ಮರುಪರೀಕ್ಷೆ ನಡೆಸದೆ ನೇಮಕ ಮಾಡಿ: ಎಸ್‌ಐ ಅಭ್ಯರ್ಥಿಗಳು

ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ತನಿಖೆ ನಡೆದು ತಪ್ಪಿತಸ್ಥರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸದೆ, ನೈತಿಕ ಹಾದಿಯಲ್ಲಿ ಆಯ್ಕೆಯಾದವರಿಗೆ ಷರತ್ತು ಬದ್ಧವಾಗಿಯಾದರೂ ನೇಮಕಾತಿ ಆದೇಶ ನೀಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. 

Appoint without re examination Says SI candidates gvd

ಬೆಂಗಳೂರು (ಆ.13): ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ (ಪಿಎಸ್‌ಐ) ನೇಮಕಾತಿ ಅಕ್ರಮದಲ್ಲಿ ತನಿಖೆ ನಡೆದು ತಪ್ಪಿತಸ್ಥರನ್ನು ಅನರ್ಹಗೊಳಿಸಿರುವ ಹಿನ್ನೆಲೆಯಲ್ಲಿ ಮರು ಪರೀಕ್ಷೆ ನಡೆಸದೆ, ನೈತಿಕ ಹಾದಿಯಲ್ಲಿ ಆಯ್ಕೆಯಾದವರಿಗೆ ಷರತ್ತು ಬದ್ಧವಾಗಿಯಾದರೂ ನೇಮಕಾತಿ ಆದೇಶ ನೀಡುವಂತೆ ಅಭ್ಯರ್ಥಿಗಳು ಒತ್ತಾಯಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಭ್ಯರ್ಥಿಗಳು, ಆಯ್ಕೆಯಾದ ಬಹುತೇಕ ಅಭ್ಯರ್ಥಿಗಳು ತಮ್ಮ ಹಿಂದಿನ ಉದ್ಯೋಗಕ್ಕೆ ರಾಜೀನಾಮೆ ನೀಡಿದ್ದಾರೆ. ಮರು ಪರೀಕ್ಷೆಯಲ್ಲಿ ಆಯ್ಕೆಯಾಗದಿದ್ದರೆ ಮಾಡದ ತಪ್ಪಿಗೆ ಶಿಕ್ಷೆ ನೀಡಿದಂತಾಗುತ್ತದೆ ಎಂದು ಅಳಲು ತೋಡಿಕೊಂಡರು.

ಆಯ್ಕೆಗೊಂಡಿದ್ದ ಅಭ್ಯರ್ಥಿ ಚಂದನ್‌ ಮಾತನಾಡಿ, ‘ಪಿಎಸ್‌ಐ ಹುದ್ದೆಗೆ ನೇಮಕವಾಗಿದ್ದ 545 ಅಭ್ಯರ್ಥಿಗಳಲ್ಲಿ ಈಗಾಗಲೇ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ 53 ಮಂದಿಯನ್ನು ಪೊಲೀಸ್‌ ಇಲಾಖೆ ಪರೀಕ್ಷೆಯಲ್ಲಿ ಭಾಗವಹಿಸದಂತೆ ಶಾಶ್ವತವಾಗಿ ಅನರ್ಹಗೊಳಿಸಲಾಗಿದೆ. ಜಾರಿಯಲ್ಲಿರುವ ಸಿಐಡಿ, ನ್ಯಾಯಾಂಗ ತನಿಖೆಗೆ ಸಂಪೂರ್ಣ ಸಹಕಾರ ನೀಡಲು ಸಿದ್ಧ. ಹೀಗಿರುವಾಗ ನ್ಯಾಯಯುತವಾಗಿ ಆಯ್ಕೆಯಾದ ನಮ್ಮನ್ನು ಸರ್ಕಾರ ಕಡೆಗಣಿಸಬಾರದು’ ಎಂದರು.

