Asianet Suvarna News Asianet Suvarna News

ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ; 50 ಕ್ಕೂ ಅಧಿಕ ಬಸ್‌ಗಳು ಸುಟ್ಟು ಭಸ್ಮ!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ. ಖಾಸಗಿ ಬಸ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಕಾಣಿಸಿಕೊಂಡಿರುವ ಬೆಂಕಿ. ಪಾರ್ಕಿಂಗ್ ಮಾಡಿದ್ದ ಬಸ್ ಗಳಿಗೂ ವ್ಯಾಪಿಸುತ್ತಿರುವ ಬೆಂಕಿಯ ಕೆನ್ನಾಲಿಗೆ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡು.

Another fire accident in Bangalore; Bus that burned at bengaluru rav
Author
First Published Oct 30, 2023, 12:57 PM IST

ಬೆಂಗಳೂರು (ಅ.30) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಭಾರೀ ಅಗ್ನಿ ಅವಘಡ ಸಂಭವಿಸಿದ ಘಟನೆ ವೀರಭದ್ರ ನಗರದಲ್ಲಿ ನಡೆದಿದೆ.

ಖಾಸಗಿ ಬಸ್ ಗಳ ಪಾರ್ಕಿಂಗ್ ಸ್ಥಳದಲ್ಲಿ ಕಾಣಿಸಿಕೊಂಡಿರುವ ಬೆಂಕಿ. ಶಾರ್ಟ್ ಸೆರ್ಕ್ಯೂಟ್‌ನಿಂದ ಹೊತ್ತಿದ ಕಿಡಿ.  ಪಾರ್ಕಿಂಗ್ ಮಾಡಿದ್ದ ಬಸ್ ಗಳಿಗೂ ವ್ಯಾಪಿಸುತ್ತಿರುವ ಬೆಂಕಿಯ ಕೆನ್ನಾಲಿಗೆ.  ಸುಮಾರು 50ಕ್ಕೂ ಅಧಿಕ ಬಸ್‌ಗಳು ಸುಟ್ಟು ಭಸ್ಮ. ಘಟನ ಸ್ಥಳಕ್ಕೆ 5 ಅಗ್ನಿಶಾಮಕ ವಾಹನ, ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರೂ ಸುತ್ತಲು ಪ್ರದೇಶಗಳಿಗೂ ಹಬ್ಬಿದ ಹೊಗೆ. ಇನ್ನೂ ಆರದ ಬೆಂಕಿ. ಸುತ್ತಮುತ್ತಲ ಮನೆ, ಅಂಗಡಿಮುಂಗಟ್ಟಗಳಿಗೆ ವ್ಯಾಪಿಸುವ ಆತಂಕ.

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಾಲು ಸಾಲು ಅಗ್ನಿ ಅವಘಡಗಳು. ಕಳೆದ ತಿಂಗಳಷ್ಟೇ ಅತ್ತಿಬೆಲೆಯಲ್ಲಿ ಪಟಾಕಿ ಗೋಡೌನ್ ಬೆಂಕಿ, 17 ಸಾವು., ವಿಜಯನಗರದಲ್ಲಿ ಅಗರಬತ್ತಿ ಫ್ಯಾಕ್ಟರಿಗೆ ಬೆಂಕಿ ಎಂಟು ಬೈಕ್ ಭಸ್ಮ, ಓರ್ವನಿಗೆ ಗಾಯ., ಕೆಂಗೇರಿಯಲ್ಲಿ ನಡೆದಿದ್ದ ಮತ್ತೊಂದು ಅಗ್ನಿ ಅವಘಡ. ಕೋರಮಂಗಲದ ಕೆಫೆ ನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಿಂದ ಸಂಪೂರ್ಣ ಸುಟ್ಟು ಭಸ್ಮವಾದ ರೆಸ್ಟೋರೆಂಟ್. ಇದೀಗ ಖಾಸಗಿ ಬಸ್‌ಗಳಿಗೆ ಬೆಂಕಿ ತಗುಲಿ ಮತ್ತೊಂದು ಅವಘಡ. ಪದೇಪದೆ ಬೆಂಕಿ ಅವಘಡದಿಂದ ಬೆಚ್ಚಿಬಿದ್ದಿರೋ ಬೆಂಗಳೂರಿನ ಜನರು. 

ಅಗ್ನಿದುರಂತವಾದ್ರೂ ಎಚ್ಚೆತ್ತುಕೊಳ್ಳದ ಬಿಬಿಎಂಪಿ!

Follow Us:
Download App:
  • android
  • ios