ಪೌರತ್ವ ಕಾಯ್ದೆ ದೇಶದಾದ್ಯಂತ ತೀವ್ರ ಸಂಚಲನ ಮೂಡಿಸಿದೆ. ಒಂದೆಡೆ ಈ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕಾಯ್ದೆ ಬೆಂಬಲಿಸಿ ಮೆರವಣಿಗೆಗಳು ಆರಂಭವಾಗಿವೆ. ಹೀಗಿರುವಾಗ ಇಂದು ಸೋಮವಾರ ಪೌರತ್ವ ಕಾಯ್ದೆ ವಿರುದ್ಧ ಮುಸ್ಲಿಂ ಸಂಘಟನೆಗಳು ಈದ್ಗಾ ಮೈದಾನದಲ್ಲಿ ಶಾಂತಿಸಭೆ ಆಯೋಜಿಸಿವೆ. ಈ ಹಿನ್ನೆಲೆ ಬೆಂಗಳೂರಿನ ಹಲವು ಮಾರ್ಗಗಳಲ್ಲಿ ಸಂಚಾರ ಬಂದ್ ಆಗಿದ್ದು, ಮಾರ್ಗ ಬದಲಾವಣೆ ಮಾಡಲಾಗಿದೆ.

"

ಹೌದು ಪೌರತ್ವ ಕಾಯ್ದೆ ವಿರುದ್ಧ ಮುಸ್ಲಿಂ ಸಂಘಟನೆಗಳು ಬೆಂಗಳೂರಿನ ಖುದ್ದೂಸ್ ಸಹಾಬ್ ಈದ್ಗಾ ಮೈದಾನದಲ್ಲಿ ಶಾಂತಿಸಭೆಗೆ ಕರೆ ನೀಡಿದ್ದಾರೆ. ಈ ಶಾಂತಿಸಭೆಯಲ್ಲಿ 1 ಲಕ್ಷ ಮುಸ್ಲಿಮರು ಭಾಗಿಯಾಗಲಿದ್ದಾರೆ. ಈ ಬೃಹತ್ ಸಭೆ ಹಿನ್ನೆಲೆ ಬೆಂಗಳೂರಿನಅನೇಕ ಮಾರ್ಗಗಳಲ್ಲಿ ಸಂಚಾರ ನಿರ್ಬಂಧ ಮಾಡಲಾಗಿದೆ. ಅಲ್ಲದೇ ಹಲವು ಪ್ರದೇಶಗಳಲ್ಲಿ ಅಘೋಷಿತ ಬಂದ್ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವೆಡೆ ಟ್ರಾಫಿಕ್ ಜಾಂ್ ಉಂಟಾಗಿದೆ.

ಎಲ್ಲೆಲ್ಲಾ ಸಂಚಾರ ಮಾರ್ಗ ಬದಲು?

1. ಮಿಲ್ಲರ್ಸ್‌ ರಸ್ತೆ (ಕಂಟೋನ್ಮೆಂಟ್ ಜಂಕ್ಷನ್‌ನಿಂದ ಹೇನ್ಸ್ ಜಂಕ್ಷನ್ ರವರೆಗೆ) ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ.

2) ನಂದಿ ದುರ್ಗಾ ರಸ್ತೆ (ಹಜ್ ಕ್ಯಾಂಪ್‌ನಿಂದ ಜಯಮಹಲ್ ಜಂಕ್ಷನ್‌ವರೆಗೆ) ಸಾರ್ವಜನಿಕ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿರುತ್ತದೆ

ಈ ಮೇಲ್ಕಂಡ ಸಂಚಾರ ನಿರ್ಬಂಧ ಮಾರ್ಗಗಳಲ್ಲಿ ಸಂಚರಿಸುವವರು ಪರ್ಯಾಯ ಮಾರ್ಗವನ್ನು ಬಳಸಲು ಸೂಚಿಸಲಾಗಿದೆ.

* ಸುಲ್ತಾನ್‌ಪಾಳ್ಯ ಕಡೆಯಿಂದ ದೂರದರ್ಶನ ಕೇಂದ್ರ ಮತ್ತು ಕಂಟೋನ್ಮೆಂಟ್ ರೈಲು ನಿಲ್ದಾಣದ ಕಡೆಗೆ ಹಾಗೂ ಬೆಂಗಳೂರು ನಗರದ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ದಿಣ್ಣೂರು ಮುಖ್ಯರಸ್ತೆ-ಆರ್.ಟಿ.ನಗರ ಪೊಲೀಸ್ ಠಾಣೆ ಜಂಕ್ಷನ್, ಎಡತಿರುವು, ಆರ್.ಟಿ.ನಗರ ಮುಖ್ಯರಸ್ತೆ, ಗುಂಡುರಾವ್ ಮನೆ ಜಂಕ್ಷನ್,  ಬಲತಿರುವು, ಬೆಂಗಳೂರು ಬಳ್ಳಾರಿ ರಸ್ತೆ ಎಡತಿರುವು (ಮೇಖ್ರಿ ಸರ್ಕಲ್ ಅಂಡರ್‌ಪಾಸ್ ಮೂಲಕ ಬೆಂಗಳೂರು ನಗರದ ಕಡೆಗೆ
ಸಂಚರಿಸಬಹುದು).

* ಕಂಟೋನ್ಮೆಂಟ್ ರೈಲು ನಿಲ್ದಾಣ ಕಡೆಯಿಂದ ಆರ್.ಟಿ.ನಗರ-ಸುಲ್ತಾನ್ ಪಾಳ್ಯ- ಕಾವಲ್‌ ಬೈರಸಂದ್ರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಹಳೆಯ ಉದಯ ಟಿ.ವಿ.ಜಂಕ್ಷನ್ ಎಡ ತಿರುವು ಕೊಡವ ಸಮಾಜ-ಮೌಂಟ್ ಕಾರ್ಮಲ್ ಜಂಕ್ಷನ್ ಬಲ ತಿರುವು ಪಡೆದು ಪ್ಯಾಲೆಸ್ ಗುಟ್ಟಹಳ್ಳಿ ಮೂಲಕ ಚಲಿಸುವುದು.

* ಯಶವಂತಪುರ ಕಡೆಯಿಂದ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಮೇಖ್ರಿವೃತ್ತ-ಬಲ ತಿರುವು-ಬೆಂಗಳೂರು ಬಳ್ಳಾರಿ ರಸ್ತೆ-ಪ್ಯಾಲೆಸ್ ಗುಟ್ಟಹಳ್ಳಿ ಜಂಕ್ಷನ್‌ಎಡತಿರುವು ಮೂಲಕ ಸಂಚರಿಸುವುದು.

* ಯಲಹಂಕ ಕಡೆಯಿಂದ ಆರ್.ಟಿ.ನಗರದ ಮೂಲಕ ಶಿವಾಜಿನಗರ ಕಡೆಗೆ ಸಂಚರಿಸುವ ವಾಹನಗಳು ಸಂಚರಿಸಬೇಕಾದ ಮಾರ್ಗಗಳು: ಹೆಬ್ಬಾಳ ಪಿ.ಎಸ್-ಬೆಂಗಳೂರು ಬಳ್ಳಾರಿ ರಸ್ತೆ-ಮೇಖ್ರಿ ಸರ್ಕಲ್-ಪ್ಯಾಲೆಸ್ ಗುಟ್ಟಹಳ್ಳಿ ಜಂಕ್ಷನ್‌ಎಡತಿರುವು ಮೂಲಕ ಸಂಚರಿಸಬಹುದು. 

ಎಲ್ಲೆಲ್ಲಿ ಟ್ರಾಫಿಕ್ ಜಾಮ್, ಬದಲಿ ಮಾರ್ಗ ಯಾವುದು? ಸಂಪೂರ್ಣ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