ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳು ತತ್ತರಿಸಿದ್ದು. ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ವಾತಾವರಣದಲ್ಲಿ ತಪಮಾನ ಕಡಿಮೆಯಾಗಿ ತೀವ್ರ ಶೀತಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ.

ಬೆಂಗಳೂರು (ಡಿ.12) : ಮಾಂಡೌಸ್ ಚಂಡಮಾರುತದಿಂದಾಗಿ ತಮಿಳುನಾಡು, ಕೇರಳ, ಆಂಧ್ರಪ್ರದೇಶ ರಾಜ್ಯಗಳು ತತ್ತರಿಸಿದ್ದು. ಚಂಡಮಾರುತದ ಎಫೆಕ್ಟ್ ಕರ್ನಾಟಕಕ್ಕೂ ತಟ್ಟಿದೆ. ಕಳೆದ ವಾರದಿಂದ ಬೆಂಗಳೂರು ಸೇರಿದಂತೆ ಹಲವೆಡೆ ನಿರಂತರ ಮಳೆಯಾಗುತ್ತಿದ್ದು, ವಾತಾವರಣದಲ್ಲಿ ತಾಪಮಾನ ಕಡಿಮೆಯಾಗಿ ತೀವ್ರ ಶೀತಗಾಳಿಗೆ ಜನರು ತತ್ತರಿಸಿ ಹೋಗಿದ್ದಾರೆ.

ಪ್ರಸ್ತುತ ಮಾಂಡೋಸ್ ಚಂಡಮಾರುತ ಹಿನ್ನೆಲೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಸಾಧಾರಣದಿಂದ, ಭಾರೀ ಪ್ರಮಾಣದಲ್ಲಿ ಮಳೆ, ಶೀತ ಗಾಳಿ ಹಾಗೂ ಅತಿ ಕಡಿಮೆ ತಾಪಮಾನವು ವರದಿಯಾಗಿದ್ದು, ಈ ಪರಿಸ್ಥಿತಿಯು ಇನ್ನೂ ಅನೇಕ ದಿನಗಳು ಮುಂದುವರಿಯುವ ಸಾಧ್ಯತೆಯಿದ್ದು, ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳಕೊಲ್ಲಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. 

Cyclone Mandous ; ಮಾಂಡೌಸ್ ಚಂಡಮಾರುತ ಎಫೆಕ್ಟ್; ಮಲೆನಾಡು ಗಡ ಗಡ !

ಈ ಹಿನ್ನೆಲೆಯಲ್ಲಿ ಮುಂಬರುವ ಚಳಿಗಾಲದ ದಿನಗಳಲ್ಲಿ ಸಾರ್ವಜನಿಕರು, ಮಕ್ಕಳು (ನವಜಾತ ಶಿಶುಗಳು ಸೇರಿದಂತೆ) ಗರ್ಭಿಣಿಯರು, ವೃದ್ಧರು, ವಿಶೇಷವಾಗಿ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಎಚ್ಚರಿಕೆಯಿಂದ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಆರೋಗ್ಯ ಮತ್ತು ಕುಟುಂಬ ಇಲಾಖೆ ಸಾರ್ವಜನಿಕರಿಗೆ ಕೆಲವು ಸಲಹೆಗಳನ್ನು ನೀಡಿದೆ. 

ಏನು ಮಾಡಬೇಕು?

  • ಯಾವಾಗಲೂ ಬೆಚ್ಚಗಿನ ನೀರು, ಸೂಪ್‌ಗಳನ್ನು ಕುಡಿಯಿರಿ
  • ಸುಲಭವಾಗಿ ಜೀರ್ಣವಾಗುವ ಹಾಗೂ ಬಿಸಿಯಾದ ಆಹಾರ ಪದಾರ್ಥಗಳನ್ನು ಸೇವಿಸಿ.
  • ಸ್ವೆಟರ್, ಸಾಕ್ಸ್ ಹಾಗೂ ಕೈಗವಸುಗಳನ್ನು ಧರಿಸಿ ಹಾಗೂ ಮನೆಯ ಒಳಗಿರುವಾಗಲೂ ಬೆಚ್ಚಗಿರುವುದು ಉತ್ತಮ.
  • ಬಿಸಿ ನೀರಿನಿಂದ ಸ್ನಾನ ಮಾಡುವುದು
  • ಅನಗತ್ಯವಾಗಿ ಹೊರಗೆ ಹೊರಡುವುದು ತಪ್ಪಿಸಿ.
  • ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಿ ಅಥವಾ ಸ್ಕಾರ್ಫ್ ಧರಿಸಿ. 
  • ಹೊರಗಡೆ ಹೋಗಲೇಬೇಕಾದಲ್ಲಿ ಮಾಸ್ಕ್ಕ ಧರಿಸಿ
  • ನೆಗಡಿ, ಕೆಮ್ಮು, ಜ್ವರದ ಲಕ್ಷಣಗಳಿರುವವರಿಂದ ದೂರ ಇರಿ.
  • ಮೊಣಕೈ ಒಳಗೆ ಸೀನುವುದು, ಕೆಮ್ಮುವುದು ಅಥವಾ ಕೆಮ್ಮುವಾಗ ಟಿಶ್ಯೂ ಪೇಪರ್ ಕರವಸ್ತ್ರ ಉಪಯೋಗಿಸಿ.
  • ಕೈಗಳನ್ನು ಆಗಾಗ ನೀರು, ಸೋಪಿನೊಂದಿಗೆ ತೊಳೆಯಿರಿ.
  • ಜ್ವರ, ಫ್ಲೂ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರ ಸಲಹೆಯನ್ನು ಪಡೆಯಿರಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ಮಾಡಬಾರದು. ಸ್ವಯಂ ವೈದ್ಯಪದ್ಧತಿ ಅನುಸರಿಸಬಾರದು.