ಡಿಕೆಶಿ ರಾಜಕೀಯ ಭವಿಷ್ಯ ಹಾಳು ಮಾಡಿಕೊಳ್ಳಬೇಡಿ: ವಿ.ಸೋಮಣ್ಣ

ಮಾಜಿ ಸೈನಿಕ ಶ್ರೀಕಾಂತ್‌ ನಾಯಕ್‌ ಮಾತನಾಡಿ, ‘ಪಿಎಸ್‌ಐ ಹುದ್ದೆ ಕೇವಲ ಆಡಳಿತಾತ್ಮಕ ಹುದ್ದೆಯಲ್ಲ, ಇದಕ್ಕಾಗಿ ಫಿಟ್‌ನೆಸ್‌ ಕೂಡ ಮುಖ್ಯ. ಅತಂತ್ರ ಸ್ಥಿತಿಯಿಂದಾಗಿ ದೈಹಿಕ, ಮಾನಸಿಕವಾಗಿ ನಾವು ಕುಗ್ಗಿದ್ದೇವೆ. ಮರುಪರೀಕ್ಷೆಗೆ ಮತ್ತೆ ಸಮಯ, ಪರಿಶ್ರಮ ಬೇಕು. ಜೊತೆಗೆ ಅದೃಷ್ಟಕೂಡ ಕೈ ಹಿಡಿಯಬೇಕು’ ಎಂದರು. ಅಭ್ಯರ್ಥಿ ರಚನಾ ಮಾತನಾಡಿ, ‘132 ಮಹಿಳೆಯರು ಹುದ್ದೆಗೆ ಆಯ್ಕೆಯಾಗಿದ್ದು, ಬಹುತೇಕರು ವಿವಾಹಿತರು. ಹೀಗಾಗಿ ಪುನಃ ಮರುಪರೀಕ್ಷೆಗೆ ಸಿದ್ಧತೆ ನಡೆಸಿಕೊಳ್ಳುವುದು ಕಷ್ಟ. ಹೀಗಾಗಿ ಸರ್ಕಾರ ಮರುಪರೀಕ್ಷೆ ನಡೆಸುವ ನಿರ್ಧಾರಕ್ಕೆ ಬರಬಾರದು’ ಎಂದು ಆಗ್ರಹಿಸಿದರು.

ಗೃಹಲಕ್ಷ್ಮೀಗೆ ಅರ್ಜಿ ಸಲ್ಲಿಸಿದ್ದು ಹೆಂಡತಿ, ಫಲಾನುಭವಿ ಸತ್ತ ಗಂಡ!

‘ಇತರೆ ಇಲಾಖೆಗಳಲ್ಲಿ ಈ ರೀತಿ ಅಕ್ರಮವಾದಾಗ ಷರತ್ತು ಬದ್ಧವಾಗಿ ನೇಮಕಾತಿ ಆದೇಶ ನೀಡಲಾಗಿತ್ತು. ಅದೇ ರೀತಿ ಇಲ್ಲಿಯೂ ಅದನ್ನು ಅನುಸರಿಸಬೇಕು. ಇನ್ನು 53 ಮಂದಿಯನ್ನು ಅನರ್ಹಗೊಳಿಸಿರುವ ಕಾರಣದಿಂದ ಆಯ್ಕೆ ಪಟ್ಟಿಯನ್ನು ಪುನಃ ಬಿಡುಗಡೆ ಮಾಡಿ ಹಿಂದಿನ ರಾರ‍ಯಂಕ್‌ನಲ್ಲಿರುವ ಅಭ್ಯರ್ಥಿಗಳಿಗೆ ಅವಕಾಶ ನೀಡಿ ಅನ್ಯಾಯ ತಪ್ಪಿಸಬೇಕು’ ಎಂದು ಆಗ್ರಹಿಸಿದರು.

Latest Videos
Follow Us:
Download App:
  • android
  • ios