ಬೆಂಗಳೂರು, (ಜೂನ್.30): ಅಗಸರಿಗೆ ಮತ್ತು ಕ್ಷೌರಿಕರಿಗೆ  5 ಸಾವಿರ ರೂಪಾಯಿ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು ರಾಜ್ಯ ಸರ್ಕಾರ ವಿಸ್ತರಿಸಿದೆ.

ಕೊರೋನಾ ಲಾಕ್‌ಡೌನ್‌ ಹಿನ್ನೆಲೆ ಅಗಸರಿಗೆ ಮತ್ತು ಕ್ಷೌರಿಕರಿಗೆ ಪರಿಹಾರವಾಗಿ 5 ಸಾವಿರ ರೂಪಾಯಿಯನ್ನು ಬಿಎಸ್‌ ವೈ ಸರ್ಕಾರ ಘೋಷಿಸಿತ್ತು. ಈ ಸಹಾಯಧನ ಪಡೆಯಲು ಜೂನ್ 30ರೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬೇಕಿತ್ತು.

ಆದ್ರೆ, ಇದೀಗ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಅವಧಿಯನ್ನು  ಜೂನ್ 30 ರಿಂದ ಜುಲೈ 10ರ ವರೆಗೆ ವಿಸ್ತರಣೆ ಮಾಡಿದೆ. ಹೀಗಾಗಿ, ಅಗಸರಿಗೆ ಮತ್ತು ಕ್ಷೌರಿಕರ ಘಟಕಕ್ಕೆ ಇದು ನೆರವಾಗಲಿದೆ.

1610 ಕೋಟಿ ಪ್ಯಾಕೇಜ್: ಆಟೋ ರಿಕ್ಷಾ, ಕ್ಷೌರಿಕರಿಗೆ ವಿಶೇಷ ಪ್ಯಾಕೇಜ್ ಘೋಷಿಸಿದ ಸಿಎಂ!

ಕೊರೋನಾ ವೈರಸ್ ಲಾಕ್‌ಡೌನ್‌ನಿಂದ ಕಾರ್ಮಿಕ ವರ್ಗ ಸಂಕಷ್ಟಕ್ಕೆ ಸಿಲುಕಿತ್ತು. ಸುಮಾರು ಎರಡೂವರೆ ತಿಂಗಳು ಆರ್ಥಿಕ ಚಟುವಟಿಕೆ ಸ್ಥಗಿತಗೊಂಡಿದ್ದರಿಂದ ಶ್ರಮಿಕ ವರ್ಗ ಆದಾಯವಿಲ್ಲದೇ ಕಷ್ಟ ಅನುಭವಿಸಿದರು. ಈ ಹಿನ್ನೆಲೆ ರಾಜ್ಯ ಸರ್ಕಾರದಿಂದ ಆರ್ಥಿಕ ಪ್ಯಾಕೇಜ್ ಘೋಷಣೆಯಾಗಿತ್ತು. 

ಆಟೋ, ಟ್ಯಾಕ್ಸಿ ಚಾಲಕರು, ರೈತರು, ದಿನಗೂಲಿ ಕಾರ್ಮಿಕರು, ಅಗಸರು, ಕ್ಷೌರಿಕರು ಸೇರಿದಂತೆ ಹಲವು ಕ್ಷೇತ್ರದ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಸಹಾಯಧನ ಘೋಷಿಸಿತ್ತು.