ಯಾವುದನ್ನು ಮಾಡಬಾರದು?

  • ತಣ್ಣಗಿನ ಪಾನೀಯ, ಐಸ್‌ಕ್ರೀಂನ್ನು ಸೇವಿಸಬಾರದು.
  • ರೆಫ್ರಿಜರೇಟರ್‌ನ ಅಥವಾ ತಣ್ಣಗಿನ ನೀರನ್ನು ಕುಡಿಯಬಾರದು.
  • ಮಳೆಯಲ್ಲಿ ನೆನೆಯುವುದು, ಶೀತಗಾಳಿಗೆ ಮೈಯೊಡ್ಡುವುದನ್ನು ತಪ್ಪಿಸಬೇಕು.
  • ಪ್ರವಾಸಗಳನ್ನು ಆದಷ್ಟು ತಪ್ಪಿಸಿ, ಮನೆಯಲ್ಲೇ ಇರಿ.
  • ಮಸಲಾ ಪದಾರ್ಥ ಅಥವಾ ಜಂಕ್‌ಫುಡ್ ಸೇವನೆ ಬೇಡ.

ಈ ಸಮಯದಲ್ಲಿ ಆರೋಗ್ಯದಲ್ಲಿ ಏರುಪೇರು ಆದಲ್ಲಿ ತಮ್ಮ ವ್ಯಾಪ್ತಿಯಲ್ಲಿನ ಆರೋಗ್ಯ ಕೇಂದ್ರದಲ್ಲಿ ತಪಾಸಣೆ ಮಾಡಿಸಿಕೊಳ್ಳಲು ಸಲಹೆ ನೀಡಿದೆ.

ಮತ್ತೊಂದು ಚಂಡಮಾರುತ!

ಹೌದು, ಮಾಂಡೌಸ್ ಚಂಡಮಾರುತಕ್ಕೆ ತತ್ತರಿಸಿರುವ ರಾಜ್ಯಕ್ಕೆ ಮತ್ತೊಂದು ಆತಂಕ ಎದುರಾಗಿದೆ. ದಕ್ಷಿಣ ಅಂಡಮಾನ್ ಸಮುದ್ರದಲ್ಲಿ ಮತ್ತೊಂದು ಚಂಡಮಾರುತ ಪರಿಚಲನೆ ರೂಪುಗಳ್ಳೊವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಚಂಡಮಾರುತ ಕೂಡ ಭಾರತದ ಕರಾವಳಿಯಿಂದ ಪಶ್ಚಿಮ ಕಡೆಗೆ ಚಲಿಸುವ ಸಾಧ್ಯತೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 

ಉಳ್ಳಾಲ: ಮ್ಯಾಂಡಸ್‌ ಚಂಡಮಾರುತ, ಪ್ರಕ್ಷುಬ್ಧ ಸಮುದ್ರಕ್ಕೆ ಇಳಿದ ವ್ಯಕ್ತಿ ನೀರುಪಾಲು

ಹೊಸ ಚಂಡಮಾರುತದಿಂದ ತಮಿಳುನಾಡು, ಕೇರಳದಲ್ಲಿ ಮತ್ತಷ್ಟು ಭೀಕರ ಮಳೆ ಸುರಿಸಲಿದ್ದು ಈ ಚಂಡಮಾರುತವು ಡಿಸೆಂಬರ್ 14, 15ರಂದು ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಶುರುವಾಗಿ ವ್ಯಾಪಕ ಮಳೆಯಾಗಲಿದೆ. ಕರ್ನಾಟಕ-ಕರಾವಳಿಯಲ್ಲಿ ಗಂಟೆಗೆ 55 ಕಿಮೀ ವೇಗದಲ್ಲಿ ಗಾಳಿ ಬೀಸಲಿದ್ದು ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.