ಬೆಂಗಳೂರು(ಆ.15): ಭೀಕರ ಪ್ರವಾಹದಿಂದ ನಲುಗಿರುವ ಕರುನಾಡಿನಲ್ಲಿ ಸದ್ಯ ಪರಿಹಾರ ಕಾರ್ಯಗಳು ಭರದಿಂದ ಸಾಗಿವೆ. ಮಳೆ ಮತ್ತು ಪ್ರವಾಹದ ಪ್ರಮಾಣ ತಗ್ಗಿರುವುದರಿಂದ ಪರಿಹಾರ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಡಿ ಇಟ್ಟಿದೆ.

ಇನ್ನು ಪ್ರವಾಹದಿಂದ ನಲುಗಿರುವ ಪ್ರದೇಶಗಳಿಗೆ ಸರ್ಕಾರ ಮಾತ್ರವಲ್ಲದೇ ವಿವಿಧ ಸಂಘ ಸಂಸ್ಥೆಗಳು, ಖಾಸಗಿ ಕಂಪನಿಗಳು ನೆರವಿನ ಹಸ್ತ ಚಾಚಿವೆ.

ಅದರಂತೆ ಬೆಂಗಳೂರಿನ ಆಂಟರೀಸ್ ಸಿಸ್ಟಮ್ ಲಿಮಿಟೆಡ್ ಸಂಸ್ಥೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 5 ಲಕ್ಷ ರೂ. ಪರಿಹಾರ ಧನ ನೀಡುವ ಮೂಲಕ ನೆರೆ ಸಂತ್ರಸ್ತರ ನೆರವಿಗೆ ಧಾವಿಸಿದೆ. 


ಬೆಂಗಳೂರಿನಲ್ಲಿ ಇಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾದ ಆಂಟರೀಸ್ ಸಿಸ್ಟಮ್ ಲಿಮಿಟೆಡ್ ಸಂಸ್ಥೆ ಸಿಬ್ಬಂದಿ 5 ಲಕ್ಷ ರೂ. ಮೌಲ್ಯದ ಪರಿಹಾರ ಚೆಕ್‌ನ್ನು ನೀಡಿದರು.

ಈ ಸಂಧರ್ಭದಲ್ಲಿ ಸಂಸ್ಥೆಯ ವಿನಯ್ ಬಿ.ಪಿ, ಹರ್ಷದೇವ್ ಬಿ.ಜಿ, ಶ್ರೀನಿವಾಸ್ ಜಿ, ರುಕ್ಮಿಣಿ ಎಸ್, ಸೀತಾರಾಮ್ ಭಟ್, ಅನೂಪ್, ಹರಿಣಿ ವಿ. ಉಪಸ್ಥಿತರಿದ್ದರು.