂದ ಎಲ್ಲಾ ಮಾವುತರು, ಕಾವಾಡಿಗಳು ನಮ್ಮ ಸಿಬ್ಬಂದಿ ದು:ಖದಲ್ಲಿದ್ದಾರೆ. ಅವರೆಲ್ಲರೂ ಸುಧಾರಿಸಿಕೊಳ್ಳಲಿ. ಮಾವುತರು, ಕಾವಾಡಿಗರು ದೂರದಿಂದ ಬಂದಿದ್ದಾರೆ, 15 ದಿನದಿಂದ ಮನೆ ಬಿಟ್ಟಿದ್ದಾರೆ. ಸ್ವಲ್ಪದಿನ ಸುಧಾರಿಸಿಕೊಂಡ ನಂತರ ಕಾರ್ಯಾಚರಣೆ ಶುರು ಮಾಡುತ್ತೇವೆ. ಕಾಡಿನಲ್ಲಿ ಆಗಿಂದಾಗ್ಗೆ ಉಪಟಳ ನೀಡುತ್ತಿದ್ದ 9 ಕಾಡಾನೆಗೆ ರೇಡಿಯೋ ಕಾಲರ್ ಮಾಡಬೇಕಿತ್ತು. ಈಗಾಗಲೇ 5 ಕಾಡಾನೆಗಳಿಗೆ ರೇಡಿಯೋ ಕಾಲರ್ ಹಾಕಲಾಗಿದೆ. ಖಂಡಿತ ಅದನ್ನು ಕಂಪ್ಲೀಟ್ ಮಾಡುತ್ತೇವೆ. 5 ಸಾಕಾನೆಗಳು ದುಬಾರೆ ಕ್ಯಾಂಪ್‌ಗೆ ಹೋಗುತ್ತವೆ ಎಂದು ಹೇಳಿದರು.

ಅರ್ಜುನನ ಸಾವು ಅನ್ಯಾಯ, ಅಂತ್ಯಕ್ರಿಯೆಯಲ್ಲಾದ್ರೂ ನ್ಯಾಯ ಕೊಡಿಸಿ ಎಂದವರ ಮೇಲೆ ಲಾಠಿ ಬೀಸಿದ ಪೊಲೀಸರು

ಕಾಡಾನೆ ದಾಳಿಗೆ ತುತ್ತಾಗಿದೆ ಎನ್ನಲಾದ ಅರ್ಜುನ ಆನೆಯ ಮರಣೋತ್ತರ ಪರೀಕ್ಷೆ ನಡೆಸದೆ ಅಂತ್ಯಕ್ರಿಯೆ ಮಾಡಲಾಗಿದೆ ಎಂಬುದು ಕೇವಲ ಆರೋಪವಾಗಿದೆ. ಆದರೆ, ಹಾಸನ ಪಶುವೈದ್ಯಕೀಯ ಕಾಲೇಜಿನ ಡಾ.ಗಿರೀಶ್ ಅವರ ತಂಡ ಬಂದು ಮರಣೋತ್ತರ ಪರೀಕ್ಷೆಯನ್ನು ಎಲ್ಲರ ಎದುರು ಮಾಡಿದ್ದಾರೆ. ಜನರ ಮುಂದೆಯೇ ಮರಣೋತ್ತರ ಪರೀಕ್ಷೆ ಮಾಡಿದ್ದಾರೆ. ಅದರಲ್ಲಿ ಬೇರೆ ಏನು ಇಲ್ಲ. 

ಅರ್ಜುನನ ಕಾಲಿಗೆ ಗುಂಡು ತಗುಲಿದ್ದರೂ ಮುಚ್ಚಿಡಲಾಯಿತೇ? 
ಅರ್ಜುನನ ಕಾಲಿಗೆ ಗುಂಡು ತಗುಲಿದರೂ ಪರೀಕ್ಷಿಸಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಆದರೆ, ಅಂತಹದ್ದು ಏನಾದರೂ ಇದ್ದರೆ ಮುಂದಿನ ತನಿಖೆ ಮಾಡ್ತಿವಿ. ಅದು ಏನು ಆಗಿರಲಿಲ್ಲ, ಮರಣೋತ್ತರ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ನಾಲ್ಕು ಕಾಲು ಹೊರಗಡೆ ಕಾಣುತ್ತಿತ್ತು. ವೈದ್ಯರು ಎಲ್ಲಾ ಚೆಕ್ ಮಾಡೇ ಪೋಸ್ಟ್ ಮಾರ್ಟಮ್ ಮಾಡಿದ್ದಾರೆ. ನಿಮಗೆ ಗೊತ್ತಿದೆ ಅದನ್ನು ಟರ್ನ್ ಮಾಡುವ ಪರಿಸ್ಥಿತಿ ಇತ್ತಾ.? ನೀವೇ ನೋಡಿದ್ದೀರಾ ಪರಿಸ್ಥಿತಿ ಏನಿತ್ತು ಅಂತ. ಪಶು ವೈದ್ಯರು ಯಾವ ತರ ಮಾಡಬೇಕು ಆ ರೀತಿ ಮಾಡಿ ಮುಗಿಸಿದ್ದಾರೆ. ಅದರಲ್ಲಿ ನಾವು ಹೋಗಿ ಇದು ಮಾಡಿ, ಅದು ಮಾಡಿ ಅಂತ ಹೇಳಲು ಆಗಲ್ಲ. ಅವರ ಸ್ಟಾಂಡರ್ಡ್ ಆಪರೇಷನ್ ಪ್ರಕಾರ ಯಾವ ರೀತಿ ಪೋಸ್ಟ್‌ಮಾರ್ಟಮ್ ಮಾಡಬೇಕು ಆ ರೀತಿ ಮಾಡಿದ್ದಾರೆ. ಸಾಕಾನೆ ಪ್ರಶಾಂತಗೆ ಅರವಳಿಕೆ ಚುಚ್ಚುಮದ್ದು ಹೊಡೆದ ವಿಚಾರ ಮುನ್ನೆಲೆಗೆ ಬಂದಿದೆ. ಮಾಧ್ಯಮ ಮತ್ತು ಜನರು ಏನು ಹೇಳುತ್ತಿದ್ದಾರೆ ಅದರ ಬಗ್ಗೆ ತನಿಖೆ ಮಾಡಿಸುತ್ತೇವೆ. ಅದು ಆಗಿದೆಯೋ, ಆಗಿಲ್ಲವೋ ಎಂಬುದನ್ನು ಮೊದಲು ಖಚಿತ ಪಡಿಸಿಕೊಳ್ಳಬೇಕಲ್ಲ. ಖಚಿತಪಡಿಸಿಕೊಂಡು ನಿಮಗೆ ಮಾಹಿತಿ ಕೊಡುತ್ತೇನೆ ಎಂದರು.

Follow Us:
Download App:
  • android
  • ios